Saturday, July 27, 2024

Latest Posts

ಉರಿಗೌಡ ಮತ್ತು ನಂಜೇಗೌಡ ಹೆಸರಿನ ನಕಲಿ ಆಧಾರ್ ಕಾರ್ಡ್ ಬಿಡುಗಡೆ…

- Advertisement -

ಕೋಲಾರ : ಸಿದ್ದರಾಮಯ್ಯ ಪರ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್ ಖಾತೆಯಿಂದ, ಉರಿಗೌಡ ಮತ್ತು ನಂಜೇಗೌಡ ಹೆಸರಿನ ನಕಲಿ ಆಧಾರ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.  420420420 ಎಂಬ ನಂಬರ್ ನ ನಕಲಿ ಆಧಾರ್ ಕಾರ್ಡ್ ರಿಲೀಸ್ ಮಾಡಲಾಗಿದೆ. ಹೀಗೆ ಆಧಾರ್ ಕಾರ್ಡ್ ರಿಲೀಸ್ ಮಾಡುವ ಮೂಲಕ, ಸಿದ್ದರಾಮಯ್ಯ ಫಾಲೋವರ್ಸ್, ಬಿಜೆಪಿಗರನ್ನ ವ್ಯಂಗ್ಯ ಮಾಡಿದ್ದಾರೆ.

ಉರಿಗೌಡ ತಾಯಿ ಅಶ್ವತ್ ನಾರಾಯಣ, ತಂದೆ ಸಿಟಿ ರವಿ ಎಂದು ಈ ಆಧಾರ್ ಕಾರ್ಡ್‌ನಲ್ಲಿ ಉಲ್ಲೇಖಿಸಿ ವ್ಯಂಗ್ಯ ಮಾಡಲಾಗಿದೆ. ಉರಿಗೌಡ ನಂಜೇಗೌಡ ವಿವಾದ ಕುರಿತು ಕಾಂಗ್ರೇಸ್ ಟೀಕೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ‘ಸಿದ್ದರಾಮಯ್ಯ ನಮ್ಮವರು’ ಅಕೌಂಟ್ ನಿಂದ ಈ ಪೋಸ್ಟ್ ವೈರಲ್ ಆಗಿದೆ.

ಉರಿಗೌಡ ನಂಜೇಗೌಡ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಉರಿಗೌಡ ನಂಜೇಗೌಡ ಹುಟ್ಟಿದ ಸ್ಥಳ ಮಲ್ಲೇಶರಂನ ಬಿಜೆಪಿ ಕಛೇರಿಯಲ್ಲಿ ಎಂದು ಹೇಳಿದ್ದಾರೆ. ಟಿಪ್ಪು ವಿಚಾರದಲ್ಲಿ ಕಾಲ್ಪನಿಕ ವ್ಯಕ್ತಿಗಳಾದ ಉರಿಗೌಡ ನಂಜೇಗೌಡರ ಕುರಿತು ಕಾಂಗ್ರೇಸ್ ಪೋಸ್ಟ್ ವಾರ್ ಮಾಡಿದ್ದು, ಈ ರೀತಿ ಆಧಾರ್ ಕಾರ್ಡ್ ಬಿಡುಗಡೆ ಮಾಡಿದೆ. ಕೆಲವೇ ದಿನಗಳಲ್ಲಿ ಉರಿಗೌಡ ಮತ್ತು ನಂಜೇಗೌಡ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಕೂಡ ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.

ನಿರ್ಮಲಾನಂದ ಸ್ವಾಮೀಜಿ ಭೇಟಿಯಾದ ಸಚಿವ ಮುನಿರತ್ನ: ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಬ್ರೇಕ್…

‘ಇನ್ನೊಂದು ಸ್ವಲ್ಪ ಬಿಚ್ಚೋದು ಐತೆ, ಎಳೆಎಳೆಯಾಗಿ ಬಿಚ್ತಿನಿ’

ಸಿದ್ದರಾಮಯ್ಯ ಮನೆಗೆ ಹೋಗಲು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರ ನಿರ್ಧಾರ.. ಯಾಕೆ ಗೊತ್ತಾ..?

- Advertisement -

Latest Posts

Don't Miss