Friday, July 4, 2025

Latest Posts

‘ರಾಜ್ಯದ ಎಲ್ಲ ಪಂಚಾಯತ್ ಅಧಿಕಾರಿಗಳಿಗೆ ಭದ್ರತೆ ನೀಡಬೇಕು’

- Advertisement -

Dharwad News: ಧಾರವಾಡ: ಯರಿಕೊಪ್ಪ ಗ್ರಾಂ. ಪಂ, ಪಿಡಿಓ ಆತ್ಮಹತ್ಯೆ ಯತ್ನ ಪ್ರಕರಣ ಹಿನ್ನೆಲೆ, ರಾಜ್ಯ ಅಧ್ಯಕ್ಷ ರಾಜು ವಾರದ ಅವರ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲಾಗಿದೆ.

ರಾಜ್ಯ ಪಂಚಾಯತ್ ಅಭಿವೃದ್ಧಿ ಕ್ಷೇಮಾಭಿವೃದ್ಧಿ ಸಂಘದವರು, ನಗರದ ಜಿಲ್ಲಾ ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ನಾಗರಾಜ ಗಿನಿಮಾವಲೆ ಅವರ ಆತ್ಮಹತ್ಯೆ ಯತ್ನಕ್ಕೆ ಕಾರಣರಾದದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.  ನಕಲಿ ಆರ್ ಟಿ ಆಯ್ ಕಾರ್ಯಕರ್ತರನ್ನು ಬಂಧಿಸಬೇಕು. ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಶಿಕ್ಷೆಯಾಗುವವರೆಗು ಹೋರಾಟ ಮುಂದುವರೆಸೋದಾಗಿ ಹೇಳಿದ್ದಾರೆ.

ನಾಳೆಯಿಂದ ಬೇರೆ ಜಿಲ್ಲೆಯಿಂದ ಪಿಡಿಓಗಳಿಂದ ಹೋರಾಟ ನಡೆಯಲಿದ್ದು, ಧಾರವಾಡಕ್ಕೆ ಬಂದು ಇಲ್ಲಿ ಭಾಗವಹಿಸಿ, ನಂತರ ಅವರ ಜಿಲ್ಲೆಯಲ್ಲಿ ಹೋರಾಟ ಮಾಡಲಾಗುತ್ತದೆ. ಕಿರುಕುಳ ಕೊಟ್ಟ ಕಾರ್ಯಕರ್ತನನ್ನು ಬಂಧಿಸಲು ಪೋಲಿಸ್ ಇಲಾಖೆ ವಿಫಲವಾಗಿದೆ. ರಾಜ್ಯದ ಎಲ್ಲ ಪಂಚಾಯತ್ ಅಧಿಕಾರಿಗಳಿಗೆ ಭದ್ರತೆ ನೀಡಬೇಕು. ಅವರ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ನಕಲಿ ಸಾಮಾಜಿಕ ಹಾಗೂ ಆರ್ ಟಿ ಆಯ್ ಕಾರ್ಯಕರ್ತರಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡದಲ್ಲಿ ರಾಜ್ಯಾಧ್ಯಕ್ಷ ರಾಜು ವಾರದ ಹೇಳಿದ್ದಾರೆ.

ವಂಚನೆ ಪ್ರಕರಣ: ಕುಂದಾಪುರದ ಚೈತ್ರಾಗೆ ಜಾಮೀನು ಮಂಜೂರು! ಇಂದು ಬಿಡುಗಡೆ

‘ಅಲ್ಪಸಂಖ್ಯಾತ ಇಲಾಖೆಗೆ ಕೊನೆಯದಾಗಿ 10 ಸಾವಿರ ಕೋಟಿ ಮಾಡಬೇಕು ಅನ್ಕೊಂಡಿದ್ದೀನಿ’

‘ಸಿದ್ದರಾಮಯ್ಯ ಸಾಹೇಬ್ರು ಹುಲಿ ಹಾಲು ಕುಡಿದು ಅಧಿವೇಶನದ ಹೊರಗೆ ಒಳಗೆ ಘರ್ಜಿಸುತ್ತಾರೆ’

- Advertisement -

Latest Posts

Don't Miss