Political News: ನಟ ಚೇತನ್ ಅಹಿಂಸಾ ಕರ್ನಾಟಕ ಟಿವಿಯ ಸಂದರ್ಶನದಲ್ಲಿ ಮಾತನಾಡಿದ್ದು, ರಾಜಕೀಯ ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದವರು, ಟೊಪ್ಪಿ ಹಾಕಿಕೊಂಡವರು ಮಾತ್ರ ಟೆರರಿಸ್ಟ್‌ಗಳು ಅಲ್ಲ. ಸೂಟು ಬೂಟು ಹಾಕಿಕೊಳ್ಳುವವರು, ಇಂಗ್ಲೀಷ್ ಮಾತನಾಡುವವರು ಕೂಡ ಟೆರರಿಸ್ಟ್‌ಗಳೇ. ಧಾರ್ಮಿಕ, ರಾಜಕೀಯ ಸಿದ್ಧಾಂತಗಳನ್ನು ಅವಮಾನಿಸುವುದು. ಅಮಾಯಕರನ್ನು ಕೊಂದು ಹಾಕುವುದು ಕೂಡ ಭಯೋತ್ಪಾದನೆ. ಅಮೆರಿಕ ಕೂಡ ಭಯೋತ್ಪಾದಕ ದೇಶ ಅಂತಾ ಚೇತನ್ ಅಹಿಂಸಾ ಹೇಳಿದ್ದಾರೆ.
ಈಗಿನ ರಾಜಕೀಯ ಆಡಳಿತದಲ್ಲಿ ಜಿಡಿಪಿ ದರ ಹೆಚ್ಚಿಸುವುದು ಅಭಿವೃದ್ಧಿ ಅಲ್ಲ. ಆ ದುಡ್ಡೆಲ್ಲ ದೊಡ್ಡ ದೊಡ್ಡ ಜನರ ಮನೆ ಸೇರುತ್ತಿದೆ. ಆದರೆ ಅದನ್ನು ಅಭಿವೃದ್ಧಿ ಎನ್ನುವುದಿಲ್ಲ. ಎಷ್ಟು ಜನರಿಗೆ ಈ ದೇಶದಲ್ಲಿ ಮನೆಯಿದೆ. ಎಷ್ಟು ಜನ ಮನೆ ಇಲ್ಲದೇ ಬದುಕುತ್ತಿದ್ದಾರೆ. ಬಾಡಿಗೆ ಮನೆಯಲ್ಲಿರುವವರ ಪರಿಸ್ಥಿತಿ ಹೇಗಿದೆ. ಇದೆಲ್ಲವನ್ನೂ ತಿಳಿದುಕೊಂಡು, ಅಂಥವರ ಅಭಿವೃದ್ಧಿ ಮಾಡಬೇಕಿದೆ ಎಂದು ಚೇತನ್ ಹೇಳಿದ್ದಾರೆ.
ಆದರೆ ಈ ಸರ್ಕಾರದ ಕೆಲಸಗಳಿಗೆ ಲಾಭದಲ್ಲಿರುವವರಿಗೆ ಲಾಭವಾಗುತ್ತಿದೆ ಹೊರತು. ಬಡವರಿಗೇನೂ ಲಾಭವಾಗುತ್ತಿಲ್ಲ. ಹಲವು ಕಡೆ ಏರ್ಪೋರ್ಟ್, ಉತ್ತಮ ರಸ್ತೆಗಳಾಗುತ್ತಿದೆ. ಆದರೆ ಆ ರಸ್ತೆಗಳು, ಏರ್ಪೋರ್ಟ್‌ಗಳು ಎಷ್ಟೋ ಬಡ ಜನರ ಭೂಮಿಗಳನ್ನು ಕಿತ್ತು ಮಾಡಿರಬಹುದು. ಹಾಗಾಗಬಾರದು. ಅಭಿವೃದ್ಧಿ ಎಂದರೆ, ಬರೀ ಶ್ರೀಮಂತರ ಅಭಿವೃದ್ಧಿಯಲ್ಲ. ಎಲ್ಲರ ಅಭಿವೃದ್ಧಿಯೂ ಆಗಬೇಕು ಅಂತಾ ಚೇತನ್ ಅಹಿಂಸಾ ಹೇಳಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿರುವ ಚೇತನ್, ಸಿಎಂ ಸಿದ್ದರಾಮಯ್ಯ ಎಂದಿಗೂ ತಮ್ಮ ಅಧಿಕಾರ ಬಿಟ್ಟು ಕೊಡುವುದಿಲ್ಲ ಮತ್ತು ಡಿ.ಕೆ.ಶಿವಕುಮಾರ್ ಎಂದಿಗೂ ಸಿಎಂ ಆಗುವುದಿಲ್ಲವೆಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.




