ಪ್ರಥಮ ಕಪ್ಪುವರ್ಣೀಯ ನಟ ಸಿಡ್ನಿ ಪೊಯ್ಟಿಯರ್ ನಿಧನ (Sidney Poitier)

ಪ್ರಪಂಚದಲ್ಲಿ ಸಿನಿಮಾ ಜಗತ್ತಿನಲ್ಲಿ ಮೊದಲ ಕಪ್ಪುವರ್ಣೀಯ ನಟ ಆಸ್ಕರ್ ಪ್ರಶಸ್ತಿಯ ವಿಜೇತ 94 ವರ್ಷದ ಸಿಡ್ನಿ ಪೊಯ್ಟಿಯರ್ (Sidney Poitier )ವಿಧಿವಶರಾಗಿದ್ದಾರೆ. ಇವರು ಬದುಕಿದ್ದಾಗ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿನಿಂತು ಕಪ್ಪುಬಿಳುಪಿನ ಮಧ್ಯೆ ಹೋರಾಡಿ ಚಿತ್ರರಂಗಕ್ಕೆ ಬಂದoತವರು
ಇವರಿಗೆ ಲಿಲೀಸ್ ಆಫ್ ದಿ ಫೀಲ್ಡ್ ಚಿತ್ರದ ಪಾತ್ರದ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಜೊತೆಗೆ ಜನಾಂಗೀಯ ಅಡೆತಡೆಗಳನ್ನು ಮೆಟ್ಟಿನಿಂತು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪುವರ್ಣೀಯ ಕಲಾವಿದ.


ಜೊತೆಗೆ ನಾಗರಿಕ ಹಕ್ಕುಗಳ ಚಳುವಳಿಯ ಸಮಯದಲ್ಲಿ ಒಂದು ಪೀಳಿಗೆಗೆ ಸ್ಫೂರ್ತಿ ನೀಡಿದ ಕಲಾವಿದರೂ ಅವರಾಗಿದ್ದರು. ಅದೇ ರೀತಿ ಪೊಯ್ಟಿಯರ್ ಒಬ್ಬ ಐಕಾನ್, ಹೀರೋ ಮಾರ್ಗದರ್ಶಕ ,ಹೋರಾಟಗಾರ ಎಂದು ಬಹಮಿಯನ್ ಉಪಪ್ರಧಾನಿ ಚೆಸ್ಟರ್ ಕೂಪರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಪೊಯ್ಟಿಯರ್ ನಿಧನಕ್ಕೆ ಚಿತ್ರರಂಗ ಸಹ ಕಂಬನಿಯನ್ನು ಮಿಡಿದಿದೆ.

About The Author