Sunday, September 8, 2024

Latest Posts

‘ಸಿದ್ದರಾಮಯ್ಯ ರಾಜ್ಯದಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ’

- Advertisement -

Kolar Political News: ಕೋಲಾರ: ಸಂಸದ ಎಸ್.ಮುನಿಸ್ವಾಮಿ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಬಂದ ತಕ್ಷಣದಿಂದ ಭ್ರಷ್ಠಾಚಾರದಲ್ಲಿ ತೊಡಗಿದೆ. ಬೆದರಿಕೆ, ಬ್ಲಾಕ್ ಮೇಲ್ ಮಾಡುವುದು ನಡೆಯುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಭ್ರಷ್ಠಾಚಾರ ಅಂತ ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್. ಭ್ರಷ್ಠಾಚಾರದ ವಿಚಾರದಲ್ಲಿ ಮೊದಲು ಮುನ್ನೆಲೆಗೆ ತಂದಿದ್ದೆ ಕಾಂಗ್ರೆಸ್‌ನವರು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಲಾರದ ಭ್ರಷ್ಟಾಚಾರವನ್ನು ಸಿಬಿಐ ತನಿಖೆಗೆ ಒಳಪಡಿಸಲು ಒತ್ತಾಯಿಸುತ್ತೇನೆ. ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮವಾಗಿ ನಡೆದಿದೆ. ಹತ್ತು ಸಾವಿರ ಸಂಬಳ ಪಡೆಯುವವರಿಗೆ ೧೦ ಲಕ್ಷ ಲಂಚ ಕೊಡಲಾಗಿದೆ. ಅವರವರ ಸಂಬಳಕ್ಕೆ ತಕ್ಕಂತೆ ನೇಮಕಾತಿಯಲ್ಲಿ ಅಕ್ರಮವಾಗಿ ಮಾಡಿದ್ದಾರೆ. ೭೫ ಜನರನ್ನು ನೇಮಕಾತಿಯಲ್ಲಿ‌ ಆಯ್ಕೆ ಮಾಡಿದ್ದಾರೆ. ಕೋಚಿಮುಲ್ ನೇಮಕಾತಿಯಲ್ಲಿ ೪೦ ರಿಂದ ೫೦ ಕೋಟಿ ಭ್ರಷ್ಠಾಚಾರ ನಡೆದಿದೆ. ಕರ್ನಾಟಕ ರಾಜ್ಯದಲ್ಲಿರುವ ಪೋಲೀಸ್ ಇಲಾಖೆ ಬಗ್ಗೆ ಇರುವ ನಂಬಿಕೆ ಹೋಗಿದೆ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದ್ದಾರೆ.

ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಆಕ್ರೋಶ ಹೊರಹಾಕಿದ ಸಂಸದ ಮುನಿಸ್ವಾಮಿ, ಘಟನೆ ಮುಖ್ಯವಾಹಿನಿಗೆ ಬರಲು ಕಾರಣರಾದವರ ಮೇಲೂ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ ಎಂದರು.

ಸಿಎಂ ಕೋಲಾರ ಪ್ರವಾಸ ಕುರಿತು ಮಾತನಾಡಿದ ಸಂಸದರು,  ಸಿಎಂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅನ್ನೋದು ಶ್ವೇತ ಪತ್ರ ಹೊರಡಿಸಬೇಕು. ಯರಗೋಳ್ ಡ್ಯಾಂಗೆ ಬಿಜೆಪಿ ಸರ್ಕಾರದಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದೆ ಅನ್ನೋ ಜನರ ಮುಂದೆ ಇಡಬೇಕು. ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಯರಗೋಳ್ ಡ್ಯಾಂಗೆ ಅನುದಾನ ನೀಡಿದ್ದು ಕಾಂಗ್ರೆಸ್ ನವರು ಅಲ್ಲ. ರಾಜ್ಯದಲ್ಲಿ ಓಟ್ ಬ್ಯಾಂಕ್ ರಾಜಕಾರಣ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಈ ಕೂಡಲೇ ಅವರು ಸಿಎಂ ಸ್ಥಾನದಿಂದ ರಾಜಿನಾಮೆ ಕೊಡಬೇಕು ಎಂದು ಸಂಸದ ಮುನಿಸ್ವಾಮಿ ಒತ್ತಾಯಿಸಿದ್ದಾರೆ. ಪ್ರತಿಯೊಬ್ಬ ಸಮುದಾಯಕ್ಕೂ ಎಷ್ಟು ಅನುಧಾನ ಕೊಟ್ಟಿದ್ದಾರೆ ಅನ್ನೋದು ಸಿದ್ದರಾಮಯ್ಯ ನಾಳೆ ಹೇಳಬೇಕು ಎಂದಿದ್ದಾರೆ.

