Sunday, September 8, 2024

Latest Posts

‘ಬಿಜೆಪಿಯವರು ಊರೂರಿಗೆ ಬಾರ್ ಕೊಟ್ಟಿದ್ದೇ ಸಾಧನೆ’

- Advertisement -

ಹಾಸನ: ಜೆಡಿಎಸ್ ಮಾಡಿ ಶಾಸಕ ರೇವಣ್ಣ ಮತ್ತು ಶಿವಲಿಂಗೇಗೌಡ ಆಡಿಯೋ ಲೀಕ್‌ ಆಗುತ್ತಿದ್ದಂತೆ, ಶಿವಲಿಂಗೇಗೌಡರು ಇನ್ನು ಜೆಡಿಎಸ್ ತೊರೆದು, ಕಾಂಗ್ರೆಸ್ಸಿಗೆ ಬರುತ್ತಾರೆ ಅನ್ನೋದು ಕನ್ಫರ್ಮ್ ಆಗಿತ್ತು. ಅದೇ ರೀತಿ ಇಂದು ಶಿವಲಿಂಗೇಗೌಡರು, ತೆನೆ ಇಳಿಸಿ, ಕಾಂಗ್ರೆಸ್ ಪಕ್ಷ ಸೇರಿದ್ದಾರೆ.

ಬಳಿಕ ಮಾತನಾಡಿದ ಅವರು, ಇಂದು ಅಧಿಕೃತವಾಗಿ ನಾನು ಕಾಂಗ್ರೆಸ್ ಸೇರಿದ್ದೇನೆ. ಸಿದ್ದರಾಮಯ್ಯ ಅವರಿಗೆ ಹೇಗೆ ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದಂತೆ ನನ್ನ ಹಣೆಯಲ್ಲಿ ಹಾಗೆ ಬರೆದಿತ್ತು ಅಂತ ಕಾಣುತ್ತೆ ಹಾಗಾಗಿ ಕಾಂಗ್ರೆಸ್ ಸೇರಿದ್ದೇನೆ. ನೀವು ತೆಗೆದುಕೊಳ್ಳೋ ತೀರ್ಮಾನಕ್ಕೆ ಬದ್ದ ಎಂದು ನೀವು ಹೇಳಿದ್ರಿ. ಅದರಂತೆ ನಾನು ಕಾಂಗ್ರೆಸ್ ಸೇರಿದ್ದೇನೆ. ಸಂತೋಷ ಅಭಿಮಾನದಿಂದ ಹದಿನೈದು 20 ವರ್ಷದ ಸಂಬಂಧ ಕಡಿದುಕೊಂಡು ಬಂದಿದ್ದೇನೆ. ನನ್ನ ಸ್ವಾರ್ಥಕ್ಕಾಗಿ ನಾನು ಕಾಂಗ್ರೆಸ್ ಸೇರಿಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ಸೇರಿದ್ದೇನೆ. ಎತ್ತಿನ ಹೊಳೆ ಯೋಜನೆಗೆ ಅರಸೀಕೆರೆ ಸೇರಿಸಿದ್ದು ಸಿದ್ದರಾಮಯ್ಯ ಅವರು. ನಾನು ಇಬ್ಬರು ನಾಯಕರ ಮಡಿಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.

ಅರಸೀಕೆರೆ ಕ್ಷೇತ್ರಕ್ಕೆ ಬಿಜೆಪಿಗೆ ನಿಲ್ಲಲು ಬಂದಿರೊ ಪುಣ್ಯಾತ್ಮ ಇಲ್ಲಿ ಆಗಿರೊ ಎಲ್ಲಾ ಕಾರ್ಯಕ್ರಮ ಬಿಜೆಪಿದು ಎಂದಿದ್ದಾನೆ.. ಪತ್ರ ಬರೆಸಿ ಮನೆ ಮನೆಗೆ ಕಳಿಸಿದ್ದಾನೆ ಎಂದು ಹೆಸರು ಹೇಳದೇ, ಎನ್.ಆರ್.ಸಂತೋಷ ವಿರುದ್ಧ ಶಿವಲಿಂಗೇಗೌಡರು ಗರಂ ಆಗಿದ್ದಾರೆ. ಅರಸೀಕೆರೆ ಕ್ಷೇತ್ರದಲ್ಲಿ ಆಗಿರೊ ಯಾವುದೇ ಕಾರ್ಯಕ್ರಮ ಬಿಜೆಪಿ ಸರ್ಕಾರದಲ್ಲಿ ಆಗಿಲ್ಲ. ಕ್ಷೇತ್ರದ ಮನೆ ಮನೆಗೆ ನೀರು ಕೊಟ್ಡಿದ್ದು ಕಾಂಗ್ರೆಸ್ ಸರ್ಕಾರ ಸಿದ್ದರಾಮಣ್ಣ. ಎತ್ತಿನ ಹೊಳೆ ಕೊಟ್ಟಿದ್ದು ಕೂಡ ಕಾಂಗ್ರೆಸ್ ಸರ್ಕಾರ. ಇವರು ಹೇಳೋ ಸುಳ್ಳನ್ನು ನಂಬಬೇಡಿ. ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರಕ್ಕೆ ಇಳಿದಿದೆ ಎಂದು ಬಿಜೆಪಿ ವಿರುದ್ಧ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣಿಗಳ ಮಾನ ಮರ್ಯಾದೆಯನ್ನು ಬೀದಿಯಲ್ಲಿ ಹರಾಜಿಗೆ ಇಟ್ಟಿದಿರಿ. ನಿಮ್ಮನ್ನ ನೀತಿಗೆಟ್ಟ ಮಾನಗೆಟ್ಟ ಸರ್ಕಾರ ನೋಡಿಲ್ಲ. ಬಿಜೆಪಿಯವರು ಊರೂರಿಗೆ ಬಾರ್ ಕೊಟ್ಟಿದ್ದೇ ಸಾಧನೆ. ಗ್ಯಾಸ್ ಬೆಲೆ 1200 ಆಗಿದೆಯಲ್ಲಾ. ನಿಮಗೆ ಮಾನಾ ಮಾರ್ಯಾದೆ ಇದೆಯಾ..? ಜನ ಗ್ಯಾಸ್ ನಂಬಿ ಒಲೆ ಕಿತ್ತು ಹಾಕಿದಾರೆ. ಈಗ ಗ್ಯಾಸ್ ಬೆಲೆ ಏರಿದೆ ಎಂದು ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಅದಾನಿ ಪರವಾಗಿ ಇರೋ ಪಕ್ಷ.. ನಿಮಗೆ ಬಹಳ ಕಾಲ ಉಳಿಗಾಲ ಇಲ್ಲಾ ಹತ್ರಿರ ಬರ್ತಾಇದೆ ಅರ್ಥಮಾಡಿಕೊಳ್ಳಿ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಡಿ.ಕೆ.ಸುರೇಶ್ ರನ್ನ ನಂಬಿ ಪಕ್ಷಕ್ಕೆ ಬಂದಿದಿನಿ. ನನಗೂ 65 ವರ್ಷ ಆಗಿದೆ ಹಾಲಲ್ಲಾದರು ಹಾಕಿ ನೀರಲ್ಲಾದ್ರು ಹಾಕಿ. ಅರಸೀಕೆರೆಯ ಯಾವುದೇ ಊರಿಗೆ ಹೋದರು ಜನ ಅರಸೀಕೆರೆಗೆ ಯಾರೂ ಮಂತ್ರಿ ಆಗಲಿಲ್ಲ ಈ ಸಲವಾದ್ರೂ ಆಗುತ್ತೇನಣ್ಣ ಅಂತಾರೆ. ಏನ್ ಮಾಡ್ತೀರೊ, ನಿಮ್ಮ ಆಶೀರ್ವಾದ ಬೇಕು ಎಂದು ಶಿವಲಿಂಗೇಗೌಡ, ಜನತೆಯ ಆಶೀರ್ವಾದ ಕೇಳಿದ್ದಾರೆ.

