Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರಜ್ವಲ್ ಕಾನೂನಾತ್ಮಕವಾಗಿ ಬಂದು ಶರಣಾಗಿದ್ದಾನೆ. ಎಸ್ ಐಟಿ ಕಟ್ಟಬದ್ಧವಾಗಿ ತನಿಖೆ ಮಾಡಬೇಕು ಎಂಬುವುದು ಜನ ಇಚ್ಚೆಯಾಗಿದೆ. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಈ ಕೇಸ್ ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಈ ಇದರಲ್ಲಿ ಪೆನ್ಡ್ರೈವ ಇದ್ದವರ ಅರೆಸ್ಟ್ ಆಯಿತು. ಈ ಕೇಸನಲ್ಲಿ ರಾಜಕಾರಣ ಬೆರತಿದೆ. ಇದರಲ್ಲಿ ಎರಡು ಭಾಗವಾವಿದೆ. ಘಟನೆಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸಬೇಕು ಇನ್ನೊಂದು ಇದನ್ನು ಪ್ರಚಾರಕ್ಕೆ ಬಳಸಿಕೊಂಡಿರುವುದು ಅಪರಾಧ. ಇದನ್ನು ಪ್ರಚಾರಕೆ ಬಳಸಿಕೊಂಡಿರುವುದರ ಬಗ್ಗೆಯೂ ತನಿಖೆಯಾಗಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಹಾಗೂ ಅಧೀಕ್ಷಕ ಚಂದ್ರಶೇಖರ ಆತ್ಮಹತ್ಯೆ ಪ್ರಕರಣ ವಿಚಾರದ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚಂದ್ರಶೇಖರ ಪ್ರಕರಣ ಸಿಬಿಐಗೆ ನೀಡುವುಕ್ಕೆ ಯೋಗ್ಯವಾಗಿದೆ. ವಾಲ್ಮೀಕಿ ನಿಗಮದಲ್ಲಿನ ಭ್ರಷ್ಟಾಚಾರದಲ್ಲಿ ಬ್ಯಾಂಕ್ ಇನ್ವಾಲಮೇಟ್ ಇದೆ. 10 ಕೋಟಿಗೆ ಹೆಚ್ಚಿರುವ ಪ್ರಕರಣವಾಗಿರುವುದರಿಂದ ಸಿಬಿಐಗೆ ನೀಡಬೇಕಾಗುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ಬಿ ನಾಗೇಂದ್ರ ರಾಜೀನಾಮೆಗೆ ಒತ್ತಾಯ ವಿಚಾರದ ಬಗ್ಗೆ ಮಾತನಾಡಿರುವ ಬೊಮ್ಮಾಯಿ, ಬಿ. ನಾಂಗೇಂದ್ರ ವಿಚಾರ ಸರ್ಕಾರದ ನೈತಿಕತೆಯ ಪ್ರಶ್ನೆ ಇದೆ. ಈ ಹಿಂದೆ ದೊಡ್ಡ ದೊಡ್ಡದಾಗಿ ನೈತಿಕತೆಯ ಕಥೆ ಹೇಳುತ್ತಿದ್ದರು. ವಿಪಕ್ಷ ಸ್ಥಾನದಲ್ಲಿದ್ದಾಗ ನೈತಿಕೆ ಪಾಠ ಮಾಡುತ್ತಿದ್ದವರು ಈಗ ಸಿಎಂ ಡಿಸಿಎಂ ಆಗಿದ್ದಾರೆ. ಇದರಲ್ಲಿ ಅವರ ಸರ್ಕಾರದ ಪ್ರಾಮಾಣಿಕ ಪ್ರಶ್ನೆ ಇದೆ. ಅವರು ಪ್ರಾಮಾಣಿಕತೆ ಮುಖ್ಯವೋ ಅಥವಾ ಮಂತ್ರಿ ಮುಖ್ಯವೋ ಎನ್ನುವುದನ್ನು ನೋಡೋಣ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ತಿಳಿಸುತ್ತದೆ ಯಾವ ಕಡೆ ನಾವು ಎನ್ನುವುದನ್ನು ಎಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾನೂನು ತನ್ನದೇ ಆದ ಪ್ರಕ್ರಿಯೆ ನಡೆಸಲಿದೆ . ಕಾನೂನಾತ್ಮಕವಾಗಿ ಪ್ರಜ್ವಲ್ ರೇವಣ್ಣ ಶರಣಾಗಿದ್ದಾನೆ . ಎಸ್ ಐ ಟಿ ಯವರು ಕಟ್ಟಿಬದ್ಧವಾಗಿ ತನಿಖೆ ಮಾಡಬೇಕು. ಪ್ರಕರಣದಲ್ಲಿನ ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿಯೇ ತನಿಖೆ ನಡೆಯಬೇಕೆಂಬುದು ರಾಜ್ಯದ ಜನರ ಇಚ್ಛೆಯಾಗಿದೆ ಎಂದರು.
ಪ್ರಜ್ವಲ್ ಪ್ರಕರಣ ರಾಜಕೀಯ ಪ್ರೇರಿತ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣ ಯಾವ ರೀತಿ ಬೆಳಕಿಗೆ ಬಂದಿತು . ಯಾರು ಫೆನ್ ಡ್ರೈವ್ ಹಂಚಿಕೆ ಮಾಡಿದರು, ಯಾಕೆ ಮಾಡಿದರು . ಇದೆಲ್ಲವನ್ನು ನೋಡಿದಾಗ ಇದರಲ್ಲಿ ರಾಜಕಾರಣ ಬೆರೆತಿರೋದು ಸ್ಪಷ್ಟ. ಘಟನೆಯ ಸಂತ್ರಸ್ತರಿಗೆ ನ್ಯಾಯ ಕೊಡುವುದು ಒಂದು ಭಾಗ. ಇಂತಹ ವಿಚಾರಗಳನ್ನು ಪ್ರಚಾರ ಮಾಡದು ಕಾನೂನು ವಿರುದ್ಧ ಆ ಮಗ್ಗಲಿನಲ್ಲಿಯೂ ಎಸ್ ಐ ಟಿ ತನಿಖೆ ಮಾಡಬೇಕು. ನಿಷ್ಪಕ್ಷಪಾತ ತನಿಖೆ ಆಗುತ್ತೆ ಅನ್ನೋದನ್ನ ಕಾದು ನೋಡಬೇಕು ಎಂದರು. ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಿಬಿಐ ತನಿಖೆಗೆ ಯೋಗ್ಯವಾದ ಪ್ರಕರಣ ಎಂದರು.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಿಂಹ ಘರ್ಜನೆ ಮಾಡುತ್ತಿರುವ ನೂತನ ಡಿ.ಸಿ.ಪಿ.ಕುಶಾಲ್ ಚೌಕ್ಸೆ
ಜೂನ್ 2ರಿಂದ ಜೂನ್ 5ರವರೆಗೆ ಕೃ.ವಿ.ವಿ ಮತ ಎಣಿಕೆ ಕೇಂದ್ರದ ಸುತ್ತ ಪ್ರತಿಬಂಧಕಾಜ್ಞೆ ಜಾರಿ