ಔರಂಗಜೇಬ್ ಬಗ್ಗೆ, ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯ ಪುಸ್ರಕಗಳನ್ನು ನೀಡುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುನಿಸ್ವಾಮಿ, ಎಲ್ಲಾ ಸಮುದಾಯ ಒಂದೇ ಎಂದು ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ವಿಷಯದಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ ಹಿಜಬ್ ನಿಷೇಧವನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳುವುದು ಸರಿಯಿಲ್ಲ. ರಾಜ್ಯದಲ್ಲಿ ಜಾತಿ ಜಾತಿಗಳ ಮದ್ಯ ವಿಷ ಬೀಜಗಳನ್ನು ಬಿತ್ತುತ್ತಿದೆ ಎಂದು ಸಂಸದರು ಅಸಮಾಧಾನ ಹೊರಹಾಕಿದ್ದಾರೆ.

ಇನ್ನು ಸಿಎಂ ಕೋಲಾರ ಜಿಲ್ಲಾಧಿಕಾರಿ ವಿರುದ್ಧ ವಾಗ್ದಾಳಿ ಮಾಡಿದ್ದರ ಬಗ್ಗೆ ಮಾತನಾಡಿದ ಸಂಸದರು,  ಜಿಲ್ಲಾಧಿಕಾರಿ ಕಾಂಗ್ರೇಸ್ ಪಕ್ಷದ ಏಜೆಂಟ್ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಚುನಾವಣೆ ನಿಲ್ಲಬೇಕು ಅಂತ ಇದ್ರೆ ರಾಜಿನಾಮೆ ಕೊಟ್ಟು ಚುನಾವಣೆಗೆ ನಿಲ್ಲಿ. ಒಂದು ಸಮುದಾಯ ಒಲೈಕೆಗಾಗಿ ಡಿಸಿ ಅಕ್ರಂ ಪಾಷಾ ಪ್ರತೀ ಹಳ್ಳಿಯಲ್ಲಿ ವಕ್ತ್ ಬೋರ್ಡ್ಗೆ ಜಮೀನು ನೀಡುತ್ತಿದ್ದಾರೆ. ಸ್ವ ಜಾತಿ ಪ್ರೀತಿಗಾಗಿ ವಿರ್ಶಕರ್ಮ ಯೋಜನೆಗಳನ್ನು ಒಂದೇ ಸಮುದಾಯದವರಿಗೆ ಬಹು ಅಯ್ಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬಂದ ಕೂಡಲೇ ತಲ್ವಾರ್ ಹಾಕುವುದು. ಕರ್ನಾಟಕ ರಾಜ್ಯದಲ್ಲಿ ಕೋಲಾರ ಕ್ಲಾಕ್ ಟವರ್ ಪ್ರದೇಶ ಸೂಕ್ಷ ಪ್ರದೇಶ. ಅಲ್ಲಿ ೩೪ ಗಂಟೆಗಳು ಪೋಲೀಸರು ನಿಯೋಜಿಸಿರುತ್ತಾರೆ. ಹೀಗಿದ್ದರೂ ೭೦೦ ಕೆಜಿ ತೂಕ ದದ್ವಾರ ಬಾಗಿಲಿಗೆ ತಲ್ವಾರ್ ಹಾಕಿದ್ದಾರೆ. ಮುದುವಾಡಿ ಗ್ರಾಮದಲ್ಲಿ ಶಾಲೆಗಾಗಿ ಇರುವ ಜಾಗವನ್ನು ವಕ್ತ್ ಬೋರ್ಡ್ ಗೆ ಖಾತೆ ಮಾಡುವಂತೆ ಆದೇಶಿಸಿದ್ದಾರೆ.