ಪರೋಕ್ಷವಾಗಿ ಸರ್ಕಾರ ಬಂದರೆ ಸಚಿವ ಸ್ಥಾನಕೊಡಿ ಎಂದು ಶಿವಲಿಂಗೇಗೌಡ ಹಕ್ಕು ಮಂಡಿಸಿದ್ದಾರೆ. ಶಿವಲಿಂಗೇಗೌಡರನ್ನ ಬೆಳೆಸಿದ್ದೇನೆ ಅಂತಾರೆ. ಆಗ ಪಕ್ಷದ ಮತಗಳು ಎಷ್ಟಿದ್ದವು. ಈಗ 95 ಸಾವಿರಕ್ಕೆ ಮುಟ್ಡಿಸಿದ್ದೇನೆ. ಸಿದ್ದರಾಮಯ್ಯರನ್ನ ಹೊಗಳಿದ್ದೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಜಲಧಾರೆ ಕಾರ್ಯಕ್ರಮಕ್ಕೆ ಹೋಗದೆ ಅರಸೀಕೆರೆ ಕ್ಷೇತ್ರಕ್ಕೆ ಎಂಎಲ್ ಸಿ ಕೊಡಿ ಎಂದು ಕೇಳಿದ್ದೆ ಕೊಡಲಿಲ್ಲ ಎಂದು ಶಿವಲಿಂಗೇಗೌಡ, ಬೇಸರ ಹೊರಹಾಕಿದರು.

ತೆಂಗು ಬೆಳೆಗಾರರಿಗೆ ಪರಿಹಾರ ಕೊಡಿ ಎಂದು ಹೋರಾಟ ಮಾಡಿದ್ರೆ ನಾಟಕ ಮಾಡಿದಾ ಅಂತಾರೆ. ದೊಡ್ಡ ಗೌಡರ ಬಾಯಲ್ಲಿ ಇಂತಹ ಮಾತು ಬಂದಮೇಲೆ ಈ ಪಕ್ಷದಲ್ಲಿ ಇರಕೂಡದು ಎಂದು ತೀರ್ಮಾನ ಮಾಡಿದ್ದೆ. ರಾಜಕೀಯವೇ ಬೇಡಾ ಎಂದು ಕೊಂಡಿದ್ದೆ. ಆದರೆ ಜನರು ಬಿಡಲಿಲ್ಲ. ಹಾಗಾಗಿ ಕಾಂಗ್ರೆಸ್ ಸೇರಿದ್ದೇನೆ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.

‘ಹಾಸನ ನೋಡಿದ್ರೆ ಸಿನಿಮಾ ನೋಡಿದ ಹಾಗಾಗುತ್ತೆ’: JDS ಟಿಕೇಟ್ ಗೊಂದಲದ ಬಗ್ಗೆ ಸುರೇಶ್ ವ್ಯಂಗ್ಯ..

‘ಜೆಡಿಎಸ್‌ನಲ್ಲಿ ದೇವೇಗೌಡರು, ಕುಟುಂಬದವರು ಹೇಳಿದ್ದನ್ನ ಕೇಳಿಕೊಂಡು ಬಿದ್ದಿರಬೇಕು’

ನೂರಕ್ಕೆ ನೂರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರತ್ತೆ: ಭವಿಷ್ಯ ನುಡಿದ ಸಿದ್ದರಾಮಯ್ಯ..

- Advertisement -

Latest Posts

Don't Miss