ಬೆಂಗಳೂರು: ಬೆಂಗಳೂರಿನಲ್ಲಿಂದು ಪ್ರಚಾರ ನಡೆಸಿದ ಶರತ್ ಬಚ್ಚೇಗೌಡ, ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೊನ್ನೆ ತಾನೇ ಶರತ್ ಬಚ್ಚೇಗೌಡ, ಪತ್ನಿಯ ಕಾರ್ ಜಖಂಗೊಳಿಸಿದ್ದು. ಇದೀಗ ವಿರೋಧ ಪಕ್ಷದವರು ಆಕೆಯ ಮೇಲೆ ಎಫ್‌ಐಆರ್ ಹಾಕಲು ಮುಂದಾಗಿದ್ದಾರೆ ಎಂದು ಶರತ್ ಬಚ್ಚೇಗೌಡ ವಾಗ್ದಾಳಿ ನಡೆಸಿದ್ದಾರೆ.
ನಾನು ಗಂಡಸು, ನಾನು ಎಲ್ಲವನ್ನೂ ಎದುರಿಸುತ್ತೇನೆ. ನನ್ನ ಮೇಲೆ ನಾಲ್ಕು ಬೋಗಸ್ ಕೇಸ್ ಹಾಕಿದ್ದೀರಿ. ಅದನ್ನೆಲ್ಲಾ ನಾನು ಎದುರಿಸುತ್ತೇನೆ. ಆದ್ರೆ ನನ್ನ ಪತ್ನಿ ಮೇಲೆ ದಾಳಿಯ ಯತ್ನ ನಡೆದಿದೆ. ನನ್ನ ಪತ್ನಿ ವಿರುದ್ಧ ಕೇಸ್ ಹಾಕೋಕ್ಕೆ ಹೊರಟಿದ್ದಾರೆ. ಈ ಹೊಸಕೋಟೆ ಕ್ಷೇತ್ರದಲ್ಲಿ ಒಬ್ಬ ಎಂಎಲ್‌ಎ ಪತ್ನಿಗೆ ರಕ್ಷಣೆ ಇಲ್ಲ. ಇನ್ನು ಬೇರೆ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುತ್ತದಾ..? ಎಂದು ಶರತ್ ಪ್ರಶ್ನಿಸಿದ್ದಾರೆ.
ಅಲ್ಲದೇ, ನನಗಿಬ್ಬರು ಮಕ್ಕಳಿದ್ದಾರೆ. ಮಗಳು ಮತ್ತು ಮಗ ಇದ್ದಾರೆ. ಅವರ ವಿರುದ್ಧ ಬೇಕಾದ್ರೂ ಕಂಪ್ಲೇಂಟ್ ಕೊಡಿ. ನಾನು ಕಂಪ್ಲೆಂಟ್‌ಗೆಲ್ಲ ಭಯ ಬೀಳುವ ಜಾತಿಯವನೇ ಅಲ್ಲಾ ಎಂದು ಶರತ್ ತೊಡೆತಟ್ಟಿ ನಿಂತಿದ್ದಾರೆ. ಅಲ್ಲದೇ, ಯಾವ ಕಿಡಿಗೇಡಿಗಳು, ಯಾವ ಕುತಂತ್ರಿಗಳು ಈ ದುಸ್ಸಾಹಸಾನ ಮಾಡಿದ್ದಾರೆ, ಅವರ ವಿರುದ್ಧ ಕ್ರಮ ತೆಗೆದುಕೊಂಡು, ಇದಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ನಮ್ಮದು ಎಂದಿದ್ದಾರೆ.
ಅಲ್ಲದೇ, ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ನಮಗೆ ವಿಶ್ವಾಸವಿದೆ. ಪೊಲೀಸರು ಘಟನೆ ನಡೆದು ಒಂದೂವರೆ ಗಂಟೆ ಬಳಿಕ ಬಂದಿದ್ದಾರೆ. ಆದರೂ ಅವರ ಮೇಲೆ ನಾವು ವಿಶ್ವಾಸವನ್ನಿಟ್ಟಿದ್ದೇವೆ ಎಂದು ಶರತ್ ಹೇಳಿದ್ದಾರೆ.