LATEST NEWS:
ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ತನ್ನ ಅಪ್ರತಿಮ ಬ್ರಾಂಡ್ ಎನಿಸಿದ ʻಸ್ಕಾರ್ಪಿಯೋʼದ ಹೊಸ ರೂಪವಾದ ʻಸ್ಕಾರ್ಪಿಯೋ ಕ್ಲಾಸಿಕ್ʼನ ಹೊಸ ಆವೃತ್ತಿಗಳ ಬೆಲೆಗಳನ್ನು ಘೋಷಿಸಿದೆ. ತಾಜಾ ವಿನ್ಯಾಸ, ಸಮಕಾಲೀನ ಒಳಾಂಗಣಗಳು, ಬಿಲ್ಟ್-ಇನ್ ತಂತ್ರಜ್ಞಾನ ಮತ್ತು ಹೊಸ ಶಕ್ತಿಶಾಲಿ ಎಂಜಿನ್ ಹೊಂದಿರುವ ದಿಟ್ಟ ಮತ್ತು ನೈಜ ʻಎಸ್‌ಯುವಿʼಯು ʻಕ್ಲಾಸಿಕ್ ಎಸ್ʼ ಮತ್ತು ʻಕ್ಲಾಸಿಕ್ ಎಸ್11ʼ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿರುತ್ತದೆ ಮತ್ತು ಇದು ₹ 11.99 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ʻಸ್ಕಾರ್ಪಿಯೋʼ ಬ್ರಾಂಡ್ ತನ್ನ ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾಲಾನಂತರದಲ್ಲಿ ವಿಕಸನಗೊಂಡಿದೆ.
ಉತ್ತಮ, ದಿಟ್ಟ, ಶಕ್ತಿಶಾಲಿ ಮತ್ತು ಸಮರ್ಥವಾದ ನೈಜ ʻಎಸ್‌ಯುವಿʼಯನ್ನು ಹುಡುಕುವ ಉತ್ಸಾಹಿಗಳ ಪಾಲಿಗೆ ʻಸ್ಕಾರ್ಪಿಯೋʼ ಜನಪ್ರಿಯ ಆಯ್ಕೆಯಾಗಿ ಉಳಿದಿದೆ. ʻಸ್ಕಾರ್ಪಿಯೋ ಕ್ಲಾಸಿಕ್ʼ ತನ್ನ ವಿಶಿಷ್ಟ ವಿನ್ಯಾಸ, ತಪ್ಪಿಸಿಲಾಗದ ಉಪಸ್ಥಿತಿ ಮತ್ತು ಶಕ್ತಿಯುತ ಕಾರ್ಯಕ್ಷಮತೆಯ ಗುಣಲಕ್ಷಣಗಳ ಪ್ರದರ್ಶನವನ್ನು ಮುಂದುವರಿಸುತ್ತದೆ.ಗ್ರಾಹಕರ ಪಾಲಿನ ಅಚ್ಚು ಮೆಚ್ಚಿನ ಸ್ಕಾರ್ಪಿಯೋ ಕಾರು ಇದೀಗ ಮತ್ತೊಂದು ಹೊಸ ಅವತಾರದಲ್ಲಿ ಉತ್ತಮ ಗುಣಲಕ್ಷಣಗಳಿಂದ ಪಾದರ್ಪಣೆಗೊಂಡಿರುವುದು ಸ್ಕಾರ್ಪಿಯೋ ಪ್ರಿಯರಿಗೆ ಸಂತಸದ ವಿಚಾರ.
ರಾಜ್ಯದಲ್ಲಿ ಶೀಘ್ರವೇ ಡಿಸೈನ್ ನೀತಿ, ಬಿಟಿಎಸ್ ಜತೆಯಲ್ಲೇ `ಬೆಂಗಳೂರು ಡಿಸೈನ್ ಫೆಸ್ಟಿವಲ್’ ಆಯೋಜನೆ – ಅಶ್ವತ್ಥನಾರಾಯಣ




