Friday, March 21, 2025

Latest Posts

ಅಮೆಜಾನ್‌, ಫ್ಲಿಪ್‌ಕಾರ್ಟ್‌ಗಳಿಗೆ ಶಾಕ್!‌ : ದೇಶದ ವಿವಿಧೆಡೆ ಬಿಐಎಸ್‌ ಅಧಿಕಾರಿಗಳಿಂದ ರೇಡ್‌

- Advertisement -

News: ಕಳಪೆ ಗುಣಮಟ್ಟದ ಹಾಗೂ ಪ್ರಮಾಣೀಕರಿಸದ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದ ಹಿನ್ನೆಲೆ ಇ-ಕಾಮರ್ಸ್‌ ಜಾಲತಾಣ ಕಂಪನಿಗಳಾಗಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಗೋದಾಮುಗಳ ಮೇಲೆ ದೇಶದ ವಿವಿಧೆಡೆ ಭಾರತೀಯ ಮಾನಕ ಬ್ಯೂರೋ ಬಿಐಎಸ್‌ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಐಎಸ್‌ ಇಲಾಖೆಯ ಮಾನದಂಡಗಳನ್ನು ಪಾಲನೆ ಮಾಡದೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಈ ಎರಡೂ ಕಂಪೆನಿಗಳಿಗೆ ಸಂಬಂಧಿಸಿರುವ ಉತ್ತರಪ್ರದೇಶ, ದೆಹಲಿ ಸೇರಿದಂತೆ ಹಲವೆಡೆ ದಾಳಿ ಮಾಡಿ ಶೋಧ ನಡೆಸಿವೆ. ಅಲ್ಲದೆ ಈ ವೇಳೆ, ಮಕ್ಕಳು ಬಳಕೆ ಮಾಡುವ ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಮಕ್ಕಳಿಗೆ ಉಪಯೋಗಿಸುವ ಡೈಪರ್‌ಗಳು, ಆಹಾರ ಡಬ್ಬಿಗಳು ಮತ್ತು ಆಟಿಕೆಗಳು ಸೇರಿದಂತೆ ಒಟ್ಟು 3,600ಕ್ಕೂ ಅಧಿಕ ವಸ್ತುಗಳನ್ನು ಬಿಐಎಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಗೋದಾಮುಗಳ ಮೇಲೆಯೂ ದಾಳಿ ನಡೆಸಿ ತಪಾಸಣೆ ನಡೆಸಿದೆ.

ಎರಡು ವರ್ಷಗಳವರೆಗೆ ಶಿಕ್ಷೆಗೆ ಅವಕಾಶ..

ಅಲ್ಲದೆ ಇನ್ಸುಲೇಟೆಡ್ ಫ್ಲಾಸ್ಕ್‌ಗಳು, ಇನ್ಸುಲೇಟೆಡ್ ಆಹಾರ ಪಾತ್ರೆಗಳು, ಲೋಹದಿಂದ ತಯಾರಿಸಲಾಗುವ ಕುಡಿಯುವ ನೀರಿನ ಬಾಟಲಿಗಳು, ಸೀಲಿಂಗ್ ಫ್ಯಾನ್‌ಗಳು ಮತ್ತು ಆಟಿಕೆಗಳು ಸೇರಿದಂತೆ 36 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಅಮೆಜಾನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಸ್ತುಗಳನ್ನು ಬಿಐಎಸ್ ಪರವಾನಗಿ ಅಡಿಯಲ್ಲಿ ಬಿಐಎಸ್ ಸ್ಟ್ಯಾಂಡರ್ಡ್‌ನ ಅಂದರೆ ಐಎಸ್ಐ ಮಾರ್ಕ್ ಇಲ್ಲದೆ ತಯಾರಿಸಲು ಅಥವಾ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ಫ್ಲಿಪ್‌ಕಾರ್ಟ್‌ನಿಂದ, ಪಾಲನೆ ಮಾಡಬೇಕಾಗಿದ್ದ ಬಿಐಎಸ್ ಮಾನದಂಡದ ನಿಯಮಗಳಿಲ್ಲದೆ ಇರುವ ಬೇಬಿ ಡೈಪರ್‌ಗಳು, ಕ್ಯಾಸರೋಲ್‌ಗಳು, ಸ್ಟೇನ್‌ಲೆಸ್ ಸ್ಟೀಲ್ ನೀರಿನ ಬಾಟಲಿಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನೂ ಇವುಗಳ ಮೌಲ್ಯವನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ.

ಅಲ್ಲದೆ ಈ ರೀತಿ ಗ್ರಾಹಕರಿಗೆ ವಂಚಿಸುವ ಕೃತ್ಯಗಳಲ್ಲಿ ಭಾಗಿಯಾದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಅಪರಾಧಕ್ಕೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 2 ಲಕ್ಷ ರೂಪಾಯಿಗಳಿಗಿಂತಲೂ ಅಧಿಕ ದಂಡ ವಿಧಿಸಬಹುದಾಗಿದೆ. ಆದರೆ ನಿಯಮ ಉಲ್ಲಂಘನೆಗಾಗಿ ಬಿಐಎಸ್ ಕಾಯ್ದೆ, 2016 ರ ಸೆಕ್ಷನ್ 29 ರ ಪ್ರಕಾರ ಉತ್ಪಾದಿಸಿದ ಅಥವಾ ಮಾರಾಟ ಮಾಡಿದ ಅಲ್ಲದೆ ಮಾರಾಟ ಮಾಡಲು ನೀಡಲಾದ, ಪ್ರಮಾಣಿತ ಗುರುತು ಅಂಟಿಸಿದ ಅಥವಾ ಅನ್ವಯಿಸಿದ ಸರಕುಗಳು ಹಾಗೂ ವಸ್ತುಗಳ ಮೌಲ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ದಂಡ ಹೆಚ್ಚಿಸಲು ಅವಕಾಶವಿದೆ ಎಂದು ಚೆನ್ನೈನ ಬಿಐಎಸ್ ಮುಖ್ಯಸ್ಥ ಜಿ. ಭವಾನಿ ಹೇಳಿದ್ದಾರೆ.

- Advertisement -

Latest Posts

Don't Miss