Friday, July 11, 2025

Latest Posts

Raj b shetty ಗೆ ಫೋನ್ ಕಾಲ್ ಮೂಲಕ ಸರ್ಪ್ರೈಸ್ ಕೊಟ್ಟ ಶಿವಣ್ಣ

- Advertisement -

ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಸಿನಿಮಾ ರಿಲೀಸ್ ಆಗಿನಿಂದಲೂ ಇಲ್ಲಿಯವರೆಗೂ ರಾಜ್ ಬಿ ಶೆಟ್ಟಿಯವರು ಒಂದಲ್ಲ ಒಂದು ಸಂದರ್ಶನ ಈಗೆ ಫುಲ್ ಬ್ಯುಸಿಯಾಗಿದ್ರು , ಇದೀಗ ಯಾಟ್ರಿಕ್ ಹೀರೋ ಶಿವಣ್ಣ ರಾಜ್ ಬಿ ಶೆಟ್ಟಿಯವರಿಗೆ ಫೋನ್‌ಕಾಲ್ ಮಾಡುವ ಮೂಲಕ ಸರ್ಪ್ರೈಸ್ ನೀಡಿದ್ದಾರೆ, ಫೋನ್ ಕಾಲ್ ಮಾಡಿ ಮಂಗಳಾದೇವಿಯಲ್ಲಿ ನೀನೇನು ದೊಡ್ಡ ಡಾನಾ ಎಂದು ಶಾಕ್ ನೀಡಿದ್ದಾರೆ .

ಮಾಸ್ ಸ್ಟೈಲ್​ನಲ್ಲೇ ರಾಜ್ ಶೆಟ್ಟಿ ಕಾಲೆಳೆದಿದ್ದಾರೆ. ಮಂಗಳಾದೇವಿ ಗುಂಗಲ್ಲಿರುವ ರಾಜ್ ಕೂಡ ತಮ್ಮನ್ನು ಬಿಟ್ಟುಕೊಡದೇ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಇಷ್ಟಕ್ಕೂ ಈ ಸಂಭಾಷಣೆ ನಡೆದಿರುವುದು ಎಲ್ಲಿ? ಇದರಲ್ಲಿ ಹೊರಬಿದ್ದಿರೋ ಸಂತಸದ ವಿಚಾರವೇನು ಎಂಬ ಅನುಮಾನ ಕಾಡುತ್ತಿದೆಯೇ? ಇಲ್ಲಿದೆ ಉತ್ತರ .

ರಾಜ್ ಶೆಟ್ಟಿಯವರಿಗೆ ಕರೆ ಮಾಡಿದ ಶಿವಣ್ಣ, ಮಂಗಳಾದೇವಿಗೆ ನೀನೇನು ದೊಡ್ಡ ಡಾನಾ? ಎಂದು ಕೇಳಿದ್ದಾರೆ. ಯಾರು ಯಾರು ಎಂದು ಗೊಂದಲದಲ್ಲಿ ಕೇಳಿರುವ ರಾಜ್ ಶೆಟ್ಟಿಗೆ, ಅಲ್ಲೇ ಬರ್ಲಾ? ನಾನೋ ನೀನೋ ನೋಡೇ ಬಿಡೋಣ ಎಂದು ಖಡಕ್ ಆಗಿ ನುಡಿದಿದ್ದಾರೆ ಶಿವಣ್ಣ. ಸರಿ ಬನ್ನಿ, ನೋಡೇ ಬಿಡೋಣ ಎಂದು ಪ್ರತ್ಯುತ್ತರ ನೀಡಿದ್ದಾರೆ ರಾಜ್. ಜತೆಗೆ ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.

ಆಗ ಶಿವಣ್ಣ ನಾನು ಭಜರಂಗಿ ಎಂದು ನಕ್ಕಿದ್ದಾರೆ. ಒಂದು ಕ್ಷಣ ಯೋಚಿಸಿದ ರಾಜ್ ಶೆಟ್ಟಿಯವರಿಗೆ ನಂತರ ಅರಿವಾಗಿದೆ. ನಂತರ ಇಬ್ಬರೂ ಮಾತು ಮುಂದುವರೆಸಿದ್ದಾರೆ. ನೀವು ಭಜರಂಗಿ ಮಾಡಿದ ನಂತರ ನಮ್ಮ ಗರುಡ ಗಮನ… ಬಂದಿದ್ದು. ಆದ್ದರಿಂದ ನೀವೇ ದೊಡ್ಡ ಡಾನ್ ಎಂದು ತಮಾಷೆ ಮಾಡಿದ್ದಾರೆ ರಾಜ್ ಶೆಟ್ಟಿ.

ಜೊತೆಗೆ ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಎರಡು ಚಿತ್ರಗಳನ್ನು ನೋಡಿದ್ದೇನೆ ಬಹಳ ಸಹಜವಾಗಿಯೇ ನೀವು ಅಭಿನಯಿಸಿದ್ದಾರೆ. ಎಂದು ಪ್ರಶಂಶೆ ವ್ಯಕ್ತ ಪಡಿಸಿದ್ದಾರೆ.

- Advertisement -

Latest Posts

Don't Miss