- Advertisement -
Sandalwood News: ಸ್ಯಾಂಡಲ್ ವುಡ್ ನಟಿ, ಬ್ರಹ್ಮಗಂಟು ಸಿರಿಯಲ್ ಖ್ಯಾತಿಯ ನಟಿ ಶೋಭಿತಾ(30) ಇಂದು ಹೈದರಾಬಾದ್‌ನ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಟಿ ಶೋಭಿತಾ, ಬ್ರಹ್ಮಗಂಟು ಸಿರಿಯಲ್ ಮೂಲಕ ಪ್ರಸಿದ್ಧರಾಗಿದ್ದರೂ ಕೂಡ, ಅವರು 12ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಆದರೆ ಮದುವೆಯಾದ ಬಳಿಕ ಶೋಭಿತಾ ನಟನೆಯಿಂದ ದೂರ ಉಳಿದಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ರೀಲ್ಸ್ ಶೇರ್ ಮಾಡುತ್ತಿದ್ದರು.
ಅವರು ಎರಡು ವರ್ಷಗಳ ಹಿಂದೆ ಮದುವೆಯಾಗಿ, ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದರು. ಆದರೆ ಇದ್ದಕ್ಕಿದ್ದಂತೆ, ಇಂದು ಬೆಳಿಗ್ಗೆ ಶೋಭಿತಾ ಅವರ ನಿಧನದ ಸುದ್ದಿ ಹೊರಬಂದಿದೆ. ಮನೆಯಲ್ಲಿ ಶೋಭಿತಾ ನೇಣಿಗೆ ಶರಣಾಗಿದ್ದಾರೆ. ಸಾವಿಗೆ ಕಾರಣ ಏನು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಮರಣೋತ್ತರ ಪರೀಕ್ಷೆ ಬಳಿಕ, ಮೃತದೇಹ ಬೆಂಗಳೂರಿಗೆ ಬರಲಿದೆ. ಧಾರಾವಾಹಿ ನಟ, ನಟಿಯರು ಶೋಭಿತಾ ಸಾವಿಗೆ ಸಂತಾಪ ಸೂಚಿಸಿದ್ದಾರೆ.
- Advertisement -