Friday, March 14, 2025

Latest Posts

ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೀಬೇಡಿ: ಕಾಂಗ್ರೆಸ್ ಪಂಚೆ ಟ್ವೀಟ್‌ಗೆ ಸಚಿವ ಪ್ರಲ್ಹಾದ ಜೋಶಿ ತಿರುಗೇಟು

- Advertisement -

Political News: ಧಾರವಾಡ : ಪಂಚೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರೋ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಕೂಡ ಲುಂಗಿ ಲೀಡರ್ ಅನ್ನೋದನ್ನ ಮರೆಯಬಾರದು ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷದ ಲೋ ಲೆವೆಲ್ ಲಾಂಗ್ವೇಜ್ ಇದು. ಆದರೆ ನಾನು ಭಾರತ ಸರ್ಕಾರದ ಮಂತ್ರಿಯಾಗಿ ಆ ಲೆವೆಲ್ ಗೆ ಇಳಿದು ಮಾತಾಡಲ್ಲ. ಆದರೆ ಸಿದ್ದರಾಮಯ್ಯನವರೂ ಸಹ ಲುಂಗಿ ಲೀಡರ್ ಅನ್ನೋದನ್ನ ಕಾಂಗ್ರೆಸ್ ಪಕ್ಷ ಮರೆಯಬಾರದು. ನಾವೂ ಸಹ ಅದೇ ಭಾಷೆಯಲ್ಲಿ ಉತ್ತರ ಕೊಡಬಹುದು. ಆದರೆ ಆ ಲೆವೆಲ್ ಗೆ ಇಳಿಯಲ್ಲ ಎಂದರು.

ಕಾಂಗ್ರೆಸ್ ಪಕ್ಷ ಬಳಸಿರುವ ಪಂಚೆ ಭಾಷೆಗೆ ನನ್ನ ಬಳಿ ಉತ್ತರ ಇಲ್ಲ ಅಂತ ಅಲ್ಲ, ನನ್ನ ಬಾಯಲ್ಲಿ ಉತ್ತರ ಇದೆ, ಆದರೆ ಆ ರೀತಿಯ ಅಸಭ್ಯ ಭಾಷೆ ಬಳಸೋದು ಯಾವ ಕಾಲಕ್ಕೂ ಸರಿ ಅಲ್ಲ. ನೇರವಾಗಿ ರಾಜಕಾರಣದಲ್ಲಿ ಡೇ ಟು ಡೇ ಬೇಸಿಸ್ ನಲ್ಲಿ ಸಂಬಂಧವಿಟ್ಟುಕೊಳ್ಳದ, ಸಂಘಟನೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಬಗ್ಗೆ ಈ ರೀತಿಯ ಭಾಷೆ ಬಳಸಿದ ಕಾಂಗ್ರೆಸ್ ಪಕ್ಷಕ್ಕೆ ಜನರೇ ಉತ್ತರ ಕೊಡ್ತಾರೆ. ಕಾಂಗ್ರೆಸ್ ಪಕ್ಷ ಇದನ್ನು ಇಲ್ಲಿಗೇ ನಿಲ್ಲಿಸಲಿ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು‌.

ನಾಗರಹೊಳೆಯಲ್ಲಿ ಹುಲಿ-ಚಿರತೆ ಕಾದಾಟ.. ಚಿರತೆ ಸಾವು

ದಾಖಲೆಯ 36 ಕೋಟಿ ರೂ.ಗಳಿಗೆ ಮಾರಾಟವಾಯ್ತು ‘ಜವಾನ್’ ಚಿತ್ರದ ಆಡಿಯೋ ಹಕ್ಕುಗಳು

ಕೇಳಿದಷ್ಟು ಹಣ ನೀಡದ್ದಕ್ಕೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರು ಅರೆಸ್ಟ್

- Advertisement -

Latest Posts

Don't Miss