ಶ್ರೇಯಾ ಘೋಷಾಲ್.. ಭಾರತದ ಅತ್ಯುತ್ತಮ ಹಾಡುಗಾರರಲ್ಲಿ ಒಬ್ಬರಾಗಿರುವ ಶ್ರೇಯಾ, ಹಲವರ ಫೆವರಿಟ್ ಸಿಂಗರ್. ಈಕೆಯ ಕಂಠಕ್ಕೆ ಮಾರುಹೋಗದವರಿಲ್ಲ. ಸಂಗೀತವನ್ನ ಇಷ್ಟಪಡದವರು ಈ ಭೂಮಿ ಮೇಲೆಯೇ ಇಲ್ಲ. ಅಂಥವರು ಇದ್ರು ಕೂಡಾ ಶ್ರೇಯಾ ಘೋಷಾಲ್ ಹಾಡು ಕೇಳಿಯಾದ್ರೂ ಸಂಗೀತವನ್ನ ಪ್ರೀತಿಯೋಕ್ಕೆ ಶುರು ಮಾಡ್ತಾರೆ. ಅಂಥ ಶಕ್ತಿ ಶ್ರೇಯಾ ಕಂಠದಲ್ಲಿದೆ.

ಮಾರ್ಚ್ 12, 1984ರಲ್ಲಿ ಪಶ್ಚಿಮ ಬಂಗಾಲದ ಬೆರಹಂಪುರ್ ಎಂಬಲ್ಲಿ ಬಿಶ್ವಜೀತ್ ಘೋಷಾಲ್ ಮತ್ತು ಶರ್ಮಿಷ್ಠಾ ಘೋಷಾಲ್ ದಂಪತಿಗೆ ಮೊದಲನೆ ಮಗುವಾಗಿ ಶ್ರೇಯಾ ಜನಿಸಿದರು. ನಾಲ್ಕು ವರ್ಷ ವಯಸ್ಸಿಗೆ ಸಂಗೀತ ಶಾಲೆಗೆ ಸೇರಿದ್ದ ಶ್ರೇಯಾ ಆ ಕಾಲದಲ್ಲೇ ಚಂದದ ಸ್ವರ ಹೊಂದಿದ್ದರು. ಇವರು ಬೆಂಗಾಲಿಯಾಗಿದ್ದು, ರಾಜಸ್ಥಾನದ ರಾವತ್ ಭಾಟಾ ಎಂಬಲ್ಲಿ ಇವರು ಬೆಳೆದಿದ್ದು. 8ನೇ ತರಗತಿಯ ಹೊತ್ತಿಗೆ ಮುಂಬೈಗೆ ಬಂದ ಶ್ರೇಯಾ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ಆಗಿನಿಂದಲೇ ತಯಾರಿ ನಡೆಸಿದ್ದರು.
ಪ್ರಸಿದ್ಧ ರಿಯಾಲಿಟಿ ಶೋ ಆಗಿದ್ದ ಸಾರೆಗಮಪ ಕಾಂಪಿಟೇಶನ್‌ನಲ್ಲಿ ಶ್ರೇಯಾ ವಿಜಯ ಸಾಧಿಸಿದರು. ಅಂದಿನಿಂದ ಶ್ರೇಯಾಗೆ ಶುಕ್ರದೆಸೆ ಶುರುವಾಯ್ತು. ಆಕೆ ಬಾಲಿವುಡ್‌ನಲ್ಲಿ ದೇವದಾಸ್ ಸಿನಿಮಾದಲ್ಲಿ ಬೇರಿ ಪಿಯಾ ಎಂಬ ಹಾಡು ಹಾಡಿ, ಅವಾರ್ಡ್ ಕೂಡಾ ಪಡೆದಳು, ತದನಂತರ ಎಲ್ಲ ಭಾಷೆಯ ಹಾಡುಗಳನ್ನ ಹಾಡಿ ಸೈ ಎನ್ನಿಸಿಕೊಂಡರು. ಶಾಸ್ತ್ರೀಯ ಸಂಗೀತವಷ್ಟೇ ಅಲ್ಲದೇ, ಎಲ್ಲ ರೀತಿಯ ಹಾಡುಗಳಿಗೆ ಶ್ರೇಯಾಳ ಕಂಠ ಸೆಟ್ ಆಗುತ್ತಿತ್ತು.
ಬೆಂಗಾಲಿ ಹಿಂದೂ ಪರಿವಾರದ ಈ ಬೆಡಗಿ, ಬೆಂಗಾಲಿ, ಹಿಂದಿ, ಕನ್ನಡ, ಮರಾಠಿ, ತೆಲುಗು, ತಮಿಳು, ಮಳಯಾಳಂ ಸೇರಿ ಹಲವು ಭಾಷೆಗಳ ಹಾಡಿಗೆ ಕಂಠದಾನ ಮಾಡಿದ್ದಾರೆ. ಶ್ರೇಯಾ ಘೋಶಾಲ್‌ಗೆ ಸಾಕಷ್ಟು ಪ್ರಶಸ್ತಿಗಳ ಸುರಿಮಳೆಯಾಗಿದೆ. ಈಕೆಯ ಹಾಡು ಪ್ರಶಸ್ತಿಗೆ ನಾಮಿನೇಟ್ ಆದ್ರೆ, ಆ ಪ್ರಶಸ್ತಿಗೆ ಈಕೆ ಪಾಲುದಾರಳು ಎಂದು ಎಲ್ಲರೂ ಅಂದಾಜಿಸುವ ಮಟ್ಟಿಗೆ ಶ್ರೇಯಾ ಬಾಲಿವುಡ್‌ನಲ್ಲಿ ಸಂಗೀತ ಸಾಮ್ರಾಜ್ಞೆ ಎನ್ನಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೇ, ಅಮೇರಿಕದ ಓಹಿಯೋ ರಾಜ್ಯದಲ್ಲಿ ಜೂನ್ 26ರಂದು ಶ್ರೇಯಾ ಘೋಷಾಲ್ ಡೇ ಎಂದು ಆಚರಿಸಲಾಗುತ್ತದೆ.
ಬಾಲ್ಯದ ಗೆಳೆಯನಾಗಿ ಶೀಲಾದಿತ್ಯ ಮುಖ್ಯೋಪಾಧ್ಯಾಯ್ ಎಂಬುವವರನ್ನೇ ಶ್ರೇಯಾ ವರಿಸಿದ್ದಾರೆ. ಕೋಟಿ ಕೋಟಿ ಜನರ ನೆಚ್ಚಿನ ಗಾಯಕಿಯಾಗಿರುವ ಶ್ರೇಯಾ ಘೋಷಾಲ್, ಎಷ್ಟೋ ಸಂಗೀತಗಾರರಿಗೆ ಮಾದರಿಯಾಗಿದ್ದಾರೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.




