Friday, March 29, 2024

Latest Posts

ವಾಟ್ಸಪ್ ನಲ್ಲಿ ಮತ್ತೆ ಪಡೆಯಬಹುದು ಡಿಲೀಟೆಡ್ ಮೆಸೇಜ್…!

- Advertisement -

watsapp:

ಕಳೆದ ಕೆಲವು ತಿಂಗಳುಗಳಿಂದಂತೂ ಒಂದರ ಹಿಂದೆ ಒಂದರಂತೆ ವಿನೂತನ ಅಪ್ಡೇಟ್​ ಅನ್ನು ಪರಿಚಯಿಸುತ್ತಿದೆ ವಾಟ್ಸ್ಯಾಪ್. ಇತ್ತೀಚೆಗಷ್ಟೆ ಡಿಲೀಟ್ ಫಾರ್ ಎವರಿವನ್ (Delete For Everyone) ಆಯ್ಕೆಯಲ್ಲಿ ಸಮಯದ ಮಿತಿಯನ್ನು ಹೆಚ್ಚಿಸಿತ್ತು. ಇದೀಗ ಇದರಲ್ಲಿ ಮತ್ತೊಂದು ಹೊಸ ಆಯ್ಕೆಯನ್ನು ನೀಡುವ ಬಗ್ಗೆ ತಿಳಿಸಿದೆ.ಇದರ ಪ್ರಕಾರ ವಾಟ್ಸ್​ಆ್ಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ ಅನ್ನು ರಿಕವರಿ ಮಾಡಬಹುದಂತೆ.

ಈ ಬಗ್ಗೆ ವಾಟ್ಸ್​ಆ್ಯಪ್ ​ಬೇಟಾಇನ್​ಫೊ ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಈಗ ನೀವು ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಟ್ವಿಟ್ ರೀಟ್ವೀಟ್ ಮಾಡಿದ್ದಕ್ಕಾಗಿ ಸೌದಿ ಮಹಿಳೆ ಜೈಲು ಪಾಲು

- Advertisement -

Latest Posts

Don't Miss