- Advertisement -
ಕೌಲಾಲಂಪುರ: ಕಳಪೆ ಪ್ರದರ್ಶನ ನಂತರ ಪುಟದೆದ್ದಿರುವ ಒಲಿಂಪಿಕ್ ಚಾಂಪಿಯನ್ ಪಿ.ವಿ.ಸಿಂಧು ಹಾಗೂ ಮತ್ತೊಮ್ಮೆ ಸ್ಥಿರ ಪ್ರದರ್ಶನ ತೋರಲು ಸಜ್ಜಾಗಿರುವ ಎಚ್.ಎಸ್.ಪ್ರಣಾಯ್ ಇಂದಿನಿಂದ ಮಲೇಷ್ಯಾ ಬ್ಯಾಡ್ಮಿಂಟನ್ ಓಪನ್ ಟೂರ್ನಿ ಆಡಲಿದ್ದಾರೆ.
ಸಿಂಧು ಮೊನ್ನೆ ಇಂಡೋನೇಷ್ಯಾ ಓಪನ್‍ನಲ್ಲಿ ಮೊದಲ ಸುತ್ತಿನಲ್ಲೆ ನಿರ್ಗಮಿಸಿದರು. ಈ ಟೂರ್ನಿಯಲ್ಲಿ ಥಾಯ್‍ಲ್ಯಾಂಡ್‍ನ ಪೆÇರ್ನ್‍ಪಾವ್ವೆ ಚೊಚುವಾಂಗ್ ಅವರಿಂದ ಮೊದಲ ಸವಾಲು ಎದುರಿಸಲಿದ್ದಾರೆ. ಮತ್ತೊರ್ವ ಆಟಗಾರ್ತಿ ಸೈನಾ ನೆಹ್ವಾಲ್ ಅಮೆರಿಕದ ಐರಿಸ್ ವಾಂಗ್ ವಿರುದ್ಧ ಆಡಲಿದ್ದಾರೆ.
ಪುರುಷರ ವಿಭಾಗದಲ್ಲಿ ಪ್ರಣಾಯ್, ಸಾಯಿ ಪ್ರಣೀತ್, ಸಮೀರ್ ವರ್ಮಾ, ಗಾಯದಿಂದ ಚೇತರಿಸಿಕೊಂಡಿರುವ ಪಾರುಪಲ್ಲಿ ಕಶ್ಯಪ್ ಕಣದಲ್ಲಿದ್ದಾರೆ. ಪುರುಷರ ಡಬಲ್ಸ್ ವಿಭಾಗದಲ್ಲಿ ಸ್ವಾಸ್ತಿಕ್‍ಸೈರಾಜ್‍ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಆಡಲಿದ್ದಾರೆ.
- Advertisement -