Thursday, November 21, 2024

Latest Posts

ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಡಮಾರ್. ಟೈಮ್ ಬಾಂಬ್ ಫಿಕ್ಸ್ ಆಗಿದೆ: ಸಿ.ಟಿ.ರವಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಶಾಸಕ ಸಿ.ಟಿ.ರವಿ ಕಳ್ಳನ ಹೆಂಡತಿ ಯಾವತ್ತಿದ್ದರೂ ಡ್ಯಾಶ್ ಡ್ಯಾಶ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಡಮಾರ್. ಟೈಮ್ ಬಾಂಬ್ ಫಿಕ್ಸ್ ಆಗಿದೆ. ಸಂಕ್ರಾಂತಿ ದೂರ ಆಯ್ತು,ದೀಪಾವಳಿ ಒಳಗೆ ಕಾಂಗ್ರೆಸ್ ,ಸಿದ್ದರಾಮಯ್ಯ ಸರ್ಕಾರ ಢಮಾರ್. ಹೊಸ ಸಿಎಂ,ಹೊಸ ಸರ್ಕಾರನಾ ಅಂದ್ರೆ ಕಾಲ ನಿರ್ಣಯ ಮಾಡತ್ತೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ನಿಗದಿ ಆಗಿದೆ. ಹೊರಗಡೆ ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದಿವಿ ಅಂತಾರೆ ಒಳಗೆ ಸಂಚು ಮಾಡತ್ತಾರೆ. ಸಿದ್ದರಾಮಯ್ಯ ಹೋಗೋದು ಫಿಕ್ಸ್. ಹೀಗಾಗಿ ಕಾಂಪಿಟೇಶನ್ ಶುರುವಾಗಿದೆ. ಒಂದು ಡಜನ್ ಗೆ ಹೆಚ್ಚು ಜನ ಆಕಾಂಕ್ಷಿಗಳಾಗಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ದಾರೆ.

ಸಿಎಂ ಸಂಗೊಳ್ಳಿ ರಾಯಣ್ಣ ಪಿತೂರಿಗೆ ಬಲಿಯಾಗಿದ್ದಾರೆ ಅಂತ ಸ್ಟೊರಿ ಹೇಳುತ್ತಾರೆ. ಆದ್ರೆ ನೀವು ಸಂಗೊಳ್ಳಿ ರಾಯಣ್ಣ ಅಂತಾ ನಾನು ಭಾವಿಸಲ್ಲ. ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ.

ಇದು ಭ್ರಷ್ಟಾಚಾರದ ಸರ್ಕಾರ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಸುಳ್ಳು ಲೆಕ್ಕ ಕಳ್ಳ ಬಿಲ್ಲು 100 ಪರ್ಸೆಂಟ್ ಲೂಟಿ ಮಾಡಿದ್ದಾರೆ. ಅವರ ಹಗರಣ ಮರೆಮಾಚೋಕೆ ಇನ್ನೊಬ್ಬರ ಕಡೆ ಬೊಟ್ಟು ಮಾಡೋದು.

ತಪ್ಪು ಯಾರ ಮಾಡಿದ್ರು ತಪ್ಪೇ. ಅವರ ತರಹ ಜಾತಿ ಗುರಾಣಿ ಬಳಸಲ್ಲ. ಭ್ರಷ್ಟಾಚಾರ ಮುಚ್ಚಿ ಹಾಕೋಕೆ ಸಾಧ್ಯ ಇಲ್ಲ. ಸತ್ಯ ಯಾವತ್ತಾದರೂ ಹೊರಬರಲೇಬೇಕು. ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿ ಇರಬಾರದು. ನಾವು ಇವತ್ತು ಈದ್ಗಾ ಮೈದಾನದಲ್ಲಿ ಭಗವಾ ದ್ವಜಾ ಹಾರಿಸಿದ್ದೇವೆ. ಮೂವತ್ತು ವರ್ಷಗಳ ಹಿಂದೆ ನಾನು ಇಲ್ಲಿ ಹೋರಾಟ ಮಾಡೋಕೆ ಬಂದಿದ್ದೆ. ಇವತ್ತು ಇಲ್ಲಿ ಭಗವಾ ದ್ವಜಾ ಹಾರಿಸಿದ್ದೇವೆ. ಇದು ನಮ್ಮ ಭೂಮಿ. ಹಿಂದುತ್ವ ಬಿಟ್ಟು ಭಾರತ ಇಲ್ಲ ,ಭಾರತವನ್ನು ಬಿಟ್ಟು ಹಿಂದೂತ್ವ ಇಲ್ಲ. ರಾಣಿ ಚೆನ್ನಮ್ಮ ಮೈದಾನದಲ್ಲಿ ಇವತ್ತು ಗಣೇಶ ಪ್ರತಿಷ್ಠಾಪನೆ ಆಗಿದೆ. ಭಾರತ ಅಂದ್ರೆ ಚೈತನ್ಯ ಭೂಮಿ,ಕರ್ಮ ಭೂಮಿ ಎಂದು ಸಿ.ಟಿ.ರವಿ ಹೇಳಿದ್ದಾರೆ.

- Advertisement -

Latest Posts

Don't Miss