Monday, September 25, 2023

Latest Posts

ನಟ ಸಂಜಯ್ ದತ್ತ್, ಪತ್ನಿ ಮಾನ್ಯತಾಗೆ ಲೀಗಲ್ ನೋಟೀಸ್..!

- Advertisement -

ಮುಂಬೈ: ನಟ ಸಂಜಯ್ ದತ್ ಹಾಗೂ ಪತ್ನಿ ಮಾನ್ಯತಾ ದತ್ ಗೆ ಶೀಮಾರೂ ಸಂಸ್ಥೆ ಲೀಗಲ್ ನೋಟೀಸ್ ನೀಡಿದೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಣ ಮಾಡಲಾಗುತ್ತಿರೋ ‘ಪ್ರಸ್ಥನಂ’ ಚಿತ್ರದ ಹಕ್ಕು ಖರೀದಿ ಕುರಿತಾಗಿ ಶಿಮಾರೂ ಸಂಸ್ಥೆ ನೋಟೀಸ್ ನೀಡಿದೆ.

ಖ್ಯಾತ ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹಿಂದಿ ಚಿತ್ರ ಪ್ರಸ್ಥಾನಂಗೆ ಆರಂಭದಲ್ಲೇ ಅಡ್ಡಿ ಎದುರಾಗಿದೆ. ತೆಲುಗಿನ ‘ಪ್ರಸ್ಥನಂ’ ಚಿತ್ರದ ಹಿಂದಿ ರಿಮೇಕ್ ಗಾಗಿ ಈಗಾಗಲೇ ಚಿತ್ರೀಕರಣ ನಡೆಸಿರೋ ದತ್ ಗೆ ಲೀಗಲ್ ನೋಟೀಸ್ ಕಳುಹಿಸಿರುವ ಶಿಮಾರೂ ಸಂಸ್ಥೆ, ನಾವು ತೆಲುಗಿನ ಈ ಚಿತ್ರವನ್ನು ಜೆಮಿನಿ ಸಂಸ್ಥೆಯಿಂದ ಪಡೆದುಕೊಂಡಿದ್ದೆವು, ಆದರೆ ನೀವು ಹಿಂದಿ ರಿಮೇಕ್ ಗಾಗಿ ಹಕ್ಕು ಖರೀದಿಸದೇ ಚಿತ್ರೀಕರಣ ನಡೆಸುತ್ತಿದ್ದೀರಿ. ಇದು ಕಾನೂನಿನ ಪ್ರಕಾರ ಅಪರಾಧ ಅಂತ ಶಿಮಾರೂ ಸಂಜಯ್ ದತ್, ಪತ್ನಿ ಮಾನ್ಯತಾ ದತ್ ಹಾಗೂ ನಿರ್ದೇಶಕ ದೇವಾ ಕಟ್ಟಾಗೆ ನೋಟೀಸ್ ನೀಡಿದೆ.

ಅಂದಹಾಗೆ, 2010ರಲ್ಲಿ ಬಿಡುಗಡೆಯಾದ ಸಾಯಿಕುಮಾರ್ ನಟನೆಯ ತೆಲುಗಿನ ‘ಪ್ರಸ್ಥನಂ’ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಇನ್ನು ಈಗಾಗಲೇ ಇದೇ ಟೈಟಲ್ ನಡಿ ಹಿಂದಿ ಅವತರಿಣಿಕೆಯ ಸಂಜಯ್ ದತ್ ನಾಯಕನಾಗಿ ಕಾಣಿಸಿಕೊಂಡಿರೋ ಈ ಚಿತ್ರಕ್ಕೆ ದೇವಾ ಕಟ್ಟಾ ನಿರ್ದೇಶನದಲ್ಲಿ ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ. ಇನ್ನು ಚಿತ್ರದ ಫರ್ಸ್ಟ ಲುಕ್ ಕೂಡ ಈಗಾಗಲೇ ಬಿಡುಗಡೆಯಾಗಿದ್ದು ಇದೀಗ ವಿವಾದ ಹುಟ್ಟಿಕೊಂಡಿದೆ.

ಪ್ರಸ್ಥನಂ ಚಿತ್ರದ ಫರ್ಸ್ಟ ಲುಕ್

ಇನ್ನು ನಾವು ಚಿತ್ರ ನಿರ್ಮಾಣಕ್ಕೆ ಉದ್ದೇಶಪೂರ್ವಕವಾಗಿ ನಾವು ಅಡ್ಡಗಾಲು ಹಾಕುವ ಯತ್ನ ಮಾಡುತ್ತಿಲ್ಲ. ಬದಲಾಗಿ ಈ ವಿವಾದ ಬಗ್ಗೆ ಚಿತ್ರ ತಂಡದೊಂದಿಗೆ ನಾವು ಕುಳಿತು ಮಾತನಾಡಿ ವಿವಾದ ಬಗೆಹರಿಸಲು ಸಿದ್ಧರಿದ್ದೇವೆ ಅಂತ ಶಿಮಾರೂ ತಿಳಿಸಿದೆ. ಇತ್ತೀಚೆಗಷ್ಟೇ ನಟ ಸಂಜಯ್ ದತ್ ಜುಲೈ 29ರಂದು ತಮ್ಮ 60ನೇ ಹುಟ್ಟುಹಬ್ಬದಂದು ಫ್ಯಾನ್ಸ್ ಗೆ ಸಿಹಿ ಸುದ್ದಿಯನ್ನು ನೀಡೋದಾಗಿ ತಿಳಿಸಿದ್ರು. ಅಂದೇ ಫ್ಯಾನ್ಸ್ ಜೊತೆ ಪ್ರಸ್ಥಾನಂ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸೋದಾಗಿಯೂ ಹೇಳಿದ್ರು. ಚಿತ್ರದಲ್ಲಿ ಜಾಕಿ ಶ್ರಾಫ್, ಮನೀಶಾ ಕೋಯಿರಾಲಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

- Advertisement -

Latest Posts

Don't Miss