Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ 5 ರೂ., 10 ರೂ. ಪಡೆದು ಔಷಧಿ ನೀಡುವ ಮಹಾಭಾವರಿದ್ದಾರೆ. ಇವರೆಲ್ಲ ರೋಗಿಗಳಿಗೆ ಸೇವೆ ಮಾಡಲೆಂದೇ ತಮ್ಮ ಜೀವನವನ್ನು ಮುಡಿಪಾಗಿರಿಸಿದ ವೈದ್ಯರೆನ್ನಬಹುದು.

ಆದರೆ ಕೋಲ್ಕತ್ತಾದಲ್ಲಿ ಇರುವ ಓರ್ವ ವೈದ್ಯ, ತಮ್ಮ ಕ್ಲಿನಿಕ್‌ಗೆ ಬರುವ ಯಾವ ರೋಗಿ ಜೈ ಶ್ರೀರಾಮ್ ಹೇಳುತ್ತಾನೋ, ಅವರಿಗೆ 500 ರೂಪಾಯಿ ರಿಯಾಯಿತಿ ನೀಡುತ್ತಿದ್ದಾರೆ. ಆದರೆ ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಇಲ್ಲಿನ ಹೃದ್ರೋಗ ತಜ್ಞರಾಗಿರುವ ಡಾ.ಪಿ.ಕೆ.ಹಜ್ರಾ ಬಿಜೆಪಿ ಪರವಾಗಿದ್ದು, ಇದೀಗ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆ, ಯಾರು ಜೈ ಶ್ರೀರಾಮ್ ಎನ್ನುತ್ತಾರೋ, ಅವರಿಗೆ 500 ರೂಪಾಯಿ ರಿಯಾಯಿತಿ ನೀಡೋದಾಗಿ ಹೇಳಿದ್ದಾರೆ. ಈ ಹೇಳಿಕೆ ಈಗ ವಿವಾದಕ್ಕೀಡಾಗಿದೆ.

ಈ ಬಗ್ಗೆ ಮಾತನಾಡಿರುವ ಹಜ್ರಾ, ನಾನು ಬಿಜೆಪಿಯ ಅನುಯಾಯಿ. ಜೈಶ್ರೀರಾಮ್ ಎಂಬುವುದು ರಾಜಕೀಯ ಘೋಷಣೆ ವಿನಃ ಧಾರ್ಮಿಕ ಘೋಷಣೆಯಾಗಿ ನಾನು ಹೇಳಲಿಲ್ಲ. ಹೀಗಾಗಿ ಯಾರು ಬೇಕಾದ್ರೂ ಜೈ ಶ್ರೀರಾಮ್ ಎಂದು ಹೇಳಬಹುದು. ರೋಗಿಗಳು ಪಾಡು ಪಡುವುದನ್ನು ನೋಡಿ ನಾನು ಅವರಿಗೆ ಈ ಆಫರ್ ನೀಡಿದ್ದೇನೆ. ನನ್ನ ಫೀಸ್ 2 ಸಾವಿರ ಆದ್ರೆ ಜೈ ಶ್ರೀರಾಮ್ ಎಂದವರಿಗೆ 1,500 ರೂಪಾಯಿ ಎಂದು ನಾನು ಹೇಳುತ್ತೇನೆ. ಇದರಿಂದ ನನಗೂ ಲಾಭ ಅವರಿಗೂ ಲಾಭ ಎನ್ನುತ್ತಾರೆ ಹಜ್ರಾ.

About The Author