Wednesday, December 11, 2024

Latest Posts

ಮುಹೂರ್ತ ನೆರವೇರಿಸಿದ `ಶಂಭೋ ಶಿವ ಶಂಕರ’..!

- Advertisement -

ಲಾಕ್ ಡೌನ್ ಬಳಿಕ ಇದೀಗ ಸ್ಟಾರ್ ನಟರ ಸಿನಿಮಾಗಳಷ್ಟೇ ಅಲ್ಲದೆ ಒಂದೊಂದೇ ಹೊಸಬರ ಚಿತ್ರಗಳೂ ಸೆಟ್ಟೇರ್ತಿವೆ.. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶಂಭೋ ಶಿವ ಶಂಕರ ಅನ್ನುವ ಟೈಟಲ್ ನ ಚಿತ್ರವೊಂದು ಮೂಡಿಬರ್ತಿದೆ.. ಟೈಟಲ್ ಕೇಳಿದ್ರೆ ಇದು ದೈವ ಭಕ್ತಿಯ ಚಿತ್ರಕತೆಯ ಸಿನಿಮಾ ಇರ್ಬಹುದೇನೋ ಅನ್ನಿಸೋದು ಸಹಜ.. ಆದ್ರೆ ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಲವ್ ಸ್ಟೋರಿಯ ಸಿನಿಮಾ ಅನ್ನುತ್ತೆ ಚಿತ್ರತಂಡ.. ಈಗಾಗ್ಲೇ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಶಂಕರ ಕೋನಮಾನ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.. ಇದು ಅವರ ನಿರ್ದೇಶನದ ಮೊದಲ ಸಿನಿಮಾ.. ಈ ಸಿನಿಮಾಗೆ ಕಥೆ, ಚಿತ್ರಕತೆ, ಸಂಭಾಷಣೆ ಎಲ್ಲವೂ ಶಂಕರ್ ಕೋನಮಾನ ಅವರೇ ಮಾಡಿದ್ದಾರೆ..

ಶಂಭೋ ಶಿವ ಶಂಕರ ಚಿತ್ರದಲ್ಲಿ ಮೂವರು ನಾಯಕರಿದ್ದಾರೆ..  ಚಿತ್ರದಲ್ಲಿ ಆ ಮೂವರು ನಾಯಕರ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗಿದೆ.. ನಟರಾದ ಅಭಯ್ ಪುನೀತ್, ರಕ್ಷಕ್ ಹಾಗೂ ರೋಹಿತ್ ಮೂರು ಜನ ನಾಯಕರ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ.. ಈ ಮೂವರಿಗೂ ಇದು ಮೊದಲ ಸಿನಿಮಾ.. ಪಂಚತಂತ್ರ ಚಿತ್ರದ ಖ್ಯಾತಿಯ ಬೆಡಗಿ ಸೋನಾಲ್ ಮಂತೆರೋ ಈ ಚಿತ್ರದ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಮೂವರು ನಾಯಕರಿಗೆ ಒಬ್ಬರೇ ನಾಯಕಿ.. ಹಾಗಾಗಿ ಸೋನಾಲ್ ಅವರ ಪಾತ್ರಕ್ಕೆ ಇಲ್ಲಿ ಹೆಚ್ಚು ಪ್ರಾಮುಖ್ಯತೆ ಇದ್ಯಂತೆ.. ಸಿನಿಮಾ ಕಥೆ ಕೂಡ  ಬಹಳ ಇಂಟ್ರೆಸ್ಟಿಂಗ್ ಆಗಿರಲಿದೆ, ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಸಬ್ಜೆಕ್ಟ್ ಈ ಚಿತ್ರದಲ್ಲಿದೆ ಅಂದಿದ್ದಾರೆ ನಿರ್ದೇಶಕರು..    

ಇನ್ನೂ ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿದ್ದು ಹಿತನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.. ಅಘನ್ಯ ಪಿಕ್ಚರ್ಸ್ ಬ್ಯಾನರ್ ನಲ್ಲಿ ವರ್ತೂರು ಮಂಜು ಅವರು ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.. ಸದ್ಯ ಮುಹೂರ್ತ ನೆರವೇರಿಸಿರುವ ಶಂಭೋ ಶಿವ ಶಂಕರ ಚಿತ್ರತಂಡ, ಅದರ ಬೆನ್ನಲ್ಲೇ ಚಿತ್ರೀಕರಣವನ್ನೂ ಆರಂಭಿಸಿದೆ.. ಇತ್ತೀಚೆಗೆ ಕೊರೋನಾ ಹಾವಳಿ ಹೆಚ್ಚಾಗಿದ್ರಿಂದ ಸಾಕಷ್ಟು ಚಿತ್ರತಂಡಗಳು ತಮ್ಮ ತಮ್ಮ ಸಿನಿಮಾಗಳನ್ನ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡ್ತಿವೆ.. ಆದ್ರೆ ಶಂಭೋ ಶಿವ ಶಂಕರ ಟೀಮ್ ಮಾತ್ರ ಈ ವಿಷ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಪ್ರೊಮೈಸ್ ಮಾಡಿಕೊಳ್ಳದೇ ಚಿತ್ರಮಂದಿರದಲ್ಲೇ ಈ ಚಿತ್ರವನ್ನ ಬಿಡುಗಡೆ ಮಾಡೋದಾಗಿ ತಿಳಿಸಿದೆ.. ಸದ್ಯ ಟೈಟಲ್ ಮೂಲಕ ಕುತೂಹಲ ಮೂಡಿಸಿರುವ ಈ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದೆ..

ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss