ನವದೆಹಲಿ: ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈ ಮೊದಲು ಅನಿಲ್, ಪಕ್ಷದ ತಮ್ಮ ಎಲ್ಲಾ ಅಧಿಕೃತ ಸ್ಥಾನಗಳನ್ನ ತೊರೆದಿದ್ದರು. ಕೆಪಿಸಿಸಿ ಡಿಜಿಟಲ್ ಮೀಡಿಯಾ ಸೆಲ್ ಸಂಚಾಲಕ, ಎಐಸಿಸಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಂವಹನ ಸೆಲ್ ನಿರ್ವಾಹಕ ಸ್ಥಾನಕ್ಕೆ ಅನಿಲ್ ರಾಜೀನಾಮೆ ನೀಡಿದ್ದರು. ಈ ಮೂಲಕವೇ ಅವರು ತಾನು ಸದ್ಯದಲ್ಲೇ ಕಾಂಗ್ರೆಸ್ ತೊರೆಯಲಿದ್ದೇನೆ ಎಂಬ ಸೂಚನೆ ನೀಡಿದ್ದರು. ಅಲ್ಲದೇ, ಕಾಂಗ್ರೆಸ್‌ನ್ನು ಬಹಿರಂಗವಾಗಿ ಟೀಕಿಸಿ, ಬಿಜೆಪಿ ನಾಯಕರನ್ನ ಬೆಂಬಲಿಸಿದ್ದರು. ಸ್ಮೃತಿ ಇರಾನಿಯನ್ನ ಬೆಂಬಲಿಸಿದ್ದ ಅನಿಲ್, ಕಾಂಗ್ರೆಸ್‌ನ್ನು ಕಸದ ಬುಟ್ಟಿಗೆ ಹಾಕಲು, 2024ರ ಚುನಾವಣೆ ಉತ್ತಮ ಅವಕಾಶ ಎಂದು ಹೇಳಿದ್ದರು.
ಅಲ್ಲದೇ ಕಾಂಗ್ರೆಸ್ ಪಕ್ಷಕ್ಕಾಗಿ ನಾವು ಕೆಲಸ ಮಾಡುವುದನ್ನ, ಆ ಪಕ್ಷದ ನಾಯಕರ ಕುಟುಂಬಕ್ಕಾಗಿ ನಾವು ಕೆಲಸ ಮಾಡಬೇಕು ಎಂದು ಅರಿತಿದ್ದ ಅನಿಲ್, ಕಾಂಗ್ರೆಸ್ಸಿಗರ ಟೀಕೆಗೆ ಗುರಿಯಾಗಿದ್ದ ಕ್ಷಣವೇ, ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದರು. ಅದೇ ರೀತಿ ಇಂದು ದೆಹಲಿಯಲ್ಲಿ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, ಕೇಂದ್ರ ಸಚಿವ ವಿ.ಮುರುಳಿಧರನ್ ಉಪಸ್ಥಿತಿಯಲ್ಲಿ ಅನಿಲ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
Delhi | Anil Antony, Congress leader and son of former Defence minister AK Antony, joins BJP, in presence of Union ministers Piyush Goyal and V Muraleedharan pic.twitter.com/c39pybFbdt
— ANI (@ANI) April 6, 2023
‘ಕರುನಾಡಿನಲ್ಲಿ ಕಾಂಗ್ರೆಸ್ ಸೂರ್ಯೋದಯಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ’