ನವದೆಹಲಿ: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, 2 ವರ್ಷ ಸಿದ್ದರಾಮಯ್ಯ ಸಿಎಂ ಆಗಲಿದ್ದು, ಉಳಿದ 3 ವರ್ಷ ಡಿಕೆಶಿ ಸಿಎಂ ಆಗಲಿದ್ದಾರೆ. ಹಾಗಾಗಿ ಸದ್ಯಕ್ಕೆ ಡಿಕೆಶಿಗೆ ಡಿಸಿಎಂ ಪಟ್ಟ ಕೊಡಲಾಗಿದೆ.
ಗುರುವಾರದೊಳಗೆ ಸಿಎಂ ಯಾರೆಂದು ಘೋಷಣೆ ಮಾಡುತ್ತೇವೆ. ಅಂದೇ ಸಿಎಂ ಆದವರು ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ ಎಂದು ಹೇಳಲಾಗಿತ್ತು. ಅದರ ಪ್ರಕಾರ, ಸಿಎಂ ಆಗಿ ಸಿದ್ದರಾಮಯ್ಯ ನಾಳೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಡಿಕೆಶಿಗೆ ಡಿಸಿಎಂ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದರೂ ಕೂಡ, ಡಿಸಿಎಂ ಸ್ಥಾನಕ್ಕೆ ಡಿಕೆಶಿ ಒಪ್ಪಿಗೆ ಸೂಚಿಸಿಲ್ಲ.
ಸಿದ್ದರಾಮಯ್ಯ ಎರಡನೇ ಬಾರಿಗೆ ಸಿಎಂ ಆಗುತ್ತಿರುವುದಕ್ಕೆ, ಸಿದ್ದು ಅಭಿಮಾನಿಗಳು ಸಿದ್ದು ಪರ ಘೋಷಣೆ ಕೂಗಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯರ ಮನೆ ಮುಂದೆ ಜಮಾವಣೆಗೊಂಡಿರುವ ಕಾರ್ಯಕರ್ತರು, ಸಿದ್ದರಾಮಯ್ಯಗೆ ಜೈಕಾರ ಹಾಕಿದ್ದು, ವರುಣಾದಲ್ಲೂ ಸಿದ್ದು ಅಭಿಮಾನಿಗಳು ಸಂಭ್ರಮಿಸಿದ್ದಾರೆ.
‘ಮಾಜಿ ಶಾಸಕರಿಗೆ ಹೆದರಿ ಅಧಿಕಾರಿಗಳು ಯಾವುದೇ ಕಳ್ಳ ಬಿಲ್‌ಗಳಿಗೆ ಸಹಿ ಹಾಕಬಾರದು’
‘ಸಿಎಂ ಯಾರೇ ಆದರೂ ಸ್ವಾಗತ ಮಾಡ್ತೀನಿ. ಯಾರೇ ಆದರೂ ರಾಜ್ಯದ ಅಭಿವೃದ್ಧಿ ಮಾಡಲಿ’