Wednesday, June 12, 2024

Latest Posts

ಧಾರವಾಡದ ಕನಕೂರಿನಲ್ಲಿ ಅಕ್ಕನ ಮಗಳ ಮೇಲೆ ಪಂ.ಸದಸ್ಯ ಹಲ್ಲೆ

- Advertisement -

Hubli News: ಸಾರ್ವಜನಿಕರಿಗೆ ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳಬೇಕಾಗಿದ್ದ ಪಂಚಾಯತಿ ಸದಸ್ಯನೊಬ್ಬ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಕ್ಕನ ಮಗಳ ಮೇಲೆ ಹಲ್ಲೆ ಮಾಡಿರುವ ಘಟನೆ, ಧಾರವಾಡದ ಕನಕೂರಿನಲ್ಲಿ ನಡೆದಿದ್ದು, ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಸೆರೆಯಾಗಿದೆ.

ಧಾರವಾಡ ತಾಲೂಕಿನ ಕನಕೂರು ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಪವಾರ ಹಲ್ಲೆ ಮಾಡಿದ ಪಂಚಾಯತಿ ಸದಸ್ಯನಾಗಿದ್ದಾನೆ. ಪಂಚಾಯತಿ ಸದಸ್ಯನ ಸಂಬಂಧಿ ರಾಮಚಂದ್ರ ಕೂಡ ಯುವತಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಇನ್ನೂ ಪಂಚಾಯತಿ ಸದಸ್ಯ ಹಾಗೂ ಸಂಬಂಧಿ ತಮ್ಮ ಅಕ್ಕನ ಮಗಳ ಜೊತೆಗೆ ಯಾವ ರೀತಿಯ ನಡೆದುಕೊಂಡಿದ್ದಾರೆ ಎಂಬುವುದನ್ನು ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ ಆಸ್ತಿ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ಈ‌ ಘಟನೆ ನಡೆದಿದೆಯಂತೆ. ಸಾರ್ವಜನಿಕ ನಿಬಿಡ ಪ್ರದೇಶದಲ್ಲಿ ಮಹಿಳೆಯ ಜೊತೆಗೆ ಹೀಗೆ ನಡೆದುಕೊಳ್ಳವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದ, ಹೊಲದ ಮೇಲೆ ಕೇಸ್ ಇದ್ರೂ ಸಹ ಮಹಿಳೆ ಮೇಲೆ ದೌರ್ಜನ್ಯ ಮಾಡಿರುವುದು ಮಾತ್ರ ತಪ್ಪು ಸಾರ್ವಜನಿಕರು ಅಭಿಪ್ರಾಯವಾಗಿದೆ.‌

ಪ್ರಜ್ವಲ್ ರೇವಣ್ಣ ಹಾಸಿಗೆ ದಿಂಬು ಹೊತ್ತೊಯ್ದ ಎಸ್‌ಐಟಿ ತಂಡ

Expressionless ಆ್ಯಕ್ಟಿಂಗ್‌ನಿಂದಾಗಿ ಟ್ರೋಲ್ ಆಗುತ್ತಿದ್ದಾರೆ ಹೀರಾಮಂಡಿ ನಟಿ ಶರ್ಮಿನ್ ಸೇಗಲ್

ಪಕ್ಕದ ಮನೆಯಿಂದ ಬರುವ ಹೆಗ್ಗಣಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ ವ್ಯಕ್ತಿ

- Advertisement -

Latest Posts

Don't Miss