ರಾಜಕೀಯ ಸುದ್ದಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೇಟ್ಟರ್ ಅವರಿಗೆ ಕೆಂದ್ರ ಗೃಹ ಸಚಿವ ಅಮಿತ್ ಶಾ ಅವರು ಪೋನ್ ಮಾಡಿದ್ದರು ಎನ್ನುವ ವಂದಂತಿಗಳು ಕೆಲವು ದಿನಗಳ ಹಿಂದೆ ಹಬ್ಬಿತ್ತು ಈ ಬಗ್ಗೆ ಇಲ್ಲಿಯವರೆಗೂ ಯಾವುದೇ ರೀತಿಯ ಹೇಳಿಕೆ ನೀಡದ ಶೇಟ್ಟರ್ ಅವರು ಇಂದು ವದಂತಿಗೆ ತೆರೆ ಎಳೆದಿದ್ದಾರೆ.
ಉಡುಪಿಯಲ್ಲಿ ಯಾರೋ ಪೋನ್ ಕರೆ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ನನಗೆ ಕಾಲ್ ಮಾಡಿದ್ರು ಅಂತ ಸುಳ್ಳು ಸುದ್ದಿ ಹಬ್ಬಸಿ ರಾಜಕೀಯ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಮಾಡಿದ್ದಾರೆ ಅಂತ ಹೇಳಿಕೆ ನೀಡಿದ್ದಾರೆ.
ಇನ್ನು ಜಗದೀಶ್ ಶೇಟ್ಟರ್ ಅವರಿಗೆ ಪಕ್ಷದ ನಿಷ್ಠೆಯಿಲ್ಲ ಅಂತ ಹೇಳಿಕೆ ನೀಡಿರುವ ವಿಚಾರಕ್ಕೆ ಜಗದೀಶ್ ಶೇಟ್ಟರ್ ಕಿಡಿಕಾರಿದ್ದಾರೆ.ಸುಕುಮಾರ್, ರಾಮದಾಸ್ ಅವರಿಗೆ ಪಕ್ಷಕ್ಕೆ ನಿಷ್ಠೆ ಇರ್ಲಿಲ್ವ ? ಪಕ್ಷಕ್ಕೆ ನಿಷ್ಠೆ ಅಂತ ಹೇಳಲಿಕ್ಕೆ ನಿಮಗೇನು ಅರ್ಹತೆ ಇದೆ.? ಪಕ್ಷಕ್ಕಾಗಿ ಕೆಲಸ ಮಾಡಿದವರನ್ನೆಲ್ಲಾ ಹೊರಗೆ ಹಾಕ್ತಾ ಇದ್ದಾರೆ.
ಇವರು ಜೋಶಿಯಾಗಲಿ ಯಾರಿಗೂ ಅರ್ಹತೆ ಇಲ್ಲಾ. ರಾಜ್ಯದಲ್ಲಿ ಬಿಜೆಪಿ ಗೆ ಅಸ್ತಿತ್ವದ ಪ್ರಶ್ನೆ ಬರ್ತಾ ಇದೆ. ಒಟ್ಟಾರೆ ಬಿಜೆಪಿಯಿಂದ ಬಂದೆ ಬರ್ತಾರೆ. ಬಿಜೆಪಿ ಗ್ರೌಂಡ್ ಲೆವೆಲ್ ಕಾರ್ಯಕರ್ತರು ನನಗೆ ಕರೆ ಮಾಡಿ ಕೇಳ್ತಾರೆ.ಇದನ್ನೆಲ್ಲಾ ಸಮಯ ಬಂದಾಗ ತಿಳಿಸ್ತೀನಿ. ಯಾರಿಗೂ ಪಕ್ಷ ಬಿಟ್ಟು ಬನ್ನಿ ಅಂದಿಲ್ಲ ಅವರಾಗಿಯೇ ನನಗೆ ಈಗಾಗಲೇ ಕರೆ ಮಾಡ್ತಾ ಇದ್ದಾರೆ.
Pressmeet :ಶಂಕರಪಾಟೀಲ್ ಮುನೇನಕೊಪ್ಪ ಸುದ್ದಿಗೋಷ್ಠಿ; ಕುತೂಹಲ ಕೆರಳಿಸಿದ ನಡೆ..!
‘ನಿವೃತ್ತ ನ್ಯಾಯಮೂರ್ತಿಗಳ ದಿನ ಬೆಳಗಿನ ಕೆಲಸ ಬಿಜೆಪಿ ಹಾಗೂ ನರೇಂದ್ರ ಮೋದಿಯವರನ್ನು ಬಯ್ಯೋದು’