ಕಲಬೆರಕೆ ಇಲ್ಲದ ಅಡುಗೆ ಎಣ್ಣೆ ವಿತರಣೆಗೆ ಶುದ್ಧ ಕಲ್ಪ ಸಂಕಲ್ಪ

Banglore news:

ಬೆಂಗಳೂರಿನ  ಕೃಷ್ಣಮೂರ್ತಿ ಕಾಂಪ್ಲೆಕ್ಸ್ ನಲ್ಲಿ ಶುದ್ಧ ಕಲ್ಪ ಶುಭಾರಂಭಗೊಂಡಿತು. ಬೆಂಗಳೂರಿನ ವಿಜಯ ಬ್ಯಾಂಕ್ ರೋಡ್, ಸಿರಿ ಕನ್ವೆನ್ಶನ್ ಹಾಲ್ ಪಕ್ಕದ ಕೃಷ್ಣಮೂರ್ತಿ ಕಾಂಪ್ಲೆಕ್ಸ್ ನಲ್ಲಿ ಮಳಿಗೆ ಇಂದು ಶುಭಾರಂಭಗೊಂಡಿದೆ. ಶುದ್ಧ ಕಲ್ಪ ತೈಲ ಉತ್ಪನ್ನದ ಮಳಿಗೆಯನ್ನು ಚಿಕ್ಕನಾಯಕನಹಳ್ಳಿ ವಿಧಾಸಭಾ ಕ್ಷೇತ್ರದ ಶಾಸಕ  ಜೆ.ಸಿ ಮಾದುಸ್ವಾಮಿ ಉದ್ಘಾಟಿಸಿ ಶುಭ ಹಾರೈಸಿದರು.ಇನ್ನು ಮಳಿಗೆಯು ಸಂಪೂರ್ಣ ಮರದಿಂದ ತಯಾರಿಸಿದ ಉಪಕರಣದಿಂದ ತೈಲವನ್ನು ತಯಾರಿಸುತ್ತಿದ್ದು ಇಲ್ಲಿ  ಶುದ್ಧ ತೆಂಗಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಕಡಲೆಕಾಯಿ ಎಣ್ಣೆ, ಕುಸುಬೆ ಎಣ್ಣೆ ದೊರೆಯುತ್ತದೆ. ಇದು ಸಂಪೂರ್ಣ ನೈಸರ್ಗಿಕ ತೈಲವಾಗಿದ್ದು ಯಾವುದೇ ರೀತಿಯ ಕಲಬೆರಕೆ ಇರುವುದಿಲ್ಲ.ನೇರವಾಗಿ ರೈತರಿಂದಲೇ ಕಚ್ಚಾವಸ್ತು ಪಡೆದು ತೈಲ ತಯಾರಿಸಲಾಗುತ್ತದೆ.

ತನ್ನ ಮಡದಿಯ ಕನಸಾಗಿತ್ತು ಇದು, ಹಾಗೆಯೇ ಪರಿಶುದ್ಧತೆಯ ಪ್ರತೀಕವೇ ಶುದ್ಧ ಕಲ್ಪ,ಕಲಬೆರಕೆಯಿಂದ ಬೇಸತ್ತಿರುವ ಜನರಿಗೆ ಇದೊಂದು ಉತ್ತಮ ಶುದ್ಧತೆಯ ಮಳಿಗೆ ಎಂಬುದಾಗಿ ಮಳಿಗೆಯ ಮುಖ್ಯಸ್ಥರಾದ ರಮ್ಯ ಅವರ ಪತಿ ಶುಭ ನುಡಿದರು.

ಮಳಿಗೆಗೆ ಆಗಮಿಸಿದ ಗ್ರಾಹಕರು ಉತ್ಪನ್ನಗಳ ಬಗ್ಗೆ ಮಳಿಗೆ ಸಂಸ್ಥಾಪಕರಿಂದ ತಿಳಿದುಕೊಂಡರು.ಜೊತೆಗೆ ಮಳಿಗೆ ಉತ್ಪನ್ನಗಳ ಬಗ್ಗೆ ರಮ್ಯ ಹಾಗು ಸಂತೋಷ್ ತಿಳಿಸಿಕೊಟ್ಟರು. ಗ್ರಾಹಕರು ಉತ್ಪನ್ನದ ಬಗ್ಗೆ ತಿಳಿದು ಶುಭ ಹಾರೈಸಿದರು.

ವೆಜ್ ಕಬಾಬ್, ಬೀಟ್‌ರೂಟ್ ಕಟ್ಲೇಟ್ ರೆಸಿಪಿ..

 

ಮಂಗಳೂರು ಶೈಲಿಯ ಸಜ್ಜಿಗೆ ಬಜಿಲ್ ರೆಸಿಪಿ..

About The Author