Thursday, September 19, 2024

Latest Posts

ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರೆ ನಟಿ ಶಿಲ್ಪಾ ಶೆಟ್ಟಿ..!

- Advertisement -

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ತೆಲುಗು ಚಿತ್ರದ ರಿಮೇಕ್‌ನಲ್ಲಿ ಕಾಣಸಿಗಲಿದ್ದಾರಂತೆ. ಮಕ್ಕಳಿಗಾಗಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದ ಶಿಲ್ಪಾ ಶೆಟ್ಟಿ, ತೆಲುಗು ರಿಮೇಕ್ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆ ಮೇಲೆ ಕಾಣಸಿಗಲಿದ್ದಾರೆ.

ಅಂಧಾಧುನ್. 2018ರಲ್ಲಿ ರಿಲೀಸ್ ಆಗಿದ್ದ ಶ್ರೀರಾಮ್ ರಾಘವನ್ ನಿರ್ದೇಶನದ ಬ್ಲಾಕ್‌ಬಸ್ಟರ್ ಹಿಂದಿ ಸಿನಿಮಾ. ಪಿಯಾನೋ ನುಡಿಸುವ ಓರ್ವ ಅಂಧ ಮತ್ತು ಅಕ್ರಮ ಸಂಬಂಧಕ್ಕೆ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿಯ ಥ್ರಿಲಿಂಗ್ ಸ್ಟೋರಿ ಇದಾಗಿತ್ತು.

ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿ ತಬು, ರಾಧಿಕಾ ಆಪ್ಟೆ, ನಟ ಆಯುಷ್ಮಾನ್ ಖುರಾನಾ ಬಣ್ಣ ಹಚ್ಚಿದ್ದರು.
ಇದೀಗ ಈ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಚಿತ್ರದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ನಟಿ ತಬು ಪಾತ್ರವನ್ನ ಈ ಚಿತ್ರದಲ್ಲಿ ಶಿಲ್ಪಾಶೆಟ್ಟಿ ನಿಭಾಯಿಸಲಿದ್ದಾರಂತೆ

ಆಯುಷ್ಮಾನ್ ಖುರಾನಾ ಪಾತ್ರವನ್ನ ತೆಲುಗು ನಟ ನಿತೀನ್ ಮಾಡಲಿದ್ದಾರೆ. ಸದ್ಯದಲ್ಲೇ ಶಿಲ್ಪಾಶೆಟ್ಟಿ ಈ ಚಿತ್ರಕ್ಕೆ ಸಹಿ ಮಾಡಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ತೆಲುಗಿನ ರಿಮೇಕ್ ಚಿತ್ರಕ್ಕೆ ಮೆರ್ಲಪಕ ಗಾಂಧಿ ನಿರ್ದೇಶನ ಮಾಡಲಿದ್ದಾರೆ.

ಬಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡಿದ್ದ ಈ ಚಿತ್ರ ಹಲವು ರಾಷ್ಟ್ರೀಯ ಪ್ರಶಸ್ತಿ, ಫಿಲ್ಮ್‌ಫೇರ್ ಅವಾರ್ಡ್ ಪಡೆದುಕೊಂಡಿದೆ.

ಇನ್ನು ಯೋಗ, ರಿಯಾಲಿಟಿ ಶೋ, ಅಡುಗೆ ಶೋ, ಫ್ಯಾಮಿಲಿ ಅಂತಾ ಬ್ಯುಸಿಯಾಗಿದ್ದ ಶಿಲ್ಪಾಶೆಟ್ಟಿ ಮತ್ತೆ ಸಿನಿಮಾಗೆ ಹಿಂದಿರುಗಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

https://youtu.be/Lf3ugVyszHk
- Advertisement -

Latest Posts

Don't Miss