ಸಿನಿಲೋಕ. ಒಮ್ಮೆ ಇಲ್ಲಿ ಧುಮುಕಿದರೆ ಮತ್ತೆ ಹೊರಬರಲು ಮನಸ್ಸಾಗದ ಮಾಯಾ ಲೋಕ.ಈ ಕಲರ್‌ಫುಲ್ ದುನಿಯಾದಲ್ಲಿ ಒಮ್ಮೆ ಸಕ್ಸಸ್ ಕಂಡುಕೊಂಡರೆ ಸಾಕು, ಜನ ನಿಮಗೆ ಹಾಲಿನಭಿಷೇಕವೇ ಮಾಡಿಬಿಡುತ್ತಾರೆ. ಆದ್ರೆ ಸಕ್ಸಸ್ ಕಾಣಲು ಶ್ರಮದ ಜೊತೆ ಗ್ಲಾಮರ್ ಕೂಡ ಮುಖ್ಯವಾಗಿರುತ್ತದೆ.
ಇಂಥ ಗ್ಲಾಮರ್ ಉಳಿಸಿಕೊಳ್ಳಲು ನಮ್ಮ ಸೆಲೆಬ್ರಿಟಿಗಳು ಮಾಡೋ ಕಸರತ್ತು ಅಷ್ಟಿಷ್ಟಲ್ಲ. ಡಯೇಟ್, ಜಿಮ್, ಹೆಲ್ದಿ ಆಹಾರ ಸೇವನೆ, ಹಣ್ಣು -ತರಕಾರಿ ಜ್ಯೂಸ್‌ಗಳ ಸೇವನೆ, ವ್ಯಾಯಾಮ ಎಲ್ಲವನ್ನೂ ಮಾಡ್ತಾರೆ. ಆದ್ರೆ ಅವರ ಸ್ಕಿನ್ ಹೊಳಪಿನ ನಿಜವಾದ ಗುಟ್ಟು ಒಂದು ಟ್ರೀಟ್‌ಮೆಂಟ್.
ಹೌದು, ಭಾರತೀಯ ಸಿನಿರಂಗದಲ್ಲಿ ಅದರಲ್ಲೂ ಬಾಲಿವುಡ್‌ನಲ್ಲಿ ಹೆಚ್ಚಾಗಿ ನಟಿಯರು ಕೊನೆತನಕ ತಮ್ಮ ಗ್ಲಾಮರ್ ಉಳಿಸಿಕೊಳ್ಳಲು ಹಲವು ರೀತಿಯ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಅಂತಹ ಟ್ರೀಟ್‌ಮೆಂಟ್‌ಗಳಲ್ಲಿ ಸ್ಕಿನ್ ಲೈಟ್ನಿಂಗ್ ಟ್ರೀಮ್‌ಮೆಂಟ್ ಕೂಡ ಒಂದು. ಬಹುತೇಕ ಬಾಲಿವುಡ್ ನಟಿಯರು ಈ ಟ್ರೀಟ್‌ಮೆಂಟ್‌ಗೆ ಒಳಗೊಂಡವರೇ ಆಗಿದ್ದಾರೆ.
1.. ಶ್ರೀದೇವಿ: ದಿವಂಗತ ನಟಿ ಶ್ರೀದೇವಿ ಹಲವು ಸರ್ಜರಿಗಳನ್ನ ಮಾಡಿಸಿಕೊಂಡಿದ್ದರು ಎಂಬ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಅವುಗಳಲ್ಲಿ ಸ್ಕಿನ್ ಲೈಟ್ನಿಂಗ್ ಟ್ರೀಮ್‌ಮೆಂಟ್ ಕೂಡ ಒಂದು.
2.. ಹೇಮಾಮಾಲಿನಿ: ಬಾಲಿವುಡ್ ಎವರ್‌ಗ್ರೀನ್ ನಟಿ, ಕನಸಿನ ರಾಣಿ ಹೇಮಾಮಾಲಿನಿ ಇಷ್ಟು ವಯಸ್ಸಾದರೂ ಯುವತಿಯಂತೆ ಕಾಣಲು ಕಾರಣ ಯತೇಚ್ಛ ನೀರಿನ ಸೇವನೆ ಮತ್ತು ಸ್ಕಿನ್ ಲೈಟ್ನಿಂಗ್ ಟ್ರೀಮ್‌ಮೆಂಟ್.
3.. ರೇಖಾ: ಬಾಲಿವುಡ್‌ನ ಎವರ್‌ಗ್ರೀನ್ ಮಾದಕ ನಟಿ ಎಂಬ ಪಟ್ಟಗಿಟ್ಟಿಸಿಕೊಂಡ ರೇಖಾ ಕೂಡ ಸ್ಕಿನ್ ಲೈಟ್ನಿಂಗ್ ಟ್ರೀಮ್‌ಮೆಂಟ್ ಪ್ರಯೋಗಿಸಿದ್ದಾರೆ.
4.. ಕಾಜೋಲ್: ದಿಲ್‌ವಾಲೆ ದುಲ್ಹನಿಯಾ ಲೇಜಾಯೆಂಗೇ ಸಿನಿಮಾದ ನಟಿ ಕಾಜೋಲ್ ಕೂಡ ಸ್ಕಿನ್ ಲೈಟ್ನಿಂಗ್ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದಾರೆ.
5.. ಶಿಲ್ಪಾಶೆಟ್ಟಿ: ಬಾಲಿವುಡ್‌ನಲ್ಲಿ ನಟನೆ, ನೃತ್ಯ, ಯೋಗದ ಮೂಲಕ ತನ್ನದೇ ಆದಂಥ ಛಾಪು ಮೂಡಿಸಿರುವ ಮಂಗಳೂರು ಬೆಡಗಿ ಶಿಲ್ಪಾಶೆಟ್ಟಿ ಗ್ಲಾಮರ್ ಹೆಚ್ಚೊಕ್ಕೆ ಕಾರಣ ಈ ಟ್ರೀಟ್‌ಮೆಂಟ್.
6.. ಪ್ರಿಯಾಂಕಾ ಛೋಪ್ರಾ: ಫಾರಿನ್ ಪ್ರಿಯಕರನೊಂದಿಗೆ ಹಸೆಮಣೆ ಏರಿದ್ದ ಪಿಗ್ಗಿ ಬಾಲಿವುಡ್‌ಗೆ ಎಂಟ್ರಿ ಕೊಡುವಾಗ ಗೋಧಿ ಬಣ್ಣ ಹೊಂದಿದ್ದರು. ಸದ್ಯದ ಅವರ ಹೊಳೆಯುವ ತ್ವಚೆಗೆ ಕಾರಣ ಸ್ಕಿನ್ ಲೈಟ್ನಿಂಗ್ ಟ್ರೀಟ್‌ಮೆಂಟ್.
7.. ದೀಪಿಕಾ ಪಡುಕೋಣೆ: ಮೊದಲು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು, ನಂತರ ಬಾಲಿವುಡ್‌ನಲ್ಲಿ ಭರ್ಜರಿ ಗೆಲುವು ಕಂಡು, ಹಾಲಿವುಡ್‌ನಲ್ಲೂ ಮನೆ ಮಾತಾಗಿರುವ ದೀಪಿಕಾ ಪಡುಕೋಣೆ ಕೂಡ ಸ್ಕಿನ್ ಲೈಟ್ನಿಂಗ್ ಟ್ರೀಟ್‌ಮೆಂಟ್‌ಗೆ ಒಳಗಾದವರೇ.
8.. ಬಿಪಾಶಾ ಬಸು: ಬಾಲಿವುಡ್ ಕೃಷ್ಣ ಸುಂದರಿ ಬಿಪಾಶಾ ಬಸು ಕೂಡ ಸ್ಕಿನ್ ಲೈಟ್ನಿಂಗ್ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದಾರೆ.