ಪದೇ ಪದೇ ನಕಾರಾತ್ಮಕ ವಿಷಯವಾಗಿಯೇ ಚರ್ಚೆಯಲ್ಲಿರುವ ವ್ಯಕ್ತಿ ಅಂದ್ರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. ಈತ ಪ್ರತಿದಿನ ಒಂದಲ್ಲ ಒಂದಲ್ಲ, ಇಲ್ಲಸಲ್ಲದ ಹೇಳಿಕೆ ಕೊಟ್ಟು, ಸುದ್ದಿಯಾಗ್ತಾನೇ ಇರ್ತಾನೆ. ಆದ್ರೆ ಇಂದು ಈತನ ಬಗ್ಗೆ ಇನ್ನೊಬ್ಬರು ಹೇಳಿಕೆಯನ್ನ ನೀಡಿದ್ದಾರೆ. ‘ಇಮ್ರಾನ್ ಖಾನ್ ಓರ್ವ ಅಂತರಾಷ್ಟ್ರೀಯ ಭಿಕ್ಷುಕ’ ಅಂತಾ, ಜಮಾಯತ್- ಎ- ಇಸ್ಲಾಮಿ ಚೀಫ್ ಆಗಿರುವ ಸಿರಾಜುಲ್ ಹಕ್ ಹೇಳಿಕೆ ನೀಡಿದ್ದಾನೆ.
ಸ್ಥಳೀಯ ಸಂಸ್ಥೆಯ ಚುನಾವಣೆಯ ಸಿದ್ಧತೆ ವೇಳೆ ಭಾಷಣ ಮಾಡುತ್ತಿದ್ದ ಸಿರಾಜ್- ಉಲ್- ಹಕ್ ಈ ಬಗ್ಗೆ ಮಾತನಾಡಿದ್ದು, ಇಮ್ರಾನ್ ಖಾನ್ ಅವರ ನಿರ್ಗಮನ ಪಾಕಿಸ್ತಾನದ ಬಿಕ್ಕಟ್ಟಿಗೆ ಏಕೈಕ ಉತ್ತರವಾಗಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ, ಪಾಕಿಸ್ತಾನದ ಒಪ್ಪಂದದ ಪರಿಣಾಮವಾಗಿ, ಇಮ್ರಾನ್ ಖಾನ್ ಅಂತರಾಷ್ಟ್ರೀಯ ಭಿಕ್ಷುಕನಾಗಿದ್ದಾನೆಂದು ಹೇಳಿದ್ದಾರೆ.
ಅಲ್ಲದೇ, ಈ ದೇಶದಲ್ಲಿ ರಾಜಕೀಯದಿಂದ ಪ್ಲಸ್ ಮೈನಸ್ ಗಳಿಗೆ ಜಾಗವಿಲ್ಲ. ಏಕೆಂದರೆ ಇಮ್ರಾನ್ ಖಾನ್ ನಿರ್ಗಮನವೇ ಇವೆಲ್ಲದಕ್ಕೂ ಉತ್ತರ. ಸರ್ಕಾರ ಮತ್ತೆ ಪೆಟ್ರೋಲಿಯಂ ಬೆಲೆ ಹೆಚ್ಚಿಸಿದೆ. ಹಣದುಬ್ಬರದಿಂದ ಜನ ಕಂಗಾಲಾಗಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ವಿರುದ್ಧ ಮತ್ತು ಪಾಕ್ ಸರ್ಕಾರದ ವಿರುದ್ಧ, ಜಮಾಯತ್- ಎ- ಇಸ್ಲಾಮಿ ಚೀಫ್ ಆಗಿರುವ ಸಿರಾಜುಲ್ ಹಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.