- Advertisement -
ಕೌಲಾಲುಂಪುರ್: ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಪ್ರಣಾಯ್ ಮಲೇಷ್ಯಾ ಓಪನ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು, ಚೈನೀಸ್ ಥೈಪೈನ ತಾಯ್ ತ್ಜು ಯಿಂಗ್ ವಿರುದ್ಧ 13-21,21-15,21-13 ಅಂಕಗಳಿಂದ ಸೋಲು ಕಂಡರು. ಇದರೊಂದಿಗೆ ಸಿಂಧು ತಾಯ್ ತ್ಜು ವಿರುದ್ಧ ಆರನೆ ಬಾರಿಗೆ ಸೋಲು ಕಂಡಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪ್ರಣಾಯ್ ಇಂಡೋನೇಷ್ಯಾದ ತಾರಾ ಆಟಗಾರ ಜೋನಾಥನ್ ಕ್ರಿಸ್ಟಿ ವಿರುದ್ಧ 18-21, 16-21 ಅಂಕಗಳಿಂದ ಸೋಲು ಕಂಡರು. ಕ್ರಿಸ್ಟಿ ವಿರುದ್ಧ ಈ ವರ್ಷ ಎರಡನೆ ಸೋಲು ಹಾಗೂ ಒಟ್ಟು ಮೂರು ಬಾರಿ ಸೋಲು ಕಂಡಿದ್ದಾರೆ.
- Advertisement -