Sunday, September 8, 2024

Latest Posts

‘ಜ.‌ 9ರೊಳಗೆ ಶಹರ ಠಾಣೆ ಇನ್ಸಪೆಕ್ಟರ್ ಅಮಾನತು ಆಗಬೇಕು, ಇಲ್ಲದಿದ್ದಲ್ಲಿ ಮತ್ತೆ ಹೋರಾಟ’

- Advertisement -

Hubballi News:: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್, ಶ್ರೀಕಾಂತ್ ಪೂರಾಜಿ ನಿವಾಸಕ್ಕೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಆರ್.ಅಶೋಕ್, ಹುಬ್ಬಳ್ಳಿಯಲ್ಲಿ 1992ರಲ್ಲಿ ಕರಸೇವೆಯಲ್ಲಿ ಪಾಲ್ಗೊಂಡ ಸಂದರ್ಭ. ಗಲಾಟೆಯಲ್ಲಿ ಭಾಗಿ ಅಂತಾ 30 ವರ್ಷದ ಬಳಿಕ ಬಂಧಿಸಿದ್ದಾರೆ. ಅವರಿಗೆ ಓಡಾಡಲು ಕಷ್ಟ ಇದೆ. ಆದರೂ ದೌರ್ಜನ್ಯ ಮಾಡಿ ತಳ್ಳಾಟ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಕೋರ್ಟ್ ಮೂರು ದಿನ ರಜೆ ಇತ್ತು. ಆ ಸಂದರ್ಭದಲ್ಲಿ ಜೈಲಿಗೆ ಹಾಕಿದ್ದಾರೆ. ಬೇರೆಲ್ಲ ಕೇಸ್‌ಗಾಗಿ ಹೋಗಿ ಅಟೆಂಡ್ ಆಗಿ ಬಂದಿದ್ದರು. ಆದರೂ ಆಗ ಈ ಕೇಸ್ ಕೇಳಿಲ್ಲ. ಈಗ ಹಿಂದೂಗಳನ್ನು ಹೆದರಿಸಲು ಹೀಗೆ ಮಾಡಿದ್ದಾರೆ. ಹೀಗಾಗಿ ಇದು ಕಾಂಗ್ರೆಸ್ ನ ದುರ್ಬುದ್ಧಿ ಎಂದು ಅಶೋಕ್ ಕಿಡಿಕಾರಿದ್ದಾರೆ.

ಹೀಗಾಗಿ ನಾವು ಬಿಡುಗಡೆಗಾಗಿ ಹೋರಾಟ ಮಾಡಿದ್ದೇವೆ. ಇನ್ಸಪೆಕ್ಟರ್ ಅಮಾನತು ಮಾಡಬೇಕೆನ್ನುವುದು ನಮ್ಮ ಆಗ್ರಹ. ಸಿದ್ದರಾಮಯ್ಯ ಕಾನೂನು ವಿರುದ್ಧ ನಡೆದುಕೊಂಡಿದ್ದಾರೆ ಅಂತಾ ಹೇಳಿದ್ದಾರೆ. ಆದರೆ ಪಿಎಫ್‌ಐ ಮೇಲಿನ ಕೇಸ್ ವಾಪಸ್ ಪಡೆದಿದ್ದರು. ಅವರ ಮೇಲೆ‌ಕೊಲೆ ಕೇಸ್‌ಗಳು ಇದ್ದವು. ಹಾಗಾದ್ರೆ ಅವರನ್ನೂ ಬಂಧಿಸಿ. ಆದರೆ ರಾಮನ ಹೆಸರು ಹೇಳುವವರನ್ನು ಬಂಧಿಸಿದ್ದೀರಿ. ಸಿದ್ದರಾಮಯ್ಯ ಟಿಪ್ಪು ಸಂಸ್ಕೃತಿ ರಾಜ್ಯದ ಜನರ ಮೇಲೆ‌ಹೇರಲು ಹೊರಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅಶೋಕ್ ಹರಿಹಾಯ್ದಿದ್ದಾರೆ.

ಹರಿಪ್ರಸಾದಗೆ ನಾಚಿಕೆ ಆಗಬೇಕು. ಗೋಧ್ರಾದಲ್ಲಿ ರೈಲು ಸುಟ್ಟಿದ್ದು ಯಾರು..? ಹರಿಪ್ರಸಾದಗೆ ಮತಿಭ್ರಮಣೆ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಇದೆ. ಅದಕ್ಕೆ ಅವರು ಏನಾದರೂ ಮಾಡಬಹುದು. ಆದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ. ಇಂತಹುದೆಲ್ಲ ನಡೆಯಲು ನಾವು ಬಿಡುವುದಿಲ್ಲ. ಶ್ರೀಕಾಂತ ಪೂಜಾರಿ ಜಾಮೀನು ಅರ್ಜಿಗೆ ಸಲ್ಲಿಕೆಯಾಗಿದೆ. ಆದರೆ ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಜನವರಿ 9ಕ್ಕೆ ಮತ್ತೊಂದು ಹೋರಾಟ ನಡೆಸಲಿದ್ದಾರೆಂದು ಹೇಳಿದ ಆರ್.ಅಶೋಕ್, ಜ.‌ 9ರೊಳಗೆ ಶಹರ ಠಾಣೆ ಇನ್ಸಪೆಕ್ಟರ್ ಅಮಾನತು ಆಗಬೇಕು. ಇಲ್ಲದೇ ಹೋದಲ್ಲಿ ಜ. 9ಕ್ಕೆ ಮತ್ತೆ ಹುಬ್ಬಳ್ಳಿಗೆ ಬರುತ್ತೇವೆ. ದೊಡ್ಡ ಹೋರಾಟ ಮಾಡುತ್ತೇವೆ. ಧ್ವಜ ಮಾದರಿ ಹೋರಾಟ ಮಾಡುತ್ತೇವೆ. ಇಡಿ ರಾಜ್ಯಕ್ಕೆ ವ್ಯಾಪಿಸುವಂತೆ ಹೋರಾಟ ಮಾಡುತ್ತೇವೆ ಎಂದು ಅಶೋಕ್ ಹೇಳಿದ್ದಾರೆ.

ಡ್ರಗ್ಸ್ ಪಾರ್ಸೆಲ್ ಬಂದಿದೆ ಎಂದು ಹೇಳಿ ನಟಿಗೆ 5 ಲಕ್ಷ ವಂಚನೆ..

‘ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ’

ಹರಿಪ್ರಸಾದ್ ಅವರಿಗೆ ಸಿಕ್ಕ ಮಾಹಿತಿ, ಸರ್ಕಾರಕ್ಕಿಲ್ಲವೇ..? : ಮಾಜಿ ಶಾಸಕ ಪ್ರೀತಂ ಗೌಡ

- Advertisement -

Latest Posts

Don't Miss