- Advertisement -
Political News: ನಿನ್ನೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅನಾರೋಗ್ಯದಿಂದ ನಿಧನರಾಾಗಿದ್ದಾರೆ. ಅವರು ಭಾರತದಲ್ಲಿ ಸುಮಾರು 10 ವರ್ಷಗಳ ಕಾಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಡಾಾ.ಮನಮೋಹನ್ ಸಿಂಗ್ ನಿಧನಕ್ಕೆ ಹಿರಿಯ ಪತ್ರಕರ್ತರಾಗಿರುವ ತ್ಯಾಗರಾಜ್ ಪುಟ್ಟಪ್ಪ ಅಕ್ಷರನಮನ ಸಲ್ಲಿಸಿದ್ದಾರೆ.
ಇದೊಂದು ಬಹಳ ವಿಚಿತ್ರ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ‘ಮೌನಿಸಿಂಗ್’, ‘ಮೂಕ ಗೊಂಬೆ’, ‘ಹೈಕಮಾಂಡ್ ಕೈಗೊಂಬೆ’ – ಎಂದೆಲ್ಲ ಜರಿದವರು ಈಗ ‘ಜ್ಞಾನಿ ಸಿಂಗ್’, ‘ಸಿಂಗ್ ಇಸ್ ಕಿಂಗ್’, ‘ಮಿತಭಾಷಿ-ಕೃತಿಶ್ರೇಷ್ಠ’, ‘ವಿಶ್ವಶ್ರೇಷ್ಠ ಅರ್ಥತಜ್ಞ’, ‘ಸರಳ, ಸೌಮ್ಯ, ಸಜ್ಜನ, ನಿಗರ್ವಿ, ‘ಪ್ರಾಮಾಣಿಕ ನಾಯಕ’ ‘ನವಭಾರತ ನಿರ್ಮಾಣದ ಹರಿಕಾರ…’ ಎಂಬೆಲ್ಲ ಪದಪುಂಜಗಳಿಂದ ಹಾಡಿ ಹೊಗಳುತ್ತಿದ್ದಾರೆ. ಡಾ. ಸಿಂಗ್ ಅವರ ಆತ್ಮವೂ ನಾಚಿ ನೀರಾಗುವಂತೆ!
ಬದುಕಿದ್ದಾಗ ನಿಂದನೆಯ ಶೂಲಕ್ಕೆರಿಸಿ, ಸತ್ತಾಗ ಶ್ಲಾಘಿಸುವವರನ್ನು ನೋಡಿ ಸೋಜಿಗ ಮತ್ತು ರೇಜಿಗೆ ಎರಡೂ ಏಕಕಾಲಕ್ಕೆ ಆಗುತ್ತದೆ. ಸತ್ತವರು ಯಾರೇ ಆಗಿರಲಿ, ಅವರು ಯಾವುದೇ ಕ್ಷೇತ್ರ, ಪಕ್ಷಕ್ಕೆ ಸೇರಿರಲಿ ಈ ವೈಪರೀತ್ಯ ಆಬಾಧಿತ. ಒಂದೋ ಅವರು ಬದುಕಿದ್ದಾಗ ಟೀಕಿಸಿದ್ದು ಸುಳ್ಳಾಗಿರಬೇಕು. ಇಲ್ಲವೇ ಅವರು ಸತ್ತಾಗ ಹೊಗಳಿದ್ದು ನಿಜವಾಗಿರಬೇಕು. ಒಂದೊಮ್ಮೆ ಇದು ಉಲ್ಟಾ ಆದರೂ ಅಪರಾಧಿ ಸ್ಥಾನದಲ್ಲಿ ನಿಲ್ಲುವವರು ಮತ್ತದೇ ಅಭಿಪ್ರಾಯ ಶೂರರೇ..!
ಬಹುಷಃ ಆಗ ಮಾಡಿದ ತಪ್ಪಿಗೆ ಈಗಿನದು ಪಶ್ಚಾತಾಪವೇ..? ಅವರ ಅಂತಾರಾತ್ಮಕ್ಕೇ ಗೊತ್ತು. ಏಕೆಂದರೆ ತೋರಿಕೆಯ ನಡೆ, ನುಡಿ ಆತ್ಮವಂಚನೆಗೆ ಸವಾಲಾಗಬಹುದು! ಈ ಜಗತ್ತಿನಲ್ಲಿ ಎಷ್ಟೋ ಮಂದಿ ಯೋಗ್ಯತೆ ಮೀರಿ ಮೆರೆದಿದ್ದಾರೆ. ಅರ್ಹರು ಹೊಗಳಿಕೆಗೆ ಕದಮುಚ್ಚಿ, ಚಿಪ್ಪಿನೊಳಗಿನ ಮುತ್ತಿನಂತೆ ಹೊಳೆದಿದ್ದಾರೆ.
ಅದೇನೇ ಇರಲಿ, “ಹೋದೋರೆಲ್ಲ ಒಳ್ಳೆಯವರು.. ಹರಸೋ ಹಿರಿಯರೂ…” ಎಂಬ ಸಾಲುಗಳಲ್ಲಿ ಮನಮೋಹನ್ ಸಿಂಗ್ ಅಗಲಿಕೆಯಲ್ಲಿ ಇರುವಿಕೆ ಅನವರತ.
ಅಧಿಕಾರದಿಂದ ನಿರ್ಗಮಿಸುವ ವೇಳೆ ಅವರು ಹೇಳಿದ ಕೊನೇ ಮಾತು: “History will be kinder to me..” ಅವರ ಆಶಯ, ಅಭೀಪ್ಸೆ ಶ್ರದ್ಧಾಂಜಲಿ ಪದದರ್ಪಣವಾಗಿದೆ! ಅವರ ಆತ್ಮಕ್ಕೆ ಶಾಂತಿ ಸಿಗಲಿ.
(ಚಿತ್ರ: 2018 ಮೇ ತಿಂಗಳು ಬೆಂಗಳೂರಲ್ಲಿ ಏರ್ಪಡಿಸಿದ್ದ ಅನೌಪಚಾರಿಕ ಸಂವಾದ ಸಂದರ್ಭ. ಅಲ್ಲಿ ಅವರ ಮಾತುಗಳಲ್ಲಿ ಭೋರ್ಗರೆದ ಜ್ಞಾನಸಾಗರದಲ್ಲಿ ವಿರೋಧಿಗಳ ಟೀಕೆಗಳು ಕೊಚ್ಚಿ ಹೋಗಿದ್ದವು.)
https://youtu.be/B3i4EMvr7iU
- Advertisement -