Political News: ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅತ್ತಿಗೆ ಸೀತಾ ಸೊರೆನ್ ಜೆಎಂಎಂ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಸೀತಾ ಸೊರೆನ್, ತಮ್ಮ ಪತಿ ದುರ್ಗಾ ಸುೊರೆನ್ ನಿಧನದ ಬಳಿಕ, ಪಕ್ಷ ಸರಿಯಾದ ರೀತಿಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ. ಈ ಕಾರಣ್ಕಕಾಗಿ ಜೆಎಂಎಂ ತೊರೆದು, ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೇ, ಸೀತಾ ಸೊರೆನ್ ಹೇಳುವ ಪ್ರಕಾರ, ನನ್ನ ಮತ್ತು ನನ್ನ ಕುಟುಂಬ ವಿರುದ್ಧ ಪಕ್ಷದಿಂದ ಪಿತೂರಿ ನಡೆದಿದ್ದು, ಇದರ ಅರಿವಾದ ತಕ್ಷಣ ನಾನು ಪಕ್ಷ ಬಿಡಲು ನಿರ್ಧರಸಿದ್ದೆ. ಹಾಗಾಗಿ ನಾನು ರಾಜೀನಾಮೆ ನೀಡಿದ್ದೇನೆಂದು ಹೇಳಿದ್ದಾರೆ.
2012ರಲ್ಲಿ ಚುನಾವಣಾ ಮತದಾನಕ್ಕಾಗಿ ಹಣ ಪಡೆದ ಆರೋಪ ಸಾಬೀತಾಗಿದ್ದು, ಸೀತಾ ಸೊರೆನ್ ಜೈಲು ಪಾಲಾಗಿದ್ದರು. ಬಳಿಕ 2014ರಲ್ಲಿ ಜಾಮಾ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ನಿಂತು ಗೆದ್ದಿದ್ದರು. 2019ರಲ್ಲಿ ಇದೇ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಇದೀಗ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..
ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?