ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಶುರುವಾಗಲಿದ್ದು, ಕಂಠೀರವ ಕ್ರೀಡಾಂಗಣದಲ್ಲಿ 8 ರಾಜ್ಯದ ಸಿಎಂ, ಕಾಂಗ್ರೆಸ್ ನಾಯಕರು, ಹಲವು ಕಾಂಗ್ರೆಸ್ ಅಭಿಮಾನಿಗಳ ಸಮ್ಮುಖದಲ್ಲಿ ಸಿದ್ದರಾಮಯ್ಯ ಎರಡನೇಯ ಬಾರಿಗೆ ಸಿಎಂ ಆಗ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮ ಶುರುವಾಗಿದ್ದು, ಸಿದ್ದರಾಮಯ್ಯರಿಗೆ ರಾಜ್ಯ ರಾಜ್ಯಪಾಲರಾದ ಥಾವರ್ ಸಿಂಗ್ ಗೆಹ್ಲೋಟ್ ಪ್ರಮಾಣವಚನ ಬೋಧಿಸಿದರು. ಸಿದ್ದರಾಮಯ್ಯ ಎಂಬ ಹೆಸರಿನ ನಾನು ಎನ್ನುವುದರೊಂದಿಗೆ ಮಾತು ಆರಂಭಿಸಿದ ಸಿದ್ದರಾಮಯ್ಯ, ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಮಧ್ಯಾಹ್ನ 12.30ಕ್ಕೆ ರೋಹಿಣಿ ನಕ್ಷತ್ರವಿರುವ ಸಮಯದಲ್ಲಿ ಪದಗ್ರಹಣ ಮಾಡಿದ್ದು, ಈ ಸಮಯವನ್ನು ಅಮೃತಸಿದ್ಧಿ ಯೋಗ ಎಂದು ಕರೆಯಲಾಗಿದೆ. ಇದು ಅತ್ಯುತ್ತಮ ಸಮಯವಾಗಿದ್ದು, ಈ ಸಮಯದಲ್ಲಿ ಮಾಡುವ ಉತ್ತಮ ಕೆಲಸದಲ್ಲಿ ನಮಗೆ ಯಶಸ್ಸು ಸಿಗುವ ನಂಬಿಕೆ ಇದೆ. ಹಾಗಾಗಿ ಈ ಸಮಯದಲ್ಲಿ ಪದಗ್ರಹಣ ಮಾಡಲಾಗಿದೆ.
ಇನ್ನು ಇವರೊಂದಿಗೆ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್, ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್ ಇಷ್ಟು ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ನಿತೀಶ್ ಕುಮಾರ್, ಸ್ಟಾಲಿನ್, ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್, ಸೀತಾರಾಮ್ ಯಚೂರಿ, ತೇಜಸ್ವಿ ಯಾದವ್, ಎ ರಾಜಾ, ಫಾರೂಕ್ ಅಬ್ದುಲ್ಲಾ, ನಟ ದುನಿಯಾ ವಿಜಯ್, ನಟ ಶಿವರಾಜ್‌ಕುಮಾರ್, ಸಾಧು ಕೋಕಿಲಾ, ನಟಿ ರಮ್ಯಾ, ಕಮಲ್ ಹಾಸನ್, ಕಾರ್ತಿ ಚಿದಂಬರಂ, ಉಮಾಶ್ರೀ, ನಿಶ್ವಿಕಾ ನಾಯ್ಡು, ಲಕ್ಷ್ಮೀ ಹೆಬ್ಬಾಳ್ಕರ್, ಪ್ರಿಯಾಂಕ್ ಖರ್ಗೆ, ಸೇರಿ, ದೇಶದ ಮೂಲೆಮೂಲೆಯಿಂದ ಬಂದಿರುವ ಹಲವು ಕಾಂಗ್ರೆಸ್ ನಾಯಕರು, ಸಿನಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇನ್ನು ಎರಡನೇಯ ಬಾರಿಗೆ ಸಿದ್ದರಾಮಯ್ಯ ಸಿಎಂ ಆದ ಕಾರಣಕ್ಕೆ ಕರ್ನಾಟಕದಲ್ಲಿ ಹಲವೆಡೆ ಸಿಹಿ ಹಂಚಿ, ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲವೆಡೆ ಸಾವಿರ ಸಾವಿರ ಹೋಳಿಗೆ ಮಾಡಿ, ಹಂಚಲಾಗಿದೆ.
Live ಪ್ರಮಾಣವಚನ ಸ್ವೀಕಾರ ಸಮಾರಂಭ ಬೆಂಗಳೂರು, ಕರ್ನಾಟಕ https://t.co/HLVn8OM4Es
— Karnataka Congress (@INCKarnataka) May 20, 2023
‘ನೋಟು ನಿಷೇಧ ಎಂಬ ಅಸ್ತ್ರವನ್ನು ಪ್ರಧಾನಿ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ’
ಪ್ರಿಯಾಂಕಾ, ರಾಹುಲ್‌ರನ್ನ ಭೇಟಿ ಮಾಡಿ, ಧನ್ಯವಾದ ಸಲ್ಲಿಸಿದ ಸಿದ್ದು, ಡಿಕೆಶಿ