Wednesday, November 13, 2024

Latest Posts

ಸಿದ್ದರಾಮಯ್ಯನವರ ಭಂಡತನ ಹೆಚ್ಚು ದಿನ ನಡೆಯುವುದಿಲ್ಲ: ಬಿ.ವೈ.ವಿಜಯೇಂದ್ರ

- Advertisement -

Hubli News: ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಐದು ವರ್ಷ ಪೂರೈಸುತ್ತಾರೆ ಎಂದು ಯಾರು ಹೇಳಿಕೆ ಕೊಡುತ್ತಿದ್ದಾರೆ. ಅವರೇ ಸಿಎಂ ರೇಸ್ ನಲ್ಲಿ ಮುಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಶಾಸಕರೇ, ಸಚಿವರೇ ಸಿಎಂ ಅಧಿಕಾರಾವಧಿ ವಿಚಾರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಮೇಲಾಗಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಮೂರು ವರ್ಷ ಇರತ್ತಾರಾ? ಐದು ವರ್ಷ ಇರತ್ತಾರಾ? ಅದನ್ನು ಹೈಕಮಾಂಡ್ ಗೆ ಕೇಳಬೇಕು ಎಂದರು.

ಈಗಾಗಲೇ ಶಾಸಕರು ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೆ. ಡಿಕೆಶಿ ದೇವರ ಪೂಜೆ ಮಾಡಿ ಬಳಿಕ ಸಿದ್ದರಾಮಯ್ಯ ಐದು ವರ್ಷ ಪೂರೈಸತ್ತಾರೆ ಎಂದು ಹೇಳತ್ತಾರೆ. ಆದರೆ ನಿಜವಾಗಿಯೂ ಸಿಎಂ ರೇಸ್ ನಲ್ಲಿ ಡಿಕೆಶಿ ಇದ್ದಾರೆ ಎಂದು ತಿಳಿಸಿದರು.

ವಾಲ್ಮೀಕಿ, ಮುಡಾ ಹಗರಣ ಸಂಬಂಧಿಸಿದಂತೆ ಮೈಸೂರಿನವರೆಗೆ ಪಾದಯಾತ್ರೆ ಮಾಡಿದ್ದೇವೆ. ಇದರ ಪರಿಣಾಮವಾಗಿ ನಮಗೆ ಮೊದಲ ಜಯ ಸಿಕ್ಕಿದೆ. ಈಗಾಗಲೇ ಸಿಎಂ ಕುರ್ಚಿ ಅಲುಗಾಡುತ್ತಿದೆ. ಸಿದ್ದರಾಮಯ್ಯ ಅವರ ಬಂಡತನ ಬಹಳ‌ ದಿನ ನಡೆಯೋದಿಲ್ಲ.‌ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಜಾತಿಗಣತಿ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಅವರು ನಿಜವಾಗಿಯೂ ಪ್ರಯಾಣಿಕರು ಆಗಿದ್ದರೇ 2018 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಅನುಷ್ಠಾನ ಮಾಡಬೇಕಿತ್ತು. ಇದೀಗ ಹಗರಣಗಳ ಸರಮಾಲೆಯಲ್ಲಿ ಸಿಲುಕಿರುವ ಸರ್ಕಾರವನ್ನು ಉಳಿಸಲು ಜಾತಿಗಣತಿ ದಾಳವನ್ನು ಉರುಳಿಸಿದ್ದಾರೆ ಎಂದರು‌.

ಈಗಾಗಲೇ ಜಾತಿಗಣತಿಯನ್ನು ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಖರ್ಗೇ ಅಂತಹ ನಾಯಕರೇ ಇದೊಂದು ಅವೈಜ್ಞಾನಿಕ ಎಂದು ಹೇಳಿದ್ದಾರೆ. ಹೀಗಾಗಿ ಸದನದಲ್ಲಿ ಜಾತಿಗಣತಿ ಅನುಷ್ಠಾನ ಮಾಡುವುದು ಸಿದ್ದರಾಮಯ್ಯ ಅವರ ಬ್ರಹ್ಮೆ ಎಂದರು.

ವಿಜಯೇಂದ್ರ ಹೈಕಮಾಂಡ್ ಗೆ ಮಂಕುಬುದ್ದಿ ಎರಚಿ ರಾಜ್ಯಾಧ್ಯಕ್ಷರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಹೈಕಮಾಂಡ್ ಗೆ ಮಂಕುಬುದ್ದಿ ಎರಚುವಷ್ಟು ದೊಡ್ಡವನು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದರೆ ಸಂತೋಷ. ಆದರೆ ಪಕ್ಷದ ಬಗ್ಗೆ ಮಾತಾನಾಡುವ ನೈತಿಕತೆ ಅವರಿಗಿಲ್ಲ ಎಂದು ಹರಿಹಾಯ್ದರು.

ಆರ್ ಸಿಬಿ ಸಂಘಟನೆ ವಿಚಾರವಾಗಿ ಮಾತನಾಡಿ, ಅದು 20-20 ಮ್ಯಾಚ್. ಆದರೆ ನಾನು ಟೆಸ್ಟ್ ಆಡೋಕ್ಕೆ ಬಂದಿದ್ದೇನೆ‌.‌ ಈಶ್ವರಪ್ಪ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದರು.

- Advertisement -

Latest Posts

Don't Miss