Sunday, September 8, 2024

Latest Posts

40ನೇ ವಯಸ್ಸಿನಲ್ಲಿ  ಚಿನ್ನ ಗೆದ್ದು ಶರತ್ ಕಮಾಲ್

- Advertisement -

ಬರ್ಮಿಂಗ್‍ಹ್ಯಾಮ್: ಭಾರತದ ಅಗ್ರ ಟೇಬಲ್ ಟೆನಿಸ್ ಆಟಗಾರ ಶರತ್ ತಮ್ಮ 40ನೇ ವಯಸ್ಸಿನಲ್ಲಿ  ಕಮಾಲ್ ಮಾಡಿದ್ದಾರೆ. ಈ ಬಾರಿಯ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 16 ವರ್ಷಗಳ ಬಳಿಕ ಚಿನ್ನ ಗೆದ್ದಿದ್ದಾರೆ.

ಇಲ್ಲಿನ ಎನ್‍ಇಸಿ ಮೈದಾನದಲ್ಲಿ  ನಡೆದ ಫೈನಲ್‍ನಲ್ಲಿ ಇಂಗ್ಲೆಂಡ್‍ನ ಪಿಚ್ ಫೋರ್ಡ್ ವಿರುದ್ಧ ಮೊದಲ ಸೆಟ್‍ನ್ನು ಕಳೆದುಕೊಂಡರು. 11-13, 11-7,11-2, 11-6 ಅಂಕಗಳಿಂದ ಮಣಿಸಿದರು.

2006ರಲ್ಲಿ ಶರತ್ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.  ತಂಡ ಮತ್ತು ಮಿಕ್ಸಡ್ ಡಬಲ್ಸ್‍ನಲ್ಲಿ ಎರಡು ಚಿನ್ನ ಗೆದ್ದರು. ಐದು ಬಾರಿ ಕಾಮನ್‍ವೆಲ್ತ್‍ನಲ್ಲಿ ಸ್ಫರ್ಧಿಸಿರುವ  ಶರತ್ ಇದುವರೆಗೂ 13 ಪದಕಗಳನ್ನು ಗೆದ್ದಿದ್ದಾರೆ.

ಮತ್ತೊರ್ವ ಆಟಗಾರ ಜಿ.ಸತ್ಯನ್ ಇಂಗ್ಲೆಂಡ್‍ನ ಪೌಲ್ ಡ್ರಿಂಕ್‍ಹಾಲ್ ವಿರುದ್ಧ 4-3 ಅಂಕಗಳಿಂದ ಗೆದ್ದು ಕಂಚಿನ ಪದಕ ಪಡೆದರು. ಈ ಗೆಲುವಿನೊಂದಿಗೆ ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತ 6ನೇ ಪದಕ ಗೆದ್ದ ಸಾಧನೆ ಮಾಡಿದೆ.

  ಶರತ್ ಕಮಾಲ್,ಶ್ರೀಜಾಗೆ ಚಿನ್ನ 

ಶರತ್ ಕಮಾಲ್ ಮತ್ತು ಶ್ರೀಜಾ ಅಕುಲಾ ಮೀಶ್ರ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ  ಚಿನ್ನ ಗೆದ್ದಿದ್ದಾರೆ.

ಮಿಶ್ರ ಡಬಲ್ಸ್‍ನ ಫೈನಲ್‍ನಲ್ಲಿ  ಶರತ್ ಹಾಗೂ ಶ್ರೀಜಾ ಜೋಡಿ ಮಲೇಷ್ಯಾದ ಜಾವೆನ್ ಚೂಂಗ್ ಕರೆನ ಲೀನ್ ಜೋಡಿ ವಿರುದ್ಧ 3-1 ಸೆಟ್‍ಗಲಿಂದ ಗೆದ್ದರು.

ಮೊದಲ ಸುತ್ತನ್ನು ಕಳೆದುಕೊಂಡು ಈ ಜೋಡಿ ಎರಡನೆ ಸುತ್ತಿನಲ್ಲಿ  ತಾಳ್ಮೆಯಿಂದ ಆಡಿ ಗೆದ್ದುಕೊಂಡಿತು. ನಂತರದ ಸೆಟ್‍ಗಳನ್ನು ಗೆದ್ದು ಸ್ವರ್ಣ ಗೆದ್ದುಕೊಂಡಿತು.

ಮಿಶ್ರ ಡಬಲ್ಸ್‍ನಲ್ಲಿ  ಶರತ್ ಮೊದಲ ಬಾರಿಗೆ ಚಿನ್ನ ಗೆದ್ದರು.

- Advertisement -

Latest Posts

Don't Miss