Hubli News: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ನಡುವೆ ಜಿಎಸ್ಟಿ ಅನುದಾನ ವಿಚಾರವಾಗಿ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಇದರ ಜೊತೆಗೆ ಅಧಿಕಾರಿಗಳಿಗೆ, ಶಾಸಕರಿಗೆ ವೇತನ ನೀಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಇತ್ಯಾದಿ ಆರೋಪಗಳನ್ನು ರಾಜ್ಯ ಬಿಜೆಪಿ ನಾಯಕರು ಮಾಡಲಾರಂಭಿಸಿದ್ದಾರೆ. ಇದೀಗ ಹುಬ್ಬಳ್ಳಿಯಲ್ಲಿ ಮಾತನಾಡಿದ ಅರವಿಂದ ಬೆಲ್ಲದ್, ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿದ್ದಾರೆ ಎಂದರು.
ಹುಬ್ಬಳ್ಳಿ,: ಈ ಹಿಂದೆ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ರಾಜ್ಯ ಹಳ್ಳ ಹಿಡಿಸಿದ್ದರು. ಇದೀಗ ಮತ್ತೆ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾರಾಯಿ ಕುಡಿಯುವವರು ಅತೀ ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ ನಮ್ಮ ಸಾರಾಯಿ ನಮ್ಮ ತೆರಿಗೆ ಅನ್ನೋಕೆ ಆಗತ್ತಾ ಎಂದು ಹೇಳುವ ಮೂಲಕ ಕಾಂಗ್ರೆಸ್ನ ‘ನಮ್ಮ ತೆರಿಗೆ ನಮ್ಮ ಹಕ್ಕು’ ಅಭಿಯಾನಕ್ಕೆ ತಿರುಗೇಟು ನೀಡಿದರು. ತಿಪ್ಪರಲಾಗ ಹಾಕಿದರೂ ಬಿಜೆಪಿಯನ್ನು ಏನೂ ಮಾಡಲು ಆಗಲ್ಲ. ಇದು ಜೋಶಿ, ಮೋದಿ ಚುನಾವಣೆ ಅಲ್ಲ ಇದು ದೇಶದ ಚುನಾವಣೆ. ಭಾರತದ ಸಾರ್ವಭೌಮಕ್ಕಾಗಿ ಚುನಾವಣೆ ಎಂದು ಬೆಲ್ಲದ್ ಹೇಳಿದರು.
ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುವ ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ವರ್ಸಸ್ ಕೇಂದ್ರ ಸರ್ಕಾರ ಎಂಬುದು ಅವರ ಪ್ಲ್ಯಾನ್ ಆಗಿದೆ ಎಂದು ಹೇಳಿದ ಬೆಲ್ಲದ್, ಅವರ ಬಳಿ ದುಡ್ಡು ಇಲ್ಲ, ನಾವ ಒಂದೇ ಒಂದು ಕಡಿ ಹಾಕಿಲ್ಲ. ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆ ಮಾಡಿದ್ದಾರೆ. ಟಾಪ್ ಟು ಬಾಟಮ್ ದಂಧೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಜನರ ಬೇಡಿಕೆ ಈಡೇರಿಸಲು ಆಗುತ್ತಿಲ್ಲ. ಸಂಪೂರ್ಣವಾಗಿ ಭರವಸೆ ಕಳೆದುಕೊಂಡಿದೆ ಎಂದರು.
ಪ್ರಲ್ಹಾದ್ ಜೋಶಿ ಅವರನ್ನು ಹೊಗಳಿದ ಅರವಿಂದ ಬೆಲ್ಲದ್
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ ಬೆಲ್ಲದ್, ಕ್ಷೇತ್ರದಲ್ಲಿ ಎಲ್ಲ ಅಭಿವೃದ್ಧಿ ಕೆಲಸ ಮಾಡಿದವರು ಜೋಶಿ. ಅಂಗನವಾಡಿ, ಶಾಲೆಯನ್ನು ಮಾಡಿದ ಶ್ರೇಯಸ್ಸು ಜೋಶಿ ಅವರಿಗೆ ಸಲ್ಲುತ್ತದೆ. IIT, IIIT ಮಾಡಿಸಿದ್ದು ಜೋಶಿ. ವಿಮಾನ ನಿಲ್ದಾಣ, ಏರಪೋರ್ಟ್ ಮಾಡಿಸಿದ್ದು ಜೋಶಿ. ಒಬ್ಬ ಜನ ಪ್ರತಿನಿಧಿಯಾಗಿ ಎಲ್ಲ ಕೆಲಸವನ್ನು ಮಾಡಿದ್ದು ಜೋಶಿ ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಜೋಶಿ ಮಾದರಿ ಎಂದು ಹೇಳಿದ ಬೆಲ್ಲದ್, ಜೋಶಿ ಅವರಿಗೆ ಯಾವ ಜಾತಿ ಇಲ್ಲ, ಅವರು ಜನ ಮನಸ್ಸಿನಲ್ಲಿ ಇದ್ದಾರೆ. ಸಂಪೂರ್ಣವಾಗಿ ಈ ಭಾಗದ ಜನ ಜೋಶಿ ಅವರೇ ಸಂಸದರು ಎಂದು ನಿರ್ಧಾರ ಮಾಡಿದ್ದಾರೆ. ಜೋಶಿ ಅವರ ವಿರುದ್ಧ ಯಾರೇ ಇರಲಿ ಜೋಶಿ ಅವರೇ ಗೆಲುವು ಸಾಧಿಸುತ್ತಾರೆ. ಅತ್ಯಂತ ಹೆಚ್ಚಿನ ಮತಗಳಿಂದ ಜೋಶಿ ಗೆಲ್ಲುತ್ತಾರೆ ಎಂದರು.
ಸತ್ಯಪಾಲ್ ಮಲಿಕ್ ನಿವಾಸದ ಮೇಲೆ ಸಿಬಿಐ ರೇಡ್: ಇದು ಬಿಜೆಪಿಗರ ಕುಟಿಲ ಕಾರಸ್ತಾನವೆಂದ ಸಿಎಂ ಸಿದ್ದರಾಮಯ್ಯ
ಈ ದೇವರನ್ನು ನಂಬಿದ್ದಕ್ಕೆ ನನ್ನ ಪತಿ ಚುನಾವಣೆಯಲ್ಲಿ ಗೆದ್ದಿದ್ದರು: ಭವಾನಿ ರೇವಣ್ಣ
ನಾನು ಕಾಣಿಸಿಕೊಳ್ಳದ್ದಕ್ಕೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದರು: ಭವಾನಿ ರೇವಣ್ಣ