Political News:ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ದಕ್ಷಿಣ ಭಾರತದ ಮುಸ್ಲಿಂ ಧರ್ಮ ಗುರುಗಳ ಸಮಾವೇಶ ನಡೆದಿದ್ದು, ಅಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
ಕೋಮುವಾದಿ ಸರ್ಕಾರ ಅಧಿಕಾರಕ್ಕೆ ಬಂದಾಗೆಲ್ಲ ಜಾತಿ ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ನಡೀತಾ ಇದೆ. ಇರೋದು ಎರಡೇ ಜಾತಿ ಗಂಡು-ಹೆಣ್ಣು. ಇತ್ತೀಚಿಗೆ ಜಾತಿ ಧರ್ಮ ಆಧಾರದಲ್ಲಿ ದೇಶ ಭಾಗ ಆಗುತ್ತಿದೆ. ಅಲ್ಪಸಂಖ್ಯಾತರು ಹಿಂದುಳಿದಿದ್ದಾರೆ. ಕಾರಣ ಸಾಕ್ಷಾರತಾ ಕೊರತೆ. ಶಿಕ್ಷಣದ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ನಡೀತಾ ಇದೆ. ಸಿದ್ದರಾಮಯ್ಯ ಸಾಹೇಬ್ರು ಹುಲಿ ಹಾಲು ಕುಡಿದು ಅಧಿವೇಶನದ ಹೊರಗೆ ಒಳಗೆ ಘರ್ಜಿಸುತ್ತಾರೆ. ಈಗ 2000 ಕೋಟಿಗಿಂತ ಹೆಚ್ಚು ಅಲ್ಪಸಂಖ್ಯಾತರಿಗೆ ತೆಗೆದಿಟ್ಟಿದ್ದಾರೆ. ಆಡಳಿತ ಹೇಗೆ ನಡೆಸಬೇಕು ಅಂತಾ ಹೇಳಿ ಕೊಟ್ಟ ನಾಯಕ ಎಂದು ಅಬ್ಬಯ್ಯ, ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
ಇದು ಪವಿತ್ರವಾದ ದರ್ಗಾ, ಇಲ್ಲಿಂದಲೇ ನಾನು ಎಂ ಎಲ್ ಎ ಆಗಿದ್ದು. ನೀವು ಹೋದಲ್ಲಿ ಎಲ್ಲಾ ಕಡೆಗಳಲ್ಲಿ ಯೋಜನೆ ಘೋಷಣೆ ಮಾಡ್ತೀರಿ. ಇಲ್ಲಿ ಕೂಡ ಘೋಷಣೆ ಮಾಡಬೇಕು. ಇಲ್ಲಿ ಅಲ್ಪಸಂಖ್ಯಾತರಿಗೆ ಬರಿ ಟಾರ್ಗೆಟ್ ಮಾಡುತ್ತಾರೆ. ಈಗ ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ನಾವೆಲ್ಲಾ ನಿಮ್ಮ ಪರವಾಗಿ ಇದ್ದೇವೆ ಎಂದು ಅಬ್ಬಯ್ಯ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ, ಸಚಿವೆ ಹೆಬ್ಬಾಳ್ಕರ್ ಸಹೋದರನ ಆಪ್ತನ ಮೇಲೆ ಆರೋಪ!
ಮುಂಬರುವ ಲೋಕಸಭೆಯಲ್ಲಿ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ: ರೇಣುಕಾಚಾರ್ಯ ಭವಿಷ್ಯ