ಜಿಲ್ಲಾಧಿಕಾರಿ ವರ್ಗಾವಣೆ ಮಾಡಬೇಕು ಅಥವಾ ಅಮಾನತ್ತು ಮಾಡಬೇಕು. ಡಿಸಿ ಮಾಡಿರುವ ಅಕ್ರಮ ಖಾತೆಗಳನ್ನು ರದ್ದು ಮಾಡಬೇಕು. ಹಿಂದೂಗಳಿಗೆ ಸ್ಮಾಶನಕ್ಕೆ ಇರುವ ಜಾಗವನ್ನು ಮುಸ್ಲಿಂ ಸಮುದಾಯಕ್ಕೆ ಮಾಡಿದ್ದಾರೆ. ಬೆಲೆ ಬಾಳುವ ಜಮೀನುಗಳನ್ನು ಅಲ್ಪ ಸಂಖ್ಯಾತ ಹಿತಕ್ಕಾಗಿ ಖಾತೆ ಮಾಡಲು ಒತ್ತಡ ಹಾಕುತ್ತಿದ್ದಾರೆ. ಚುನಾವಣಾ ಕಮೀಷನರ್‌ಗೂ ಡಿಸಿ ವಿರುದ್ದ ದೂರು ನೀಡುತ್ತೇವೆ. ಊರು ಬಿಟ್ಟವರು ಹಾಗೂ ಸತ್ತವರನ್ನು ಮತದಾರರ ಪಟ್ಟಿಯಲ್ಲಿ ಡಿಲೀಡ್ ಮಾಡಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಕೆಡಿಒಇ ಸಭೆಯಲ್ಲಿ ಒತ್ತಾಯಿಸುತ್ತೇನೆ ಎಂದಿದ್ದಾರೆ.

ಪ್ರೋಟೋಕಾಲ್ ಪ್ರಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕೆಡಿಪಿ ಸಭೆಗೆ ಆಹ್ವಾನ ನೀಡಿದ್ದಾರೆ, ಕೆಡಿಪಿ ಸಭೆ ಹೋಗಿ ಭ್ರಷ್ಠಾಚಾರ ಹಾಗೂ ಜಿಲ್ಲೆಗೆ ನೀಡಿರುವ ಅನುಧಾನದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸುತ್ತೇನೆ. ಕೋಲಾರ ಜಿಲ್ಲೆಯಲ್ಲಿ ನಡೆದಿರುವ ಹಗರಣ ಹಾಗೂ ಕೊಟ್ಟಿರುವ ಅನುಧಾನದ ಬಗ್ಗೆ ಜನರ ಮುಂದೆ ಶ್ವೇತ ಪತ್ರ ಹೊರಡೊಸುವಂತೆಯೂ ಒತ್ತಾಯಿಸುತ್ತೇನೆ ಎಂದು ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ಕೋವಿಡ್ ಸಮಯದಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ’

ದೇವಾಲಯದ ಎತ್ತರ ಮೀರಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ: ಯೋಗಿ ಆದಿತ್ಯನಾಥ್ ಆದೇಶ

‘ವಿಕೃತ ಮನಸ್ಸುಗಳನ್ನು ಹೊಂದಿರುವಂತಹ ಇವರಿಬ್ಬರು ಸೇರಿ ಒಂದು ಪಕ್ಷವನ್ನು ಪ್ರಾರಂಭಿಸುದು ಒಳ್ಳೆಯದು’

- Advertisement -

Latest Posts

Don't Miss