Chikkodi News: ಚಿಕ್ಕೋಡಿ: ಕರ್ನಾಟಕ್ಕೆ ಗಡಿ ಹೊಂದಿರುವ ಮಹಾರಾಷ್ಟ್ರ ಗ್ರಾಮಗಳಲ್ಲಿ ಕನ್ನಡ ಶಾಲೆಗಳ ಸ್ಥಿತಿ ದುಸ್ಥಿತಿಯಾಗಿದೆ, ಗಡಿನಾಡು ಕನ್ನಡಿಗರ ಒತ್ತಾಯದ ಮೇರೆಗೆ ದಶಕಗಳ ಹಿಂದೆ ಕನ್ನಡ ಭಾಷೆ ಕಲಿಕೆಯ ಶಾಲೆಗಳ ನಿರ್ಮಾಣ ಮಾಡಲಾಗಿದ್ದು, ಆದರೆ ಆ ಶಾಲೆಗಳಿಗೆ ಶಿಕ್ಷಕ ಕೊರತೆ ಇರುವುದರಿಂದ ಕ್ರಮೇಣವಾಗಿ ಮಕ್ಕಳು ಮರಾಠಿ ಭಾಷೆಗಳಲ್ಲಿ ಹೆಚ್ಚು ಒಲವು ತೋರುತ್ತಿದ್ದು ಮಹಾರಾಷ್ಟ್ರ ಸರ್ಕಾರ ಗಡಿಯಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವಂಥ ಕುತಂತ್ರ ನಡೆಸುತ್ತಿದೆ ಎಂದು ಜತ್ತ ತಾಲೂಕಿನ ಕನ್ನಡಿಗರು ಮಹಾರಾಷ್ಟ್ರ ಸರ್ಕಾರ ಮೇಲೆ ಆರೋಪ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜತ್ ತಾಲೂಕಿನಲ್ಲಿ 82 ಕನ್ನಡ ಪ್ರಾಥಮಿಕ ಶಾಲೆಗಳಿಗೆ, ಪ್ರತಿಯೊಂದು ಶಾಲೆಗಳಲ್ಲಿ ಒಂದರಿಂದ ಎಂಟನೆಯ ತರಗತಿ ಕಲಿಯೋದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಆ ಶಾಲೆಗಳಲ್ಲಿ ಒಂದರಿಂದ ಎಂಟನೇ ತರಗತಿ ವಿದ್ಯಾಭ್ಯಾಸಕ್ಕೆ ಇಬ್ಬರೇ ಶಿಕ್ಷಕರನ್ನು ನೇಮಕ ಮಾಡಿ ಮಹಾ ಸರ್ಕಾರ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಅಲ್ಲಿನ ಸ್ಥಳೀಯ ಕನ್ನಡಿಗರು ಆರೋಪ ಮಾಡಿದ್ದಾರೆ.
ಜತ್ತ ತಾಲೂಕಿನ ಬಹುತೇಕ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯವಿಲ್ಲದೆ ಶಾಲೆಗಳು ಭೂತ ಬಂಗಲೆಯಂತೆ ಕಾಣುತ್ತಿವೆ , ಸುಣ್ಣ ಬಣ್ಣವಿಲ್ಲದೆ, ಕುಡಿಯೋ ನೀರು, ಶಾಲೆಗಳಿಗೆ ಕಾಂಪೌಂಡ್, ಮಳೆ ಬಂದ್ರೆ ಸೋರುತ್ತಿರುವ ಶಾಲೆ ಕೊಠಡಿಗಳು, ಶಿಕ್ಷಕರ ಕೊರತೆ , ಆಟದ ಮೈದಾನ ಇಂತಹ ಹಲವು ಸಮಸ್ಯೆಗಳಿಂದ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಕ್ರಮೇಣವಾಗಿ ಇಲ್ಲಿನ ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದ್ದಾವೆ ಎಂದು ಸ್ಥಳೀಯರು ಆತಂಕವನ್ನು ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ.21 ರಂದು ಹುಬ್ಬಳ್ಳಿಯಿಂದ ಧಾರವಾಡಕ್ಕೆ ಪಾದಯಾತ್ರೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪ ವಿಚಾರಕ್ಕೆ ಸ್ಪಷ್ಟನೆ ನೀಡಿದ ಸವದಿ..