Sunday, December 22, 2024

Latest Posts

ತೆಲುಗು ನಿರ್ಮಾಪಕರಿಗೆ ಶಾಕ್ ನೀಡಿದ ಶ್ರೀನಿಧಿ ಶೆಟ್ಟಿ.!

- Advertisement -

ಚಿತ್ರರಂಗದಲ್ಲಿ ಸಾಕಷ್ಟು ನಟಿಯರು 2-3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಇದೀಗ ಈ ವಿಚಾರದಲ್ಲಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಷಾಕಿಂಗ್ ವಿಚಾರವನ್ನು ನೀಡಿದ್ದಾರೆ.

ಮಾಜಿ ಸುಪ್ರಾನ್ಯಾಷನಲ್‌, ಕೆಜಿಎಫ್‌ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೆಜಿಎಫ್‌ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಕೆಜಿಎಫ್ ಚಿತ್ರದ ಮೂಲಕ. ‘ಕೆಜಿಎಫ್-2’ ಸಿನಿಮಾ ದೊಡ್ಡ ಹಿಟ್ ಆಗಿ, ಬಾಕ್ಸ್ ಆಫೀಸ್‌ ನ ಕಲೆಕ್ಷನ್ ನಲ್ಲಿ 1200 ಕೋಟಿ ರೂ ದಾಟಿದೆ. ಇದರಿಂದಾಗಿ ಶ್ರೀನಿಧಿ ಶೆಟ್ಟಿಗೂ ಕೂಡ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ನಟಿ ಶ್ರೀನಿಧಿ ಸಂಭಾವನೆ ವಿಚಾರದಲ್ಲಿ ತೆಲುಗು ಚಿತ್ರರಂಗಕ್ಕೆ ಶಾಕ್ ನೀಡಿದ್ದಾರೆ.

ಕೆಜಿಎಫ್ ಸರಣಿಯ ಸಿನಿಮಾ ನಂತರ ಶ್ರೀನಿಧಿಗೆ ಹೊಸ ಹೊಸ ಆಫರ್‌ಗಳು ಬರ್ತಿವೆ. ಈ ನಡೆವೆ ತೆಲುಗು ಚಿತ್ರರಂಗದಿಂದ ಶ್ರೀನಿಧಿಗೆ ಆಫರ್‌ ನೀಡಲಾಗಿದೆ. ಆದರೆ ಶ್ರೀನಿಧಿ ಕೇಳಿದ ಸಂಭಾವನೆ ಮೊತ್ತ ಕೇಳಿ ತೆಲುಗು ನಿರ್ಮಾಪಕರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಶ್ರೀನಿಧಿ 2 ಕೋಟಿ ರೂ ಸಂಭಾವನೆ ಕೇಳಿದ್ದು, ಈ ಪ್ರಮಾಣದ ಸಂಭಾವನೆಯನ್ನು ನೀಡಲು ತೆಲುಗು ನಿರ್ಮಾಪಕರು ಸಿದ್ಧರಿಲ್ಲ ಎನ್ನಲಾಗಿದೆ.

ಒಂದೇ ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆಯೇ, ನಟರ ಸಂಭಾವನೆ ಹೆಚ್ಚಾಗುತ್ತದೆ. ಹಾಗೂ ಅವರು ಕೇಳಿದಷ್ಟು ಸಂಭಾವನೆಯನ್ನು ನೀಡಲು ನಿರ್ಮಾಪಕರು ಸಿದ್ಧವಿರುತ್ತಾರೆ. ಆದರೆ ನಟಿಯರು ಹೆಚ್ಚು ಸಂಭಾವನೆ ಕೇಳಿದರೆ ಯಾಕೆ ಒಪ್ಪುವುದಿಲ್ಲ?. ಹಾಗೂ ಹೆಚ್ಚು ಸಂಭಾವನೆ ಕೇಳಿದರೆ ತಪ್ಪೇನು ಎಂದು ಕೆಲವರ ವಾದವಾಗಿದೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

- Advertisement -

Latest Posts

Don't Miss