ಗಾಯಕಿಯೊಂದಿಗೆ ಸಪ್ತಪದಿ ತುಳಿದ ಸಿಂಗಾರ ಸಿರಿಯೇ ಲಿರಿಕ್ ರೈಟರ್ ಪ್ರಮೋದ್ ಮರವಂತೆ

Sandalwood News: ಕಾಂತಾರ ಸಿನಿಮಾದ ಸಿಂಗಾರ ಸಿರಿಯೇ ಲಿರಿಕ್ ರೈಟರ್ ಪ್ರಮೋದ್ ಮರವಂತೆ, ಗಾಯಕಿ ಸುಚೇತಾ ಬಸರೂರು ಅವರನ್ನು ವರಿಸಿದ್ದಾರೆ.

ಸುಚೇತಾ ಬಸರೂರು ಕೆಜಿಎಫ್ ಸಿನಿಮಾದ ಗಗನ ನೀ ಭುವನ ನೀ ಹಾಡಿಗೆ ಕಂಠದಾನ ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರಿಗೆ ಸೊಸೆಯಾಗಬೇಕು. ರವಿಯವರ ಅಕ್ಕನ ಮಗಳಾಗಬೇಕು.  ಇಂದು ಕುಂದಾಪುರದಲ್ಲಿ ಇವರಿಬ್ಬರ ವಿವಾಹ ನೆರವೇರಿದ್ದು, ವಿವಾಹದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿ, ಹಲವು ಗಣ್ಯರು ಭಾಗವಹಿಸಿದ್ದರು.

ಸೆಪ್ಟೆಂಬರ್‌ನಲ್ಲಿ ಇವರಿಬ್ಬರ ನಿಶ್ಚಿತಾರ್ಥವಾಗಿದ್ದು, ರಾಗಕ್ಕೆ ಪದ ಸೇರಿದೆ, ಬದಕೊಂದು ಹಾಡಾಗಿದೆ ಎಂದು ಬರೆದು, ಬಾಳಸಂಗಾತಿಯನ್ನು ಪ್ರಮೋದ್ ಪರಿಚಯಿಸಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸ್ಯಾಂಡಲ್‌ವುಡ್ ಗಣ್ಯರು ಇವರಿಬ್ಬರಿಗೆ ಶುಭಕೋರಿದ್ದಾರೆ.

About The Author