‘ರಾಜ್ಯಾಭಿವೃದ್ಧಿ ದರ ಹೇಗೆ ಹೆಚ್ಚುತ್ತದೆ ಎಂದು ಸ್ವಯಂಘೋಷಿತ ಆರ್ಥಿಕ ತಜ್ಞ “ಸಾಲ”ರಾಮಯ್ಯನವರೇ ಹೇಳಬೇಕು’

Political News: ಸಿಎಂ ಸಿದ್ದರಾಮಯ್ಯ ಇಂದು ಬಜೆಟ್ ಮಂಡಿಸಿದ್ದು, ಈ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್ ನಲ್ಲಿ ಕರ್ನಾಟಕ ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗುವ ಮುನ್ಸೂಚನೆ ಕಂಡು ಬರುತ್ತಿದೆ ಹೊರತು, ರಾಜ್ಯ ಅಭಿವೃದ್ಧಿಯಾಗುವುದು ಎಂಬುದು ಬಲು ದೂರದ ಮಾತು. ತಮ್ಮ ಆಡಳಿತದ ದಯನೀಯ ವೈಫಲ್ಯವನ್ನು ಮರೆಮಾಚಲು ಹಾಗೂ ತೆರಿಗೆ ಸಂಗ್ರಹಣೆಯಲ್ಲಾಗಿರುವ ಕೊರತೆಯನ್ನು ವಿಷಯಾಂತರ ಮಾಡಲು ಬಜೆಟ್ ಅನ್ನು ಅಪವಿತ್ರಗೊಳಿಸುವ ಕೆಟ್ಟ ಸಂಪ್ರದಾಯಕ್ಕೆ ಸಿದ್ದರಾಮಯ್ಯ ಬುನಾದಿ ಹಾಕಿದ್ದಾರೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ತೆರಿಗೆ ಸಂಗ್ರಹದಲ್ಲಿ ₹14 ಸಾವಿರ ಕೋಟಿ ಕೊರತೆ ಏಕಾಯಿತು ಎಂಬುದನ್ನು ಸಿಎಂ ಸಿದ್ದರಾಮಯ್ಯನವರು ತಿಳಿಸಲಿ. ನಿಗದಿತ ತೆರಿಗೆ ಸಂಗ್ರಹ ಮಾಡಬೇಡಿ ಎಂದು ಅಧಿಕಾರಿಗಳ “ಕೈ” ಕಟ್ಟಿ ಹಾಕಿದ ಆ ಕಾಣದ “ಹಸ್ತ” ಯಾವುದು ಎಂಬುದನ್ನು ಜಗಜ್ಜಾಹೀರು ಮಾಡಲಿ. ಈಗ ಮಾಡಿರುವ ಸಾಲ ಸಂಪೂರ್ಣ ಅನುತ್ಪಾದಕ ವಲಯಕ್ಕೆ ಮೀಸಲಾಗಿದೆ. ಹೆಚ್ಚಿನ ಬಡ್ಡಿ ದರದಲ್ಲಿ ತರುವ ಸಾಲವನ್ನು ಸಂಪೂರ್ಣ ಅನುತ್ಪಾದಕ ವಲಯಕ್ಕೆ ಮೀಸಲಿರಿಸಿದರೇ, ರಾಜ್ಯದ ಅಭಿವೃದ್ಧಿಯ ದರ ಹೇಗೆ ಹೆಚ್ಚುತ್ತದೆ ಎಂಬುದನ್ನು ಸ್ವಯಂಘೋಷಿತ ಆರ್ಥಿಕ ತಜ್ಞ “ಸಾಲ”ರಾಮಯ್ಯನವರೆ ಹೇಳಬೇಕು ಎಂದು ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ಒಟ್ಟಿನಲ್ಲಿ ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದಂತಹ ಅತ್ಯಂತ ಕೆಟ್ಟ ಬಜೆಟ್ ಎಂಬ ಶ್ರೇಯ ಸಿದ್ದರಾಮಯ್ಯನವರ ಈ ಬಜೆಟ್ ಗೆ ಸಲ್ಲುತ್ತದೆ. ಶಾಂತಿ ನೆಮ್ಮದಿ ಹಾಗೂ ಸಮೃದ್ಧಿಯಿಂದ ತುಂಬಿದ್ದ ಕರ್ನಾಟಕವನ್ನು ವೆನಿಜುವೆಲಾ ರೀತಿ ಮಾಡಲು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್

ಪಣ ತೊಟ್ಟಿದೆ ಎಂಬುದು ಈ ಬಜೆಟ್ ನಿಂದ ಸ್ಪಷ್ಟವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’

‘ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ’

‘ನಮ್ಮ ಹಾಸನ ಜಿಲ್ಲೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಸಂಪೂರ್ಣ ಫೇಲ್ಯೂರ್ ಆಗಿರುವ ಬಜೆಟ್’

About The Author