ಇತ್ತೀಚೆಗೆ ರಿಲೀಸ್ ಆಗಿ ಸೂಪರ್‌ಹಿಟ್ ಆಗಿ ಮುನ್ನುಗ್ತಿರೋ ಬೈಟು ಲವ್ ಚಿತ್ರತಂಡ ಮತ್ತಷ್ಟು ಸಿಹಿ ಸಂಭ್ರಮದ ಸುದ್ದಿ ಕೊಟ್ಟಿದೆ. ಯಶಸ್ವಿಯಾಗಿ ಮೂರನೇ ವಾರದತ್ತ ಮುನ್ನುಗ್ತಿರೋ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಕಲರ್‌ಫುಲ್ ಅಂಶಗಳ ಜೊತೆ ಒಳ್ಳೆಯ ಕಥೆಯ ಮೂಲಕವೂ ಮೋಡಿ ಮಾಡಿದ್ದ ಚಿತ್ರದಲ್ಲಿ ಲೀಲು-ಬಾಲು ಜೋಡಿ ಬಲು ಇಷ್ಟವಾಗಿತ್ತು. ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಸಾಗಿದ ಈ ಇಬ್ಬರೂ ಹೊಸ ನಾಯಕ ನಾಯಕಿ ಮಿಡ್ಲ್ಕ್ಲಾಸ್ ಜೀವನದ ಕಷ್ಟ ಸುಖಗಳ ಕಥೆಯನ್ನು ಅಚ್ಚುಕಟ್ಟಾಗಿ ಮನಸ್ಸು ಮನಸ್ಸುಗಳಿಗೆ ಮುಟ್ಟಿಸಿದ್ದಾರೆ.
ಈಗ ಚಿತ್ರ ಸ್ಯಾಂಡಲ್‌ವುಡ್ನಿಂದ ಟಾಲಿವುಡ್‌ಗೆ ಲಗ್ಗೆ ಇಡುವ ಸೂಚನೆ ನೀಡಿದೆ. ಕೆವಿಎನ್ ಪ್ರೊಡಕ್ಷನ್ಸ್ ಇದೇ ನಾಯಕ ನಾಯಕಿಯ ಜೋಡಿಯನ್ನು ಬೈಟುಲವ್ ಮೂಲಕ ತೆಲುಗಿನಲ್ಲೂ ಬೈಟುಲವ್ ಚಿತ್ರವನ್ನು ಕಲರ್‌ಫುಲ್ಲಾಗಿ ತೆರೆಗೆ ತರಲಿದೆ. ಹಾಗೆ ನೋಡಿದ್ರೆ ಶ್ರೀಲೀಲಾ ಈಗಾಗ್ಲೇ ತೆಲುಗು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಿದ್ದು, ಪೆಳ್ಳಿಸಂದಡಿ ಸಿನಿಮಾ ಸೂಪರ್‌ಹಿಟ್ ಆಗಿದೆ. ಚಿತ್ರದ ಯಶಸ್ಸನ್ನು ಬೈಟೂಲವ್ ಟೀಂ ಹಂಚಿಕೊAಡಿದ್ದು ನಿರ್ದೇಶಕ ಹರಿ ಸಂತೋಷ್ ಮತ್ತು ನಾಯಕ ಧನ್ವೀರ್ ನಾಯಕಿ ಶ್ರೀಲೀಲಾ ಜೊತೆ ಸಿನಿಮಾಟೋಗ್ರಫರ್ ಮಹೇನ್ ಸಿಂಹ ಭಾಗವಹಿಸಿದ್ರು.
ಬೇರೆ ಭಾಷೆಗಳಿಂದ ಬೈಟೂಲವ್ ಡಬ್ಬಿಂಗ್ ಗೆ ಆಫರ್ ಬಂದಿದ್ದರೂ ನಿರ್ಮಾಪಕರು ಚಿತ್ರವನ್ನು ತೆಲುಗಿನ ನಟರನ್ನು ಬಳಸಿಕೊಂಡು ರೀಮೇಕ್ ಮಾಡಲು ನಿರ್ಧರಿಸಿದ್ದು, ಸದ್ಯ ಕರ್ನಾಟಕದಲ್ಲೇ ಚಿತ್ರವನ್ನು ಮತ್ತಷ್ಟು ಜನರಿಗೆ ತಲುಪಿಸುವ ಯೋಚನೆಯಲ್ಲಿದ್ದೇವೆ ಅಂತ ಹೇಳಿದ್ರು. ಸದ್ಯ ಎಕ್‌ಲವ್‌ಯಾ, ಲವ್ ಮಾಕ್ಟೇಲ್ ಸೇರಿ ಬ್ಯಾಕ್ ಟು ಬ್ಯಾಕ್ ಲವ್ ಜಾನರ್ ಸಿನಿಮಾಗಳೇ ಚಿತ್ರಮಂದಿರಗಳಲ್ಲಿದ್ದರೂ ಬೈಟೂಲವ್ ಗೆಲುವಿನ ಓಟ ಮುಂದುವರಿಸಿದೆ.
ಟಾಲಿವುಡ್‌ಗೆ ಕಾಲಿಡಲಿದ್ದಾರೆ ಶೋಕ್ದಾರ್ ಧನ್ವೀರ್
- Advertisement -
- Advertisement -