Saturday, April 5, 2025

Latest Posts

ಇನ್ಮುಂದೆ ಶಾರುಖ್‌ಖಾನ್ ಮನ್ನತ್‌ನಲ್ಲಿ ನೆಮ್ಮದಿಯಾಗಿ ನಿದ್ರೆ ಮಾಡಬಹುದು..!

- Advertisement -

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇನ್ಮುಂದೆ ನೆಮ್ಮದಿಯಾಗಿ ನಿದ್ದೆ ಮಾಡ್ತಾರೆ. ಅದಕ್ಕೆ ಕಾರಣ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಿಂದ ರಿಲೀಫ್ ಪಡ್ಕೊಂಡಿರೋದು. ಶಾರುಖ್ ಖಾನ್ ಕುಟುಂಬಕ್ಕೆ ದೊಡ್ಡ ಶಾಕ್ ನೀಡಿದ್ದ ಘಟನೆ ಅದು. ಗೋವಾದಲ್ಲಿ ಸಮುದ್ರದ ನಡುವೆ ಪಾರ್ಟಿ ಮಾಡೋಕೆ ಹೋಗಿದ್ದ ತಂಡವನ್ನು ಡ್ರಗ್ಸ್ ಬಳಸುತ್ತಿದ್ದಾರೆ ಅನ್ನೋ ಕಾರಣಕ್ಕಾಗಿ ಬಂಧಿಸಲಾಗಿತ್ತು. ಮೊದಲಿಗೆ ಆರ್ಯನ್ ಸೇರಿ ೮ ಜನರು ನಂತರ ೧೨ ಮಂದಿ ಸೇರಿ ಒಟ್ಟು ೨೦ ಜನರನ್ನು ಬಂಧಿಸಲಾಗಿತ್ತು. ಇದರ ನಂತರ ೨೨ ದಿನ ಜೈಲಿನಲ್ಲಿ ಕಳೆದಿದ್ದರು ಶಾರುಖ್ ಪುತ್ರ.
ಅದಾದ ನಂತರ ಶಾರುಖ್ ಪುತ್ರನನ್ನು ಬಂಧಿಸಿದ್ದ ಸಮೀರ್ ವಾಂಖೆಡೆ ಮೇಲೆ ಆರೋಪಗಳು ಕೇಳಿ ಬಂದಿತ್ತು. ಈಗ ಸುದೀರ್ಘ ತನಿಖೆ ಮತ್ತು ವಿಚಾರಣೆಯ ನಂತರ ಸಾಕ್ಷಾö್ಯಧಾರಗಳ ಕೊರತೆಯಿಂದ ಶಾರುಖ್ ಪುತ್ರನಿಗೆ ಕ್ಲೀನ್‌ಚಿಟ್ ದೊರೆತಿದೆ. ಎನ್‌ಸಿಬಿ ಅಂದ್ರೆ ಮಾದಕ ವಸ್ತು ನಿಯಂತ್ರಣ ದಳ ಕ್ಲೀನ್‌ಚಿಟ್ ಕೊಟ್ಟಿದೆ. ಆರ್ಯನ್ ಬಳಿ ಯಾವುದೇ ಡ್ರಗ್ಸ್ ಸಿಕ್ಕಿರಲಿಲ್ಲ, ಸಮೀರ್ ವಾಂಖಡೆ ಬಗ್ಗೆ ಕೂಡ ನಂತರ ಆರೋಪಗಳು ಕೇಳಿ ಬಂದಿತ್ತು. ಶಾರುಖ್ ಪುತ್ರನನ್ನು ಬಂಧಿಸಿ, ಹೀರೋ ಎಂಬAತೆ ಬಿಂಬಿತರಾಗಿದ್ದ ಸಮೀರ್ ವಾಂಖೆಡೆ ತಂಡಕ್ಕೆ ಇದರಿಂದ ಭಾರೀ ಹಿನ್ನೆಡೆಯಾಗಿದೆ.
ಒಂದುಕಡೆಯಲ್ಲಿ ದೊಡ್ಡವರಿಗೊಂದು ಕಾನೂನು, ಬಡವರಿಗೊಂದು ಕಾನೂನು ಅನ್ನೋದು ಮತ್ತೊಮ್ಮೆ ಸಾಬೀತಾದ ಹಾಗಿದೆ. ಯಾಕಂದ್ರೆ ದೊಡ್ಡವರು ಅಂದ್ರೆ ಸಾಕ್ಷಾಧಾರಗಳೂ ಸಿಕ್ಕಲ್ಲ, ಸಾಕ್ಷö್ಯನಾಶಾನೂ ಆಗಬಹುದು. ಇಲ್ಲದಿದ್ರೆ ಸಾಕ್ಷö್ಯಗಳು ಸೇಲ್ ಆಗಬಹುದು ಅನ್ನೋದು ಕೆಲವರು ಒಪಿನೀಯನ್ ಆದ್ರೆ ಮತ್ತೆ ಕೆಲವರದ್ದು ಯಾರಿಗೆ ಗೊತ್ತು ನಿಜವಾಗಲೂ ಆರ್ಯನ್ ಖಾನ್ ಅಮಾಯಕನಾಗಿದ್ರೂ ಆಗಿರಬಹುದು ಅನ್ನೋದು. ಎರಡೂ ಸಾಧ್ಯತೆಗಳೂ ಇಲ್ಲದಿಲ್ಲ. ನಮಗೆ ಕಾನೂನು ಕೊಟ್ಟಿದ್ದೇ ಫೈನಲ್ ಅಲ್ವಾ..!

- Advertisement -

Latest Posts

Don't Miss