Thursday, November 30, 2023

Latest Posts

School : ಶಿರಗುಪ್ಪಿ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲು ʼಬಣ್ಣದರ್ಪಣೆʼ ಅಭಿಯಾನ

- Advertisement -

Hubballi News : ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನು ನೀಡುವ ಸಲುವಾಗಿ ಬಣ್ಣದರ್ಪಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಚೈತ್ರ ಶಿರೂರು ಅವರು ಹೇಳಿದ್ದಾರೆ.

ಈ ಬಗ್ಗೆ ಹುಬ್ಬಳ್ಳಿ ತಾಲೂಕ್ ಶಿರಗುಪ್ಪಿ ಗ್ರಾಮದಲ್ಲಿ ಮಾತನಾಡಿದ ಅವರು, “ಸರ್ಕಾರಿ ಶಾಲೆಗಳಿಗೆ ಹೊಸ ರೂಪವನ್ನು ನೀಡಲು ಬಣ್ಣದರ್ಪನೆ ಅಭಿಯಾನವನ್ನು ಎಲ್ಲಾ ಜೋಶಿ ಅವರು ಚಾಲನೆ ಗೊಳಿಸಿದ್ದರು ಅದೇ ರೀತಿಯಾಗಿ ಶಿರಗುಪ್ಪಿಯ ಬ್ರಿಟಿಷ್ ಕಾಲದಿಂದಲೂ ಇರುವಂತಹ ನೂರು ವರ್ಷದ ಶಾಲೆಗೆ ಬಣ್ಣದರ್ಪಣೆ ಕಾರ್ಯಕ್ರಮ ಚಾಲನೆ ನೀಡಿದರು.

ಬಣ್ಣ ಕಳೆದುಕೊಂಡಿರುವ, ದುರಸ್ತಿಯ ಅಗತ್ಯ ಇರುವ ಶಾಲೆಗಳಿಗೆ ಹೊಸ ರೂಪ ನೀಡಲು ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ. ಸರ್ಕಾರಿ ಶಾಲಾ ಕಾಲೇಜುಗಳು ಯಾವುದೇ ರೀತಿಯಲ್ಲೂ ಸುಣ್ಣಬಣ್ಣ ಕಳೆದುಕೊಂಡು ಕಳೆಗುಂದಬಾರದು ಎಂಬ ಕಾರಣದಿಂದ ಈ ಅಭಿಯಾನವನ್ನು ಆಯೋಜನೆ ಮಾಡಲಾಗುತ್ತಿದೆ” ಎಂದಿದ್ದಾರೆ.

ಕ್ಷಮತಾ ಸೇವಾ ಸಂಸ್ಥೆ ಈ ಅಭಿಯಾನಕ್ಕಾಗಿ ಉಚಿತ ಬಣ್ಣಗಳನ್ನು ನೀಡಲು ಮುಂದಾಗಿದೆ. ಇದೇ ರೀತಿ ದಾನಿಗಳು ಅಭಿಯಾನಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ ಈ ಸಂದರ್ಭದಲ್ಲಿ ಶಿರುಗುಪ್ಪಿಯ ಗ್ರಾಮದ ಗುರುಹಿರಿಯರು ಭಾಗವಹಿಸಿದ್ದರು.

Rail timing change; ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ

ಪೇಶಾವರ ಶ್ರೀಗಳ ಹೇಳಿಕೆಗೆ ಅನುಮಾನ ವ್ಯಕ್ತಪಡಿಸಿದ ಸಚಿವ ಸಂತೋಷ್ ಲಾಡ್ ; ಏನದು ಹೇಳಿಕೆ ?

Tennis; ಟೆನಿಸ್ ಕೋಟ್ ನಲ್ಲಿ ಲಾಡ್ v/s ಬೆಲ್ಲದ್ ಮಹಾಕಾಳಗ

 

- Advertisement -

Latest Posts

Don't Miss