ಮಂಡ್ಯ: ಇಂದು ಮಾಜಿ ಸಿಎಂ ಸಿದ್ದರಾಮಯ್ಯ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ್ದಾರೆ. ಆರೋಪಿಗೆ ಮರಣದಂಡನೆಯೇ ಯೋಗ್ಯ ಶಿಕ್ಷೆ. ಬಹಳ ಅಮಾನುಷವಾಗಿ ಅತ್ಯಾಚಾರ ಮಾಡಿ, ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. 10 ವರ್ಷದ ಬಾಲಕಿ ಮೇಲೆ ನಡೆದಿರುವ ಕೃತ್ಯ ಸರಿಯಲ್ಲ. ಪ್ರಾಣಿಗಳು, ರಾಕ್ಷಸರು ಕೂಡ ಈ ರೀತಿ ಕೃತ್ಯ ಮಾಡಲ್ಲ. ಈ ಘಟನೆ ಅಕ್ಷಮ್ಯ ಅಪರಾಧ ಎಂದು ಸಿದ್ದರಾಮಯ್ಯ ಘಟನೆಯನ್ನು ಖಂಡಿಸಿದ್ದಾರೆ.
ಬಾಲಕಿ ಕುಟುಂಬಸ್ಥರ ಜೊತೆ ಮಾತನಾಡಿದ್ದೇನೆ. ಯಾವ ಹೆಣ್ಣು ಮಕ್ಕಳಿಗೂ ಈ ತರಹ ಹಾಗಬಾರದು. ಈ ತರಹ ಘಟನೆ ನಡೆಯಬಾರದು. ಆರೋಪಿಗೆ ಮರಣದಂಡನೆ ಆಗಬೇಕು. ಯಾರು ಕೂಡ ಈ ಕೆಲಸ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ “ಬನಾರಸ್” ಚಿತ್ರದ ಪ್ರೀ ರಿಲೀಸ್ ಇವೆಂಟ್: ಇವೆಂಟ್‌ಗೆ ಬರಲಿದ್ದಾರೆ ದರ್ಶನ್!
ಹೆಣ್ಣು ಮಕ್ಕಳು ಶಾಲೆ, ಟ್ಯೂಷನ್ ಗೆ ಹೋಗ್ತಾರೆ. ಶಿಕ್ಷಕರು ಅಂದ್ರೆ ಗುರುಗಳು ನಂಬಿಕೆ ಇಟ್ಟು ವಿಶ್ವಾಸ ಇಟ್ಟು ಟ್ಯೂಷನ್ ಗೆ ಹೋಗ್ತಾರೆ. ಗುರುಗಳೆ ಈ ತರ ಹಾದ್ರೆ ಹೇಗೆ.? ಬೇಲಿನೇ ಎದ್ದು ಹೊಲ ಮೇಯ್ದ ಹಾಗೆ. ಅವನು ಪ್ರಾಣಿ ಇದ್ದಾಗೆ, ಆ ತರಹದ ಪ್ರಾಣಿಗೆ ಸಮಾಜದಲ್ಲಿ ಉಳಿಗಾಲ ಇಲ್ಲ. ಅಂತಹವರನ್ನ ಉಳಿಸಬಾರದು, ಮರಣದಂಡನೆ ಕೊಡಬೇಕು. ಪೊಲೀಸರು ಕಠಿಣ ಶಿಕ್ಷೆ ಕೊಡಿಸಬೇಕು. ಒಳ್ಳೆಯ ಸಾಕ್ಷಿ ಕೊಟ್ಟು ಶಿಕ್ಷೆ ಕೊಡಿಸಬೆಕು. ಆರೋಪಿಗೆ ಮರಣದಂಡನೆ ನೇ ಯೋಗ್ಯ ಶಿಕ್ಷೆ. ಅತ್ಯಾಚಾರ, ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಮೃತ ಬಾಲಕಿ ಕುಟುಂಬಕ್ಕೆ 2 ಲಕ್ಷ ಪರಿಹಾರ ವಿತರಿಸಿದ್ದಾರೆ. ಜೊತೆಗೆ ಮಾಜಿ ಸಚಿವ ಚಲುವರಾಯಸ್ವಾಮಿ 50 ಸಾವಿರ ಪರಿಹಾರ ವಿತರಣೆ ಮಾಡಿದ್ದಾರೆ. ಜಮೀರ್ ಅಹಮ್ಮದ್ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದು, ಮೃತ ಬಾಲಕಿ ಕುಟುಂಬಸ್ಥರ ಜೊತೆ ನಿರಂತರವಾಗಿ ಇರುತ್ತೇವೆ ಎಂದು ಭರವಸೆ ಕೂಡ ನೀಡಿದ್ದಾರೆ.