Saturday, January 11, 2025

Latest Posts

ವೇದಿಕೆ ಮೇಲೆ ಡಿಕೆಶಿ ಹೆಸರು ಹೇಳೋದನ್ನೇ ಮರೆತ ಸಿದ್ದು: ಸಿಎಂ-ಡಿಸಿಎಂ ದೂರ ದೂರ!

- Advertisement -

Gadag Political News: ಗದಗ: ಗದಗದಲ್ಲಿ ನಡೆಯುತ್ತಿರುವ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ. ಕರ್ನಾಟಕ ಸುವರ್ಣ ಮಹೋತ್ಸವ ಸಂಭ್ರಮದ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ನಿದ್ದೆಗೆ ಜಾರಿದ್ದರು. ಸಚಿವ ಹೆಚ್‌.ಕೆ.ಪಾಟೀಲ್ ಭಾಷಣದ ವೇಳೆ ಚೇರ್‌ ಮೇಲೆಯೇ ಸಿಎಂ ನಿದ್ದೆ ಮಾಡುವುದು ಕಂಡು ಬಂತು.

ಡಿಸಿಎಂ ಹೆಸರನ್ನೇ ಮರತೆ ಸಿಎಂ ಸಿದ್ದು

ಇನ್ನು, ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರನ್ನೇ ಮರೆತು ಮಾತು ಮುಂದುವರೆಸಿದ್ದರು. ಕೊನೆಗೆ ಡಿ ಕೆ ಶಿವಕುಮಾರ್ ಹೆಸರನ್ನು ಸಚಿವ ಬೈರತಿ ಸುರೇಶ್ ನೆನಪು ಮಾಡಿಸಿದರು. ಆ ಬಳಿಕ ಸಿಎಂ, ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಹೇಳಿ ಭಾಷಣ ಮುಂದುವರೆಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸ್ಪೀಕರ್ ಯು ಟಿ ಖಾದರ್, ಬಸವರಾಜ್ ಹೊರಟ್ಟಿ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ನಮ್ಮ ರಾಜ್ಯಕ್ಕೆ ಕರ್ನಾಟಕ ಅಂತ ರಾಜ್ಯವಾಗಿ 50 ವರ್ಷಾಗಿದೆ‌. ಹೀಗಾಗಿ ಕರ್ನಾಟಕ ಸಂಭ್ರಮ ಆಚರಣೆ. ನಿನ್ನೆ ಹಂಪಿಯಲ್ಲಿವಾಭಿಯಾನ ಆರಂಭ ಆಗಿದೆ. ಇಂದು ಗದಗ ಜಿಲ್ಲೆಗೆ ತಲುಪಿದೆ.

- Advertisement -

Latest Posts

Don't Miss