Political News: ಹುಬ್ಬಳ್ಳಿ: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಶಿವಾನಂದ ಪಾಟೀಲ್ ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಾನಂದ ಪಾಟೀಲ್ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದು, ದೊಡ್ಡ ಸ್ಥಾನದಲ್ಲಿದ್ದವರು ಹೀಗೆ ಮಾತನಾಡಬಾರದು ಎಂದರು.
ರೈತರಿಗೆ ಮಳೆ ಬರಬೇಕು. ಬೆಳೆ ಸಮೃದ್ಧವಾಗಿ ಬೇಕು. ಆಗ ಅವರು ಯಾರ ಹತ್ತಿರವೂ ಕೈಚಾಚುವುದಿಲ್ಲ ಎಂದು ಅವರು ನುಡಿದರು.
ವೀರಶೈವ ಸಮಾವೇಶದಲ್ಲಿ ಜಾತಿ ಗಣತಿ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವೈಜ್ಞಾನಿಕ ಜಾತಿ ಗಣತಿ ಆಗಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ ಎಂದರು.
ಸಿದ್ದರಾಮಯ್ಯ ಮುಗ್ಧ ಅಲ್ಲ, ಧೂರ್ತರಿದ್ದಾರೆ – ಕೇಂದ್ರ ಸಚಿವ ಜೋಶಿ ಕಿಡಿ
ಬಿ.ಕೆ.ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ
ಪ್ರತ್ಯೇಕ ಧರ್ಮದ ಹೆಸರಲ್ಲಿ ಒಡೆಯುವಂಥ ಕೆಲಸ ಮಾಡಬೇಡಿ: ಜಗದೀಶ್ ಶೆಟ್ಟರ್




