National News: ಕೆಲ ತಿಂಗಳ ಹಿಂದೆ ಕೊಲೆಯಾದ ಸಿಂಗಲ್ ಸಿಧು ಮೂಸೆವಾಲಾ ಅವರ ತಾಯಿ ತಮ್ಮ 58ನೇ ವಯಸ್ಸಿಗೆ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಇವರ ಮನೆಗೆ ಮಗುವಿನ ಆಗಮನವಾಗಲಿದ್ದು, ಸಿಧು ತಂದೆ 60ನೇಯ ವಯಸ್ಸಿಗೆ ಮತ್ತೆ ತಂದೆಯಾಗಲಿದ್ದಾರೆ.
ಚರಣ್ ಕೌರ ಮತ್ತು ಬಲ್ಕೌರ್ ಸಿಂಗ್‌ಗೆ ಸಿಧು ಮೂಸೆವಾಲ ಏಕೈಕ ಪುತ್ರನಾಗಿದ್ದ. ಆದರೆ ಕಳೆದ ವರ್ಷ ಗ್ಯಾಂಗ್‌ಸ್ಟರ್ ತಂಡದವರು ಸಿಧುವನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಬಳಿಕ ಚರಣ್ ಮತ್ತು ಬಲ್ಕೌರ್ ಸಿಂಗ್ ಮಗನ ನೆನಪಿನಲ್ಲಿಯೇ ದುಃಖಿತರಾಗಿದ್ದರು. ಆಗಲೇ ತಮಗೆ ಇನ್ನೊಂದು ಮಗು ಬೇಕೆಂದು ನಿರ್ಧರಿಸಿದ ಇವರಿಬ್ಬರು, ಇದೀಗ ತಂದೆ ತಾಯಿಯಾಗುತ್ತಿದ್ದಾರೆ.
ಸಿಧು ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಇಬ್ಬರನ್ನು ಬಂಧಿಸಿದ್ದು, ಲಾರೆನ್ಸ್ ಗ್ಯಾಂಗ್‌ಗಾಗಿ ಸ್ಥಳೀಯ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ವಿಶೇಷ ತಂಡ ರಚಿಸಿ, ತನಿಖೆ ನಡೆಸುತ್ತಿದ್ದಾರೆ.