Thursday, August 7, 2025

Latest Posts

‘ನಾವು ಬಿಹಾರಕ್ಕೆ ಹೋಗೋದು‌ ಬೇಡಾ, ಹುಬ್ಬಳ್ಳಿ ಧಾರವಾಡದಲ್ಲಿ ಮತ್ತೊಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ’.

- Advertisement -

Hubballi Political News: ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘರ್ ವಾಪ್ಸಿ ಹಿನ್ನೆಲೆಯಲ್ಲಿ, ಶೆಟ್ಟರ್ ವಿರುದ್ದ ಲಿಂಗಾಯತ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿದ ಲಿಂಗಾಯತ ನಾಯಕರು, ನಮ್ಮ ಸಮುದಾಯಕ್ಕೆ ಶೆಟ್ಟರ್ ಮೋಸ ಮಾಡಿ ಹೋಗಿದ್ದಾರೆ. ಲಿಂಗಾಯತ ‌ಮುಖಂಡ ಮೋಹನ ಲಿಂಬಿಕಾಯಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಸರ್ಕ್ಯೂಟ್ ಹೌಸ್ ದಲ್ಲಿ ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಯಾಕೆ ಬಿಜೆಪಿಗೆ ಹೋದ್ರು ಅನ್ನೋದೆ ನಿಗೂಢವಾಗಿದೆ. ಇಂತವರಿಂದ ಯುವಕರಿಗೆ ಏನೂ ಸಂದೇಶ ಹೋಗತ್ತೆ. ಶೆಟ್ಟರ್ ಹೋಗಿರೋದು ಸಮಾಜಕ್ಕೆ ಅನ್ಯಾಯ ಆಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಒಬ್ಬ ನೀತಿಶ್ ಕುಮಾರ್ ಹುಟ್ಟಿದ್ದಾರೆ. ನಾವು ಬಿಹಾರಕ್ಕೆ ಹೋಗೋದು‌ ಬೇಡಾ, ಜಗದೀಶ್ ಶೆಟ್ಟರ್ ಮತ್ತೊಬ್ಬ ನಿತೀಶ್ ಕುಮಾರ್ ಎಂದು ಮೋಹನ ಲಿಂಬಿಕಾಯಿ ಹೇಳಿದ್ದಾರೆ.

ಸ್ವಾರ್ಥಕ್ಕಾಗಿ ಇವತ್ತು ಇಲ್ಲೆ ನಾಳೆ ಮತ್ತೊಂದು ಕಡೆ ಅನ್ನೋದಕ್ಕೆ ದೇಶದಲ್ಲಿ ಜಗದೀಶ್ ಶೆಟ್ಟರ್ ಉದಾಹರಣೆ. ನೀತಿಗೆಟ್ಟ ರಾಜಕಾರಣ ಮಾಡೋರ ಹಿಂದೆ ಸಮಾಜ ಇಲ್ಲ. ಸಮಾಜದ ನಂಬಿಕೆಯನ್ನ ಜಗದೀಶ್ ಶೆಟ್ಟರ್ ಕಳೆದುಕೊಂಡಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬಿಜೆಪಿಗೆ ಹೋದಾಗ ಹಿಗ್ಗಾ ಮುಗ್ಗಾ ಬೈದಿದ್ರು. ಒಂದು ವಾರದ ಹಿಂದೆ ಕೂಡಾ ಬಿಜೆಪಿ ವಿರುದ್ದ ಮಾತಾಡಿದ್ರು. ಆದ್ರೆ ಇದೀಗ ಶೆಟ್ಟರ್ ಬಿಜೆಪಿಗೆ ಯಾಕೆ ಹೋದ್ರು ಅನ್ನೋದೆ ನಿಗೂಢ ಪ್ರಶ್ನೆ. ಮುಂಬರೋ ಲೋಕಸಭೆ ಟಿಕೆಟ್ ಲಿಂಗಾಯತರಿಗೆ ಕೊಡಬೇಕು ಎಂದು
ಹುಬ್ಬಳ್ಳಿಯಲ್ಲಿ ಲಿಂಗಾಯತ ಮುಖಂಡಿರಂದ ಜಗದೀಶ್ ಶೆಟ್ಟರ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

ಮೋದಿಗೆ ಮತ ಹಾಕಿದರೆ ಮಾತ್ರ ದೇಶ ನಂಬರ್ ಒನ್ ಆಗಲಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನಟ ಸೂರ್ಯ ಜೊತೆ ಡಿವೋರ್ಸ್ ವಿಚಾರ: ಸ್ಪಷ್ಟನೆ ನೀಡಿದ ನಟಿ, ನಿರ್ಮಾಪಕಿ ಜ್ಯೋತಿಕಾ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್ ಕುಮಾರ್..

- Advertisement -

Latest Posts

Don't Miss