Chithradurga News: ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಸಮೀಪದ ಸರ್ಕಾರಿ ಪ್ರೌಢಶಾಲೆ ರೇಖಲಗೆರೆ ಲಂಬಾಣಿಹಟ್ಟಿ ಯ ವಿಜ್ಞಾನ ಶಿಕ್ಷಕ ಕೆ. ಟಿ ನಾಗಭೂಷಣ್ ಇವರು ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ಪಡೆದಿದ್ದಾರೆ. ದಿನಾಂಕ:8-10-2023 ಭಾನುವಾರದಂದು ಬೆಂಗಳೂರಿನ ಚಾಮರಾಜ ಪೇಟೆಯ ಅಭಿನವ್ ವಿಹಾರ ಭವನದಲ್ಲಿ ನಡೆದ ಇಂಟರ್ ನ್ಯಾಷನಲ್ ರೋಟರಿಯ 20 ರೋಟರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚಿಗಷ್ಟೇ ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿದ್ದ ಇವರನ್ನು ಬೆಂಗಳೂರಿನ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆಯು ಇವರ ಪ್ರಾಮಾಣಿಕ ಹಾಗೂ ಸೃಜನಾತ್ಮಕ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ 2023 ನೇ ವರ್ಷದ ರಾಷ್ಟ್ರ ನಿರ್ಮಾತೃ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ MLC ಪುಟ್ಟಣ್ಣ ಹಾಗೂ ನಿವೃತ್ತ ಗವರ್ನರ್ ಆದ ಉದಯ ಕುಮಾರ್ ಭಾಸ್ಕರ್, ಶಿಕ್ಷಣ ಇಲಾಖೆಯ ಹಿರಿಯ ಕಾರ್ಯಕ್ರಮ ಅಧಿಕಾರಿ ಶ್ರಿ ರಮೇಶ್ ಸರ್ ಹಾಗೂ ಚಲನ ಚಿತ್ರ ನಟ ಜೆ.ಬಿ.ರೆಡ್ಡಿ ,ರೋಟರಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಂತಾದ ಗಣ್ಯರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು. ಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದ ನಾಗಭೂಷಣ್ ರವರನ್ನು ಜಿಲ್ಲೆಯ ಉಪನಿರ್ದೇಶಕ ಶ್ರೀ ರವಿಶಂಕರ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸುರೇಶ್ ಕೆ.ಎಸ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್, ಎಸ್ ಡಿ ಎಂ ಸಿ ಅಧ್ಯಕ್ಷ ಜಯಣ್ಣ,ಉಪಾಧ್ಯಕ್ಷ ಯಾದು ನಾಯ್ಕ, ಶಾಲಾ ಸಿಬ್ಬಂದಿ, ಊರಿನ ಗ್ರಾಮಸ್ಥರು, ಯುವಕರು,ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Basavaraj Bommai : ಹುಬ್ಬಳ್ಳಿ : ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
KMF-24 : ಮಹಾನಗರ ಪಾಲಿಕೆಯ ಸಾಧನೆ : ಕೆಎಂಎಫ್-24ರಲ್ಲಿ 3ನೇ ಸ್ಥಾನ..